ಎಲೆಕ್ಟ್ರಿಕ್ ವಾಹನ ನೀತಿ: ದ್ವಿಚಕ್ರ ವಾಹನದ ಮೇಲೆ 30 ಸಾವಿರ ಮತ್ತು ಕಾರುಗಳಿಗೆ 1.5 ಲಕ್ಷದವರೆಗೆ ಸಬ್ಸಿಡಿ..!
ಇನ್ನು ಇದೇ ಯೋಜನೆಯಡಿಯಲ್ಲಿ ಸ್ಕ್ರ್ಯಾಪ್ ನೀತಿಯನ್ನು ಸಹ ಸೇರಿಸಲಾಗಿದ್ದು, ಅಂದರೆ ನೀವು ಹಳೆಯ ಕಾರನ್ನು ನೀಡುವ ಮೂಲಕ ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೆ, ನಿಮಗೆ ಸ್ವಲ್ಪ ಆರ್ಥಿಕ ಲಾಭವೂ ಸಿಗಲಿದೆ.
News18 Kannada | August 10, 2020, 5:41 PM IST
1/ 8
ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಪ್ರೋತ್ಸಾಹಕ್ಕೆ ಭಾರೀ ಒತ್ತು ನೀಡಿದೆ. ದ್ವಿಚಕ್ರ ಅಥವಾ ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಮೇಲೆ 30 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ದೆಹಲಿ ಸರ್ಕಾರ ಘೋಷಿಸಿದೆ.
2/ 8
ಅಷ್ಟೇ ಅಲ್ಲದೆ ಫೋರ್ ವೀಲರ್ ವಾಹನಗಳಿಗೆ 1.5 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಈ ಮೂಲಕ ದೆಹಲಿ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ.
3/ 8
ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸುವ ಗುರಿ ಹೊಂದಿರುವುದಾಗಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದರು. ಇದಕ್ಕಾಗಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತರಲು ಇವಿ ಸೆಲ್ ರೂಪಿಸಲಾಗುವುದು. ಇದರ ಅಡಿಯಲ್ಲಿ ನೋಂದಣಿ ಶುಲ್ಕವನ್ನು ಮತ್ತು ರಸ್ತೆ ತೆರಿಗೆಯನ್ನು ಸಹ ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
4/ 8
ಹಾಗೆಯೇ 1 ವರ್ಷದೊಳಗೆ ದೆಹಲಿಯಲ್ಲಿ 200 ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮೂಲಕ 3 ಕಿಲೋಮೀಟರ್ನಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲಾಗುತ್ತದೆ. ಇದರಿಂದ ನಿಮ್ಮ ಕಾರಿಗೆ ಚಾರ್ಜಿಂಗ್ ಸುಲಭವಾಗಲಿದೆ.
5/ 8
ಇದರೊಂದಿಗೆ ರಾಜ್ಯ ವಿದ್ಯುತ್ ವಾಹನ ಮಂಡಳಿಯನ್ನು ರಚಿಸಲಾಗುವುದಲ್ಲದೆ, ಈ ಖಾತೆಯು ರಾಜ್ಯದ ಸಾರಿಗೆ ಸಚಿವರು ನಿಭಾಯಿಸಲಿದ್ದಾರೆ. ಹಾಗೆಯೇ ರಸ್ತೆ ಸಾರಿಗೆ ಇಲಾಖೆಯ ಅಡಿಯಲ್ಲೇ ಇವಿ ಸೆಲ್ ರೂಪಿಸುವುದರಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
6/ 8
ಇನ್ನು ಇದೇ ಯೋಜನೆಯಡಿಯಲ್ಲಿ ಸ್ಕ್ರ್ಯಾಪ್ ನೀತಿಯನ್ನು ಸಹ ಸೇರಿಸಲಾಗಿದ್ದು, ಅಂದರೆ ನೀವು ಹಳೆಯ ಕಾರನ್ನು ನೀಡುವ ಮೂಲಕ ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೆ, ನಿಮಗೆ ಸ್ವಲ್ಪ ಆರ್ಥಿಕ ಲಾಭವೂ ಸಿಗಲಿದೆ. ಇಲ್ಲಿ ಪ್ರತಿ ವಾಹನದ ಮೇಲಿನ ದರ ನಿಗದಿ ವಿಭಿನ್ನವಾಗಿರುತ್ತದೆ.
7/ 8
ದೆಹಲಿಯಲ್ಲಿ ಎಲೆಕ್ಟ್ರಿಕ್ ಆಟೋಗಳಿಗಾಗಿ ಓಪನ್ ಪರ್ಮಿಟ್ ವ್ಯವಸ್ಥೆಯು ಜಿರೋ ಎಮಿಷನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಗ್ರೀನ್ ಮೊಬೈಲಿಟಿಗೆ ಉತ್ತಮಗೊಳಿಸಲಿದೆ. ಇನ್ನು ತೈಲ ಆಮದನ್ನು ಕಡಿಮೆ ಮಾಡಿ, ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳತ್ತ ಜನರನ್ನು ಸೆಳೆಯಲು ಕೂಡ ಚಿಂತಿಸಲಾಗಿದೆ.
8/ 8
ಒಟ್ಟಿನಲ್ಲಿ ವಾಯು ಮಾಲಿನ್ಯದಿಂದ ಪ್ರತಿವರ್ಷ ಸಂಕಷ್ಟಕ್ಕೀಡಾಗುತ್ತಿರುವ ದೆಹಲಿ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸುವ ಮೂಲಕ ಪರಿಸರವನ್ನು ಕಾಪಾಡಲು ದೆಹಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ.