ಇಂತಹ ಹ್ಯಾಕಿಂಗ್ಗಳನ್ನು ಗಮನದಲ್ಲಿರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರ್ಷಗಳ ಹಿಂದೆ ಮ್ಯಾಗ್ನೆಟಿಕ್ ಸ್ಟ್ರಿಪ್ ಬದಲಿಗೆ ಇಎಂವಿ ಆಧಾರಿತ ಚಿಪ್ ಕಾರ್ಡ್ಗಳನ್ನು ಬಳಸುವಂತೆ ಸೂಚಿಸಿತ್ತು. ಇದೀಗ ಮತ್ತೆ ಭಾರತೀಯರ ಡೆಬಿಟ್/ಕ್ರೆಡಿಟ್ ಕಾರ್ಡುಗಳ ಮಾಹಿತಿ ಸೋರಿಕೆಯಾಗಿರುವ ಸುದ್ದಿ ಇದೀಗ ಬ್ಯಾಂಕ್ ಖಾತೆದಾರರ ಹಾಗೂ ಬ್ಯಾಂಕುಗಳ ಚಿಂತೆಗೆ ಕಾರಣವಾಗಿದೆ. ಮಾಹಿತಿ ಸೋರಿಕೆಯಾಗಿದ್ದು ಹೇಗೆ?
13 ಲಕ್ಷದಷ್ಟು ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿದೆ ಎಂದು ಮಾತ್ರ ತಿಳಿಸಲಾಗಿದೆ. ಇದರ ಹೊರತಾಗಿ ಹ್ಯಾಕರುಗಳು ಯಾವ ರೀತಿಯಾಗಿ ಹ್ಯಾಕ್ ಮಾಡಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಒಂದು ಮೂಲದ ಪ್ರಕಾರ, ಎಟಿಎಂ ಮತ್ತು ಪಿಒಎಸ್ (ಅಂಗಡಿಗಳಲ್ಲಿ ಸ್ವೈಪ್ ಮಾಡುವ ಮಷಿನ್ಗಳು) ಹ್ಯಾಕ್ ಮಾಡುವ ಮೂಲಕ ಖಾತೆದಾರರ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂದು ಹೇಳಲಾಗಿದೆ.