Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

Data Leak: ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಮಾಹಿತಿಗೆ ಯಾವುದೇ ಭದ್ರತೆಯೇ ಇಲ್ಲವೆಂಬಂತಾಗಿದೆ. ಬಳಕೆದಾರರ ಡೇಟಾವನ್ನು ಸಂಗ್ರಹಿಸಲು ಸೈಬರ್ ಅಪರಾಧಿಗಳು ಒಂದಲ್ಲ ಒಂದು ರೂಪದಲ್ಲಿ ಹೊಂಚು ಹಾಕುತ್ತಿರುತ್ತಾರೆ. ಇತ್ತೀಚೆಗಷ್ಟೇ ಟ್ವಿಟರ್​ನ ಡೇಟಾ ಹ್ಯಾಕ್​ ಆಗಿತ್ತು ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಂದು ಆ್ಯಪ್​ನ ಡೇಟಾ ಸಹ ಲೀಕ್ ಆಗಿದೆ. ಈ ಆ್ಯಪ್​ ನಿಮ್ಮ ಮೊಬೈಲ್​ನಲ್ಲೂ ಇದ್ರೆ ಇಂದೇ ಡಿಲೀಟ್ ಮಾಡಿ.

First published:

  • 18

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಮಾಹಿತಿಗೆ ಯಾವುದೇ ಭದ್ರತೆ ಇಲ್ಲ. ಬಳಕೆದಾರರ ಡೇಟಾವನ್ನು ಸಂಗ್ರಹಿಸಲು ಸೈಬರ್ ಅಪರಾಧಿಗಳು ಒಂದಲ್ಲ ಒಂದು ರೂಪದಲ್ಲಿ ಹೊಂಚು ಹಾಕುತ್ತಿರುತ್ತಾರೆ. ಇತ್ತೀಚೆಗಷ್ಟೇ ಟ್ವಿಟರ್ ಡೇಟಾ ಸೋರಿಕೆಯಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಂದು ಆ್ಯಪ್​ನ ಡೇಟಾ ಲೀಕ್ ಆಗಿದೆ ಎಂದು ವರದಿಯಾಗಿದೆ. Oytalk ಎಂಬ ಅಪ್ಲಿಕೇಶನ್‌ ನಿಮ್ಮ ಫೋನ್‌ನಲ್ಲಿಯೂ ಇರಬಹುದು. ಈ ಆ್ಯಪ್​ ನಿಮ್ಮಲ್ಲಿದ್ದರೆ ಇಂದೇ ಡಿಲೀಟ್ ಮಾಡಿ.

    MORE
    GALLERIES

  • 28

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ನಿಮ್ಮ ಫೋನ್‌ನ IMEI ಸಂಖ್ಯೆ ಸೇರಿದಂತೆ ನಿಮ್ಮ ಪ್ರಮುಖ ಡೇಟಾ ಈಗಾಗಲೇ ಸೈಬರ್ ಅಪರಾಧಿಗಳ ಕೈಗೆ ಸಿಕ್ಕಿದೆ. ಸೈಬರ್ ಅಪರಾಧಿಗಳು ನಿಮ್ಮ ಮಾಹಿತಿಯನ್ನು ಯಾವಾಗ ಮತ್ತು ಹೇಗೆ ಬಳಸುತ್ತಾರೆ ಎಂದು ಎಂದಿಗೂ ತಿಳಿದಿಲ್ಲ. ಇನ್ಮುಂದೆ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ. ನಿಮ್ಮ ಫೋನ್‌ನಲ್ಲಿ 'OyeTalk' ಅಪ್ಲಿಕೇಶನ್ ಇದ್ದರೆ, ತಕ್ಷಣ ಅದನ್ನು ಡಿಲೀಟ್ ಮಾಡಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

    MORE
    GALLERIES

  • 38

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ವಾಯ್ಸ್​​ ಚಾಟ್​ ಅಪ್ಲಿಕೇಶನ್​: ಇದು ನೋಡಲು ಧ್ವನಿ ಚಾಟ್ ಅಪ್ಲಿಕೇಶನ್ ಆಗಿದೆ. ಈ ಆ್ಯಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಹಲವರು ಡೌನ್‌ಲೋಡ್ ಮಾಡಲು ಪ್ರಾರಂಭಿಸಿದ್ದಾರೆ. ಈ ಆ್ಯಪ್​ ಅನ್ನು ಅತೀ ಕಡಿಮೆ ಅವಧಿಯಲ್ಲಿ 5 ಮಿಲಿಯನ್ ಜನರು ಡೌನ್‌ಲೋಡ್‌ಗಳನ್ನು ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಜನಪ್ರಿಯ ಸೈಬರ್ ಮಾಧ್ಯಮ ವೆಬ್‌ಸೈಟ್ 'ಸೈಬರ್‌ನ್ಯೂಸ್' OyeTalk ಅಪ್ಲಿಕೇಶನ್‌ನಲ್ಲಿನ ಲೋಪದೋಷಗಳ ಬಗ್ಗೆ ಲೇಖನವನ್ನು ಪ್ರಕಟಿಸಿದೆ.

    MORE
    GALLERIES

  • 48

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ಈ ಆ್ಯಪ್​ ಬಳಕೆದಾರರ ಖಾಸಗಿ ಸಂಭಾಷಣೆಗಳು, ಪ್ರಮುಖ ಡೇಟಾ, ಫೋನ್ ಐಎಂಇಐ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳನ್ನು ಕದಿಯುತ್ತದೆ ಎಂದು ಸೈಬರ್​​ ಕ್ರೈಮ್​ ತಂಡ ಬಹಿರಂಗಪಡಿಸಿದೆ. ಈ ಆ್ಯಪ್ ಹೊಂದಿರುವ ಬಳಕೆದಾರರ ಮಾಹಿತಿಯು ಈಗಾಗಲೇ ಸೈಬರ್ ಅಪರಾಧಿಗಳ ಕೈ ಸೇರಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. 

    MORE
    GALLERIES

  • 58

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    'Oytalk' ಅಪ್ಲಿಕೇಶನ್ Google ನ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ವೇದಿಕೆ 'Firebase' ಅನ್ನು ಬಳಸುತ್ತದೆ. ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹವಾಗಿರುವ ಡೇಟಾ ಸೋರಿಕೆಯಾಗಿದೆ ಎಂದು ಸೈಬರ್‌ನ್ಯೂಸ್ ಹೇಳಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಎನ್‌ಕ್ರಿಪ್ಟ್ ಮಾಡದ ಚಾಟ್‌ಗಳು, ಬಳಕೆದಾರರ ಹೆಸರುಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಫೋನ್‌ನ IMEI ಸಂಖ್ಯೆಗಳು ಸೋರಿಕೆಯಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 68

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ಒಂದು ವೇಳೆ IMEI ಸಂಖ್ಯೆಯು ಸೈಬರ್ ಅಪರಾಧಿಗಳಿಗೆ ಸಿಕ್ಕಿಬಿದ್ದರೆ, ಅದು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಕಾಲಕಾಲಕ್ಕೆ ನಮ್ಮ ಸಾಧನವನ್ನು ಟ್ರ್ಯಾಕ್ ಮಾಡಲು ಇದು ಅವರಿಗೆ ಅನುವು ಮಾಡಿಕೊಡುತ್ತದೆ. ಇದರಿಂದ ಸೈಬರ್ ಅಪರಾಧಿಗಳು ನಾವು ಫೋನ್‌ನಲ್ಲಿ ಮಾಡುವ ಎಲ್ಲವನ್ನೂ ತಿಳಿದುಕೊಳ್ಳುವ ಸಾಧ್ಯತೆಯಿದೆ.

    MORE
    GALLERIES

  • 78

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ಇನ್ನು ಈ ಆ್ಯಪ್ ನಿರ್ವಾಹಕರು ಈ ಸಮಸ್ಯೆಗೆ ಇನ್ನೂ ಸ್ಪಂದಿಸಿಲ್ಲ. API ಕೀಗಳನ್ನು ಒಳಗೊಂಡಂತೆ ಹೆಚ್ಚಿನ ಬಳಕೆದಾರರ ಡೇಟಾವನ್ನು ಹಾಗೆಯೇ ಬಿಡಲಾಗಿದೆ ಎಂದು ಸೈಬರ್ ನ್ಯೂಸ್ ಕಂಡುಹಿಡಿದಿದೆ. ಇದರಿಂದಾಗಿ ಸೈಬರ್ ವಂಚಕರಿಗೆ ಹ್ಯಾಕ್ ಮಾಡಲು ಸುಲಭವಾಯಿತು ಎಂದು ಸಂಶೋಧಕರು ಹೇಳಿದ್ದಾರೆ. ಇದು ಆ್ಯಪ್​ ಡೆವಲಪರ್‌ಗಳ ಸೋಮಾರಿತನದ ಪುರಾವೆಯಾಗಿದೆ ಎಂದು ಸೈಬರ್ ನ್ಯೂಸ್ ಹೇಳಿಕೊಂಡಿದೆ. ಆದಾಗ್ಯೂ, ಕಂಪನಿಯು ಇದೇ ಕುರಿತು ಡೆವಲಪರ್‌ಗಳನ್ನು ಸಂಪರ್ಕಿಸಿದಾಗ ಅವರು ಅವರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ ಎಂದು ಲೇಖನವು ಒತ್ತಿಹೇಳಿದೆ.

    MORE
    GALLERIES

  • 88

    Data Leak: ಒಂದೇ ಆ್ಯಪ್​ನಿಂದ 50 ಲಕ್ಷ ಬಳಕೆದಾರರ ಡೇಟಾ ಲೀಕ್! ನಿಮ್ಮ ಮೊಬೈಲ್​ನಲ್ಲೂ ಇರಬಹುದು ಎಚ್ಚರ

    ಗೂಗಲ್ ನೋಡುವುದಿಲ್ಲವೇ?: ಸಾಮಾನ್ಯವಾಗಿ Google ನ ಭದ್ರತಾ ಕ್ರಮಗಳು ದೃಢವಾಗಿರುತ್ತವೆ. ಅಪ್ಲಿಕೇಶನ್‌ನಲ್ಲಿನ ಲೋಪದೋಷವನ್ನು ಗುರುತಿಸುವುದು ಮತ್ತು ಸರಿಪಡಿಸುವುದು ಮತ್ತು ಡೇಟಾಗೆ ಬಲವಾದ ಭದ್ರತೆಯನ್ನು ಒದಗಿಸುವಂತಹ ಭದ್ರತಾ ಕ್ರಮಗಳನ್ನು Google ನೋಡಿಕೊಳ್ಳುತ್ತದೆ. ಆದರೆ, ‘OyeTalk’ ವಿಚಾರದಲ್ಲಿ ಗೂಗಲ್ ಸರಿಯಾದ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲವೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    MORE
    GALLERIES