ಸ್ಮಾರ್ಟ್ ಫೋನ್ ಗಳಲ್ಲಿನ ಮಾಲ್ ವೇರ್ (Smartphone Malware) ಮತ್ತೊಮ್ಮೆ ಸಂಚಲನ ಮೂಡಿಸುತ್ತಿದೆ. ಸೈಬರ್ ಭದ್ರತಾ ತಜ್ಞರು 200 ಕ್ಕೂ ಹೆಚ್ಚು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳನ್ನು ಅಪಾಯಕಾರಿ ಎಂದು ಗುರುತಿಸಿದ್ದಾರೆ. ಈ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡುತ್ತವೆ ಮತ್ತು ನಿಮ್ಮ ಬ್ಯಾಂಕ್ ಖಾತೆಗಳನ್ನು ಸಹ ಪ್ರವೇಶಿಸುತ್ತವೆ.
ಈ ಅಪ್ಲಿಕೇಶನ್‌ಗಳನ್ನು ಥೈಲ್ಯಾಂಡ್‌ನ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಸಚಿವಾಲಯ (DES), ನ್ಯಾಷನಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ (NCSA) ಗುರುತಿಸಿದೆ. ಈ ಸಂಸ್ಥೆಗಳು 203 ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಗುರುತಿಸಿವೆ ಮತ್ತು ಅವುಗಳನ್ನು ತೆಗೆದುಹಾಕಲು ಗೂಗಲ್ ಮತ್ತು ಆ್ಯಪಲ್ಗೆ ಆದೇಶ ನೀಡಿದೆ. ಈ ಅಪ್ಲಿಕೇಶನ್‌ಗಳನ್ನು ಲಕ್ಷಾಂತರ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಥಾಯ್ಲೆಂಡ್‌ನ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಸಚಿವಾಲಯ, ನ್ಯಾಷನಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಗುರುತಿಸಿರುವ ಅಪ್ಲಿಕೇಶನ್‌ಗಳಲ್ಲಿ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳು ಸೇರಿವೆ. 4K Pro Camera, Beat Maker Pro, Art Filters, Blue Scanner, Chat SMS, Cool Messages, Easy PDF Scanner, Frames, Funny Caller, Hi Text SMS, Midget Pro, Menu Maker, Paper Doc Scanner ಮುಂತಾದ ಆ್ಯಪ್‌ಗಳಿವೆ.
ನೀವು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ನಿಮ್ಮ ಮೊಬೈಲ್‌ನಿಂದ ಅವುಗಳನ್ನು ಈಗಲೇ ಡಿಲೀಟ್ ಮಾಡಿ. ನಿಮ್ಮ ಮೊಬೈಲ್‌ನಲ್ಲಿ ಈ ಮಾಲ್‌ವೇರ್ ಇದ್ದರೆ ಬ್ಯಾಟರಿ ಬೇಗನೆ ಖಾಲಿಯಾಗುವುದು ಅಥವಾ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ನಿಧಾನವಾಗುತ್ತದೆ. ಹೀಗೆ ಮುಂತಾದ ಬದಲಾವಣೆಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಆಗುತ್ತದೆ. ಈ ಕೆಲವು ಆ್ಯಪ್ಗಳ ಮೂಲಕ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ.
ನಿಮ್ಮ ಫೋನ್ ಅನ್ನು ಹ್ಯಾಕರ್ಸ್ ಪ್ರವೇಶಿಸುವ ಮೂಲಕ ಸಂದೇಶಗಳನ್ನು ಓದುವುದು, ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಕಣ್ಣಿಡುವುದು, ಎಟಿಎಂ ಪಿನ್ ಮತ್ತು ಕಾರ್ಡ್ ವಿವರಗಳನ್ನು ತಿಳಿದುಕೊಳ್ಳುತ್ತಾರೆ. ಅದಕ್ಕಾಗಿಯೇ ನಿಮ್ಮ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಕಂಡರೆ, ತಕ್ಷಣ ಅನಗತ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಮೊಬೈಲ್ ಅನ್ನು ರೀಸೆಟ್ ಮಾಡ್ತಾ ಇರಿ.