ಗ್ರಾಹಕರಿಗಾಗಿ ಕೈಗೆಟಕುವ ಬೆಲೆಯಲ್ಲಿ ಟ್ಯಾಬ್ಲೆಟ್ ಮಾರಾಟ ಮಾಡುತ್ತಿದೆ. 3GB RAM + 32GB ಸ್ಟೋರೇಜ್ ವೈ-ಫೈ ರೂಪಾಂತರಕ್ಕೆ 13,999 ರೂ ಆಗಿದೆ. 4G ರೂಪಾಂತವು 3GB RAM + 32GB ಸ್ಟೋರೇಜ್ ಮಾದರಿಯಲ್ಲಿ ಸಗುತ್ತದೆ. ಇದರ ಬೆಲೆ 15,999 ರೂ ಆಗಿದೆ. 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 17,999 ರೂ ಆಗಿದೆ. ರಿಯಲ್ಮಿ ಪ್ಯಾಡ್ ಸೆಪ್ಟೆಂಬರ್ 16 ರಿಂದ Realme.com ಮತ್ತು Flipkart ನಲ್ಲಿ ಮಾರಾಟವಾಗಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಬಳಸಿದರೆ 2,000 ರೂ.ಗಳವರೆಗೆ ತ್ವರಿತ ರಿಯಾಯಿತಿ ಪಡೆಯುತ್ತಾರೆ. ಇದಲ್ಲದೆ, ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳೊಂದಿಗೆ 1,000 ರೂಪಾಯಿ ರಿಯಾಯಿತಿ ಪಡೆಯುತ್ತಾರೆ.
ರಿಯಲ್ಮಿ ಪ್ಯಾಡ್ 7,100mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ರಿಯಲ್ಮಿ ಪ್ಯಾಡ್ನ ಹಿಂದಿನ ಪ್ಯಾನೆಲ್ನಲ್ಲಿ 8 ಮೆಗಾಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರ ಹೊರತಾಗಿ, ರಿಯಲ್ಮಿ ಪ್ಯಾಡ್ ರಿಯಲ್ಮಿ ಸ್ಮಾರ್ಟ್ ಕನೆಕ್ಟ್ ಬೆಂಬಲದಂತಹ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ತಮ್ಮ ಐಒಟಿ ಉತ್ಪನ್ನಗಳು, ರೀಡಿಂಗ್ ಮೋಡ್ ಮತ್ತು ಹೆಚ್ಚಿನವುಗಳೊಂದಿಗೆ ಟ್ಯಾಬ್ಲೆಟ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.