ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಈ ಸಾಧನಗಳಿಂದ ಯಾವುದೇ ಕೆಲಸವನ್ನೂ ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದಾಗಿದೆ. ಆದರೆ ಡಿಜಿಟಲ್ ಯುಗದಲ್ಲಿ ಡೇಟಾ ಗೌಪ್ಯತೆಯ ಪ್ರಶ್ನೆಯೂ ಇದೀಗ ಎದುರಾಗಿದೆ. ಸೈಬರ್ ಕ್ರೈಮ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೇ ಕಾರಣಕಲ್ಕೆ ಕೆಲವೊಮ್ಮೆ ನಿಮ್ಮ ಸ್ಮಾರ್ಟ್ಫೋನ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಮತ್ತು ಅಪ್ಲಿಕೇಶನ್‌ಗಳು ಆಟೋಮ್ಯಾಟಿಕ್ ಆಗಿ ಡೌನ್ ಲೋಡ್ ಆಗುತ್ತಿರುತ್ತದೆ. ಈ ಸಂದರ್ಭಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾಗಿ ಚೆಕ್ ಮಾಡುವುದು ಉತ್ತಮ.
ಅಗತ್ಯವಿಲ್ಲದ ಅಪ್ಲಿಕೇಶನ್‌ಗಳು: ಬಳಕೆದಾರರು ಫೋನ್‌ನಲ್ಲಿ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಫೋನ್‌ನಲ್ಲಿ ಅಪರಿಚಿತ ಅಪ್ಲಿಕೇಶನ್‌ಗಳು ಸಹ ಕಾಣಿಸಿಕೊಳ್ಳುತ್ತವೆ. ಇದು ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್ ಆಗಿರುತ್ತದೆ. ಬಳಕೆದಾರರು ಡೌನ್‌ಲೋಡ್ ಮಾಡದ ಫೋನ್‌ನಲ್ಲಿ ಅಂತಹ ಅನಧಿಕೃತ ಅಪ್ಲಿಕೇಶನ್‌ಗಳಿದ್ದರೆ, ಅದನ್ನು ಅನುಮಾನಿಸಬೇಕು. ಸೈಬರ್ ಅಪರಾಧಿಗಳು ಸಾಧನದಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸಲು ಮತ್ತು ಮಾಹಿತಿಯನ್ನು ಕದಿಯಲು ಈ ರೀತಿಯ ಅಪ್ಲಿಕೇಶನ್‌ಗಳನ್ನು ಬಳಸಬಹುದು.
ಬ್ಯಾಟರಿ ಸಾಮರ್ಥ್ಯ: ಫೋನ್ ಹಿಂದಿನದಕ್ಕಿಂತ ವೇಗವಾಗಿ ಚಾರ್ಜ್ ಆಗುತ್ತಿದೆ ಎಂದು ನೀವು ಭಾವಿಸಿದರೆ ಖಂಡಿತವಾಗಿಯೂ ಅನುಮಾನಾಸ್ಪದವಾಗಿರಬಹುದು. ಇದು ಸೈಬರ್ ದಾಳಿಯಿಂದ ಕೆಲವೊಮ್ಮೆ ಸಂಭವಿಸುತ್ತದೆ. ಫೋನ್ ಬಳಸುವಾಗ ಸರಿಯಾಗಿ ಬ್ಯಾಟರಿ ಬಾಳಿಕೆ ನೀಡದಿದ್ದರೆ ಅದು ಸೈಬರ್ ಬೆದರಿಕೆಯ ಸಂಕೇತವಾಗಿದೆ. ಆದ್ದರಿಂದ ಫೋನ್‌ನ ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಆಗಾಗ ಚೆಕ್ ಮಾಡುತ್ತಿರಬೇಕು.
ಡೇಟಾ ಖಾಲಿಯಾಗುತ್ತಿದೆ: ಇನ್ನು ದೈನಂದಿನ ಮೊಬೈಲ್ ಡೇಟಾವು ವೇಗವಾಗಿ ಖಾಲಿಯಾಗುತ್ತಿದೆ ಎಂದರೂ ಮೊಬೈಲ್ ಹ್ಯಾಕ್ ಆಗಿರಬಹುದು ಎಂದು ಸಂದೇಹ ಪಡಬಹುದು. ಏಕೆಂದರೆ ಸ್ಮಾರ್ಟ್ಫೋನ್ನಲ್ಲಿ ಕೆಲವೊಮ್ಮೆ ಇಂಟರ್ನೆಟ್ ಬಳಸೋದೆ ಇಲ್ಲ. ಆದರೂ ಈ ಸಂದರ್ಭದಲ್ಲಿ ಕೆಲವೊಮ್ಮೆ ತನ್ನಷ್ಟಕ್ಕೆ ಇಂಟರ್ನೆಟ್ ಮುಗಿಯುತ್ತದೆ. ಇದನ್ನು ಸರಿಯಾಗಿ ಚೆಕ್ ಮಾಡಬಹುದು. ಏಕೆಂದರೆ ಹ್ಯಾಕರ್ಸ್ಗಳು ನಮ್ಮ ಡೇಟಾವನ್ನು ಬಳಸುತ್ತಿರಬಹುದು. ಇದಕ್ಕಾಗಿ ನೀವು ಮೊಬೈಲ್ನಲ್ಲಿ ಡೇಟಾ ಸೆಟ್ಟಿಂಗ್ಸ್ಗೆ ಹೋಗಿ ಚೆಕ್ ಮಾಡಬಹುದು.
ಸ್ಮಾರ್ಟ್‌ಫೋನ್ ಹೀಟ್: ಸ್ಮಾರ್ಟ್ ಫೋನ್ ಅನ್ನು ಅತಿಯಾಗಿ ಬಳಸಿದಾಗ ಬಿಸಿಯಾಗೋದು ಸಾಮಾನ್ಯ. ಆದರೆ ಕೆಲವೊಮ್ಮೆ ಸ್ವಲ್ಪ ಬಳಸಿದ್ರೂ ಸ್ಮಾರ್ಟ್ಫೋನ್ಗಳು ಬಿಸಿಯಾಗುತ್ತದೆ. ಇದು ಮಾಲ್ವೇರ್ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಕಾರಣ ಫೋನ್ ಬಳಕೆಯಲ್ಲಿಲ್ಲದಿದ್ದರೂ ಸಹ ಬಿಸಿಯಾಗುವ ಸೂಚನೆಗಳಾಗಿದೆ. ಆದ್ದರಿಂದ ಸ್ಮಾರ್ಟ್‌ಫೋನ್ ಬಿಸಿಯಾದಾಗ ಸುಮ್ಮನಿರುವುದು ಬಿಟ್ಟು ತಕ್ಷಣ ಚೆಕ್ ಮಾಡುವುದು ಉತ್ತಮ.
ಸ್ವಿಚ್ ಆಫ್/ರೀಸ್ಟಾರ್ಟ್ ಸಮಸ್ಯೆಗಳು: ಫೋನ್ ಸ್ವಿಚ್ ಆಫ್ ಮತ್ತು ರೀಸ್ಟಾರ್ಟ್ ಮಾಡುವಾಗ ಸಮಸ್ಯೆಗಳು ಉಂಟಾದರೆ ಬಳಕೆದಾರರು ಈ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬೇಕು. ಹ್ಯಾಕರ್ಗಳು ಸ್ಥಾಪಿಸಿದ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸಲು ಸಾಧನವು ಯಾವಾಗಲೂ ಆನ್ ಆಗಿರುವುದನ್ನು ಸೈಬರ್ ಅಪರಾಧಿಗಳು ಈ ರೀತಿಯ ಸೆಟ್ಟಿಂಗ್ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ನಿಮ್ಮ ಮೊಬೈಲ್ ಸ್ವಿಚ್ಆಫ್ ಅಥವಾ ರೀಸ್ಟಾರ್ಟ್ ಆಗವುದಿಲ್ಲ.