ಲಕ್ಸುರಿ ಫೋನ್‌ಗೆ ಮತ್ತೊಂದು ಹೆಸರೇ ಐಫೋನ್. ಲಕ್ಷಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಬರುತ್ತಿರುವ ಹೊಸ ಹೊಸ ಐಫೋನ್ ಸರಣಿಗಳು ಸಾಮಾನ್ಯ ಜನರ ಕೈಗೆ ಎಟಕುವಂತಹ ಫೋನ್‌ಗಳಲ್ಲ. ಐಫೋನ್ ಅಂದರೆ ದುಡ್ಡಿದ್ದವರಿಗೆ ಮಾತ್ರ ಅನ್ನುವಂತಿದೆ ಅದರ ಬೆಲೆಗಳು. ಐಫೋನ್ ಖರೀದಿ ಮಾಡಬೇಕು, ಅದನ್ನು ಬಳಕೆ ಮಾಡಬೇಕು ಎನ್ನುವುದು ಫೋನ್ ಬಳಕೆದಾರರ ಒಂದು ಕನಸು. ಆದರೆ ಬಜೆಟ್ ಅಂತಾ ಬಂದಾಗ ಕಡಿಮೆ ಬೆಲೆಯ ಫೋನ್‌ಗಳ ಮೇಲೆ ನಮ್ಮ ಕಣ್ಣು ಹೋಗುವುದು.