ವೇಗದ ಮೆಸೇಜ್ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ಕಳೆದ ವರ್ಷ ಬಳಕೆದಾರರಿಗೆ ಹಲವು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಆಗಲೇ 2023ರಲ್ಲಿ ಇನ್ನೂ ಕೆಲವು ಅಪ್ಡೇಟ್ಸ್ಗಳು ಬರಲಿವೆ ಎಂದು ವರದಿಯಾಗಿತ್ತು. ಇದುವರೆಗೆ ವಾಟ್ಸಾಪ್ ನೀಡಿದಂತಹ ಎಲ್ಲಾ ಫೀಚರ್ಸ್ಗಳು ಬಳಕೆದಾರರಿಗೆ ಬಹಳಷ್ಟು ಪ್ರಯೋಜನವನ್ನು ನೀಡಿದೆ. ಇದೀಗ ವಾಟ್ಸಾಪ್ನಲ್ಲಿ ಮತ್ತೊಂದು ಫೀಚರ್ಸ್ ಬಿಡುಗಡೆಯಾಗಿದೆ.
ಇದೀಗ ವಾಟ್ಸಾಪ್ ಹೊಸ ಅಪ್ಡೇಟ್ಸ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರ ಆನ್ಲೈನ್ ಅನ್ನು ತೋರಿಸುವ ಸ್ಟೇಟಸ್ ಅನ್ನು ಹೈಡ್ ಮಾಡುವಂತಹ ಅಪ್ಡೇಟ್ ಆಗಿದೆ. ಈ ಫೀಚರ್ಸ್ ಹೆಚ್ಚಾಗಿ ಬಳಕೆದಾರರ ಸೆಕ್ಯುರಿಟಿಗಾಗಿ ಉತ್ತಮವಾಗಿದೆ.. ಇನ್ನು ಈ ಫೀಚರ್ ಈಗ ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆಮಾಡಬಹುದಾಗಿದೆ. ಹಾಗಿದ್ರೆ ಇದನ್ನು ಹೇಗೆ ಬಳಸೋದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ವಾಟ್ಸಾಪ್ ಆನ್ಲೈನ್ ಸ್ಥಿತಿ ಹೈಡ್: ಈ ಫೀಚರ್ಸ್ ಮೂಲಕ ಬಳಕೆದಾರರು ತಮ್ಮ ಆನ್ಲೈನ್ ಸ್ಥಿತಿಯನ್ನು ವಾಟ್ಸಾಪ್ನಲ್ಲಿ ಹೈಡ್ ಮಾಡಬಹುದಾಗಿದೆ. ನೀವು ಆನ್ಲೈನ್ನಲ್ಲಿದ್ದೀರಿ ಎಂದು ಯಾರಿಗೂ ತಿಳಿಯಬಾರದು ಎಂದು ನೀವು ಬಯಸಿದರೆ, ಈ ಫೀಚರ್ಸ್ ಮೂಲಕ ನಿಮ್ಮ ವಾಟ್ಸಪ್ ಆನ್ಲೈನ್ ಅನ್ನು ಹೈಡ್ ಮಾಡಬಹುದು. ಈ ಆಯ್ಕೆಯನ್ನು ಯಾವುದೇ ಸಮಯದಲ್ಲಿ ಬೇಕಾದರು ಸುಲಭವಾಗಿ ಸಕ್ರಿಯಗೊಳಿಸಬಹುದು ಅಥವಾ ಮತ್ತೆ ಅದೇ ಸ್ಥಿತಿಗೆ ತರಬಹುದು.
ಹೈಡ್ ಮಾಡುವುದು ಹೇಗೆ?: ಮೊದಲು ಬಳಕೆದಾರರು ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಅನ್ನು ಓಪನ್ ಮಾಡ್ಬೇಕು. ಅದರ ನಂತರ ವಾಟ್ಸಾಪ್ನಲ್ಲಿ ಸೆಟ್ಟಿಂಗ್ಸ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಂತರ ಪ್ರೈವಸಿಯನ್ನು ಕ್ಲಿಕ್ ಮಾಡಿದ್ರೆ, ಅದರಲ್ಲಿ ಆನ್ಲೈನ್ ಸ್ಥಿತಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇದಾದ ನಂತರ ನಿಮಗೆ ಅಲ್ಲಿ ಪ್ರತಿಯೊಬ್ಬರೂ, ಮೈ ಕಾಂಟ್ಯಾಕ್ಟ್, ಈ ರೀತಿಯ ಹಲವು ಆಯ್ಕೆಗಳಿರುತ್ತದೆ. ಈ ಮೂಳಕ ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಬಹುದಾಗಿದೆ.
ನೀವು ಸ್ವಲ್ಪ ಸಮಯದ ನಂತರ ಆ ಸಂಖ್ಯೆಯನ್ನು ಟ್ಯಾಪ್ ಮಾಡಿದಾಗ, ನೀವು ಮೂರು ಆಯ್ಕೆಗಳನ್ನು ಕಾಣಬಹುದು. ಅವುಗಳೆಂದರೆ ಚಾಟ್ , ವಾಟ್ಸಾಪ್ ಕಾಲ್ ಮತ್ತು ಕಾಂಟ್ಯಾಕ್ಟ್ ಸೇವ್ ಎಂಬ ಆಯ್ಕೆಯಿರುತ್ತದೆ. ಆ ಆಯ್ಕೆಗಳಲ್ಲಿ ಚಾಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಹೊಸ ಚಾಟ್ ವಿಂಡೋ ತೆರೆಯುತ್ತದೆ. ಈ ವಿಂಡೋದಿಂದ ನೀವು ಸುಲಭವಾಗಿ ಆ್ಯಡ್ ಮಾಡದೆಯೇ ಮೆಸೇಜ್ ಅನ್ನು ಮಾಡಬಹುದು.