ಆ್ಯಂಡ್ರಾಯ್ಡ್ ಬಳಕೆದಾರರೆ ಎಚ್ಚರ! ನಿಮ್ಮ ಫೋನ್ ಕ್ಯಾಮೆರಾವನ್ನೇ ಬಳಸಿ ನಿಮ್ಮ ಖಾಸಗಿತನ ಕದಿಯುತ್ತಿದ್ದಾರೆ ಹುಷಾರ್!
ಸೈಬರ್ ಸೆಕ್ಯೂರಿಟಿ ಸಂಸ್ಥೆ ಚೆಕ್ಮಾರ್ಕ್ ನೀಡಿರುವ ಮಾಹಿತಿಗಳ ಪ್ರಕಾರ ಆ್ಯಂಡ್ರಾಯ್ಡ್ ಸ್ಯಾಮ್ಸಂಗ್ ಫೋನಿ ಕ್ಯಾಮೆರಾದಲ್ಲಿ ಮತ್ತು ಗೂಗಲ್ ಕ್ಯಾಮೆರಾ ಆ್ಯಪ್ನಲ್ಲಿ ಬಗ್ ಕಾಣಿಸಿಕೊಂಡಿದೆ.


ತಂತ್ರಜ್ಞಾನ ಬೆಳೆದಂತೆ ಹ್ಯಾಕರ್ಸ್ಗಳ ಹಾವಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಮಾಲ್ವೇರ್ಗಳು ಪತ್ತೆಯಾಗಿದ್ದವು. ಇದೀಗ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನಿನ ಕ್ಯಾಮೆರಾದಲ್ಲಿ ಬಗ್ ಕಾಣಿಸಿಕೊಂಡಿದೆ.


ಗೂಗಲ್ ಪ್ರತಿ ಬಾರಿ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ಡೇಡ್ ಮಾಡುತ್ತಿರುತ್ತದೆ. ಆದರೂ ಹ್ಯಾಕರ್ಸ್ಗಳು ಕಳ್ಳ ದಾರಿಯನ್ನು ಹುಡುಕಿಕೊಂಡು ಬಳಕೆದಾರರ ಮಾಹಿತಿಯನ್ನು ಕದಿಯಲು ಹೊಂಚು ಹಾಕುತ್ತಿರುತ್ತಾರೆ.


ಸೈಬರ್ ಸೆಕ್ಯೂರಿಟಿ ಸಂಸ್ಥೆ ಚೆಕ್ಮಾರ್ಕ್ ನೀಡಿರುವ ಮಾಹಿತಿಗಳ ಪ್ರಕಾರ ಆ್ಯಂಡ್ರಾಯ್ಡ್ ಸ್ಯಾಮ್ಸಂಗ್ ಫೋನಿ ಕ್ಯಾಮೆರಾದಲ್ಲಿ ಮತ್ತು ಗೂಗಲ್ ಕ್ಯಾಮೆರಾ ಆ್ಯಪ್ನಲ್ಲಿ ಬಗ್ ಕಾಣಿಸಿಕೊಂಡಿದೆ.


ಈ ಬಗ್ಗೆ ಎಚ್ಚರಿಕೆ ನೀಡಿರುವ ಚೆಕ್ಮಾರ್ಕ್ ಸಂಸ್ಥೆ ಸ್ಯಾಮ್ಸಂಗ್ ಫೋನ್ ಬಳಕೆದಾರರು ಫೋಟೋ ಕ್ಲಿಕ್ಕಿಸಿದರೆ, ವಿಡಿಯೋ ಚಿತ್ರಿಕರಿಸಿದಂತೆ ಲೊಕೇಶನ್ ಮೂಲಕ ಬಳಕೆದಾರರ ಮಾಹಿತಿ ಲೀಕ್ ಆಗುತ್ತದೆ ಎಂದು ಹೇಳಿದೆ.


ಇನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ನಕಲಿ ಆ್ಯಪ್ಗಳು ಮತ್ತು ಮಾಲ್ವೇರ್ ಗಳು ಆಗ್ಗಾಗೆ ಪತ್ತೆಯಾಗುತ್ತಲೇ ಇರುತ್ತದೆ. ಈ ಆ್ಯಪ್ಗಳನ್ನು ಬಳಕೆದಾರ ತನ್ನ ಸ್ಮಾರ್ಟ್ಫೋನಿನಲ್ಲಿ ಬಳಸಿಕೊಂಡತೆ ಅದರಲ್ಲಿರುವ ಖಾಸಗಿ ಮಾಹಿತಿಯನ್ನು ಕದಿಯುತ್ತದೆ.


ಹ್ಯಾಕರರ್ಸ್ಗಳು ಬಳಕೆದಾರರ ಮಾಹಿತಿಯನ್ನು ಎಗರಿಸಲು ಒಂದಲ್ಲಾ ಒಂದು ಕಳ್ಳದಾರಿಯನ್ನು ಹುಡುಕುತ್ತಿರುತ್ತಾರೆ. ನಕಲಿ ಆ್ಯಪ್ಗಳ ಮೂಲಕ ಅಥವಾ ಸಂದೇಶಗಳ ಲಿಂಕ್ ಅಳವಡಿಸಿಕೊಂಡು, ಜಾಹೀರಾತುಗಳ ಮೂಲಕ ಖಾಸಗಿ ಮಾಹಿತಿಯನ್ನು ಕದಿಯುತ್ತಾರೆ.


ಆದರೀಗ ಹ್ಯಾಕರ್ಸ್ಗಳು ಫೋನಿನ ಕ್ಯಾಮೆರಾದ ಮೂಲಕ ಬಳಕೆದಾರನ ಚಟುವಟಿಕೆಯನ್ನುಗಮನಿಸುತ್ತಿದೆ. ಹಾಗಾಗಿ ಆ್ಯಂಡ್ರಾಯ್ಡ್ ಬಳಕೆದಾರರು ಆ್ಯಪ್ಗಳನ್ನು ಡೌನ್ಲೋಡ್ ಮಾಡುವು ಮುನ್ನ, ಸಂದೇಶಗಳು ಬಂದಾಗ ಸರಿಯಾಗಿ ಪರಶೀಲಿಸುವುದು ಒಳಿತು.