ಈ ರಿಯಾಯಿತಿ ಮಾರಾಟವು ಸ್ಮಾರ್ಟ್ ವಾಚ್ಗಳು, ಏರ್ಪಾಡ್ಸ್ ಪ್ರೋ, ಮ್ಯಾಗ್ಸೇಫ್ ಚಾರ್ಜಿಂಗ್ ಕೇಸ್ಗಳು, ಮ್ಯಾಕ್ಬುಕ್ಗಳು, ಐಪ್ಯಾಡ್ಗಳು ಮತ್ತು ಆ್ಯಪಲ್ ಕಂಪನಿಯ ಪರಿಕರಗಳ ಮೇಲೆ ಡೀಲ್ಗಳನ್ನು ಸಹ ನೀಡುತ್ತದೆ. ಇನ್ನು ಐಫೋನ್ಗಳ ಮೇಲೆ ವಿಶೇಷ ಆಫರ್ಸ್ಗಳು ಲಭ್ಯವಿದ್ದು, ಈ ಡೀಲ್ನಲ್ಲಿ ಐಫೋನ್ 14 ಗೆ 61,900 ಮತ್ತು ಐಫೋನ್ 14 ಪ್ಲಸ್ ಗೆ 68,699, ಐಫೋನ್ 14 ಪ್ರೋ ರೂ.1,26,100, ಐಫೋನ್ 14 ಪ್ರೋ ಮ್ಯಾಕ್ಸ್ ರೂ.135,800, ಐಫೋನ್ 12 ರೂ.52,900, ಐಫೋನ್ 13 ಅನ್ನು 62,900 ರೂಪಾಯಿಗಳಲ್ಲಿ ಖರೀದಿಸಬಬುದಾಗಿದೆ
ವಿಜಯ್ ಸೇಲ್ಸ್ ಕೂಡ ಆ್ಯಪಲ್ ವಾಚ್ ಮೇಲೆ ಬಂಪರ್ ಡಿಸ್ಕೌಂಟ್ ನೀಡುತ್ತಿದೆ. ಆ್ಯಪಲ್ ವಾಚ್ 8 ಈ ಸೇಲ್ನಲ್ಲಿ ರೂ 39,900 ರಿಂದ ಪ್ರಾರಂಭವಾಗುತ್ತದೆ. ಆ್ಯಪಲ್ ವಾಚ್ ಎಸ್ಇ ಸ್ಮಾರ್ಟ್ವಾಚ್ ಬೆಲೆ ರೂ.26,000 ರಿಂದ ಆರಂಭವಾಗುತ್ತದೆ, ಆದರೆ ಆ್ಯಪಲ್ ವಾಚ್ ಅಲ್ಟ್ರಾ ಬೆಲೆ ರೂ.82,300 ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ.. ಕಂಪನಿಯು ಆ್ಯಪಲ್ ವಾಚ್ ಕೇರ್ + ಮೇಲೆ ಹೆಚ್ಚುವರಿ 20 ಶೇಕಡಾ ರಿಯಾಯಿತಿಯನ್ನು ನೀಡುತ್ತಿದೆ.