ಭಾರತದಲ್ಲಿ ಇದೀಗ ಜನಪ್ರಿಯ ಶಿಯೋಮಿ ಕಂಪೆನಿ ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೋ, ರೆಡ್ಮಿ ನೋಟ್ 12 ಪ್ರೋ+ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಗ್ರಾಹಕರು ರೂ.15,000, ರೂ.20,000 ಮತ್ತು ರೂ.25,000 ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದಾಗಿದೆ. ಈ ಮೂರು ಸ್ಮಾರ್ಟ್ಫೋನ್ಗಳ ಮಾರಾಟ ಇಂದಿನಿಂದ ಅಂದರೆ ಜನವರಿ 11ರಿಂದ ಆರಂಭವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಇನ್ನು ರೆಡ್ಮಿ ನೋಟ್ 12 ಪ್ರೋ+ ಮೊಬೈಲ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 8ಜಿಬಿ ರ್ಯಾಮ್ + 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 26,999 ರೂ, ಆದರೆ 12ಜಿಬಿ ರ್ಯಾಮ್ + 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 29,999 ರೂಪಾಯಿ ಆಗಿದೆ. ಇನ್ನು ಈ ಸ್ಮಾರ್ಟ್ಫೋನ್ ಅನ್ನು ಐಸಿಐಸಿಐ ಬ್ಯಾಂಕ್ ಕಾರ್ಡ್ಗಳೊಂದಿಗೆ ಖರೀದಿಸಿದರೆ ರೂ.3,000ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
ಈ ಕೊಡುಗೆಯೊಂದಿಗೆ, ನೀವು 8ಜಿಬಿ ರ್ಯಾಮ್ + 256ಜಿಬಿ ರೂಪಾಂತರವನ್ನು ರೂ.25,999 ಮತ್ತು 12ಜಿಬಿ ರ್ಯಾಮ್ + 256ಜಿಬಿ ರೂಪಾಂತರವನ್ನು ರೂ.28,999 ಗೆ ಪಡೆಯಬಹುದು. ಹೆಚ್ಚುವರಿಯಾಗಿ, 23,000 ರೂಪಾಯಿವರೆಗೆ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ಈ ಎಕ್ಸ್ಚೇಂಜ್ ಆಫರ್ನೊಂದಿಗೆ ಖರೀದಿಸಿದರೆ ನೀವು ಈ ಮೊಬೈಲ್ ಅನ್ನು ಕೇಬಲ ರೂ.10,000 ಕ್ಕಿಂತ ಕಡಿಮೆ ಬೆಲೆಗೆ ಹೊಂದಬಹುದು.
ಈ ಸ್ಮಾರ್ಟ್ಫೋನ್ ಮೇಲೆ ಬೇರೆ ಆಫರ್ಸ್ಗಳು ಸಹ ಲಭ್ಯವಿದೆ. ನೀವು ಇತರ ಆಫರ್ಗಳನ್ನು ನೋಡುವುದಾದರೆ, ನೀವು ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಖರೀದಿಸಿದರೆ ನೀವು ಶೇಕಡಾ 5 ರಷ್ಟು ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ನೋಕಾಸ್ಟ್ ಇಎಮ್ಐ ಆಫರ್ ಕೂಡ ಈ ಸ್ಮಾರ್ಟ್ಫೋನ್ ಮೇಲೆ ಲಭ್ಯವಿದೆ. ನೀವು ತಿಂಗಳಿಗೆ ಕೇವಲ 5,000 ರೂಪಾಯಿ ಪಾವತಿ ಮಾಡುವ ಮೂಲಕ ಈ ಮೊಬೈಲ್ ಅನ್ನು ಇಎಮ್ಐನಲ್ಲಿ ಖರೀದಿಸಬಹುದು.
ರೆಡ್ಮಿ ನೋಟ್ 12 ಪ್ರೋ+ ನ ವಿವರವಾದ ಫೀಚರ್ಸ್ಗಳ ಬಗ್ಗೆ ಹೇಳುವುದಾದರೆ, ಇದು 120Hz ರಿಫ್ರೆಶ್ ರೇಟ್ನೊಂದಿಗೆ 6.67 ಇಂಚಿನ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಿದ್ದಾರೆ. ಇನ್ನು ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಷನ್ 1080 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ರೆಡ್ಮಿ ನೋಟ್ 12 ಪ್ರೋ+ 5ಜಿ ಸ್ಮಾರ್ಟ್ಫೋನ್ನಲ್ಲಿಯೂ ಇದೇ ಪ್ರೊಸೆಸರ್ ಇದೆ. ಇದು ಆಂಡ್ರಾಯ್ಡ್ 12 ಮತ್ತು MIUI 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ರೆಡ್ಮಿ ನೋಟ್ 12 ಪ್ರೋ+ ನ ಕ್ಯಾಮೆರಾ ಫೀಚರ್ಸ್: ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ನೊಂದಿಗೆ 200-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HPX ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.