ಈಗ 5G ಸ್ಮಾರ್ಟ್ಫೋನ್ಗಳು ದೇಶದಲ್ಲಿ ಭಾರೀ ಸುದ್ದಿಯಲ್ಲಿರುವ ಸಾಧನಗಳಾಗಿದೆ. ಈ ಮಧ್ಯೆ ಭಾರತದಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ 5ಜಿ ನೆಟ್ವರ್ಕ್ ಪ್ರಾರಂಭವಾದ ನಂತರ, 5ಜಿ ಸ್ಮಾರ್ಟ್ಫೋನ್ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ಭಾರತದಲ್ಲಿ 5ಜಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ, ಆದರೆ 5ಜಿ ಟ್ಯಾಬ್ಲೆಟ್ ಇರಲಿಲ್ಲ.ಇದೀಗ ಈ ಸಾಲಿಗೆ ಲೆನೋವೋ ಸೇರಿದೆ.
ಲೆನೋವೋ ಟ್ಯಾಬ್ ಪಿ11 5ಜಿ ಟ್ಯಾಬ್ಲೆಟ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು 11 ಇಂಚಿನ 2ಕೆ ಡಿಸ್ಪ್ಲೇ ಜೊತೆಗೆ 2000x1200 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಡಾಲ್ಬಿ ವಿಷನ್ ಬೆಂಬಲವನ್ನು ಸಹ ಇದು ಪಡೆದಿದೆ. ಇನ್ನು ಈ ಟ್ಯಾಬ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 750 5ಜಿ ಪ್ರೊಸೆಸರ್ನಿಂದ ರನ್ ಆಗುತ್ತದೆ. ಜೊತೆಗೆ ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಲೆನೋವೋ ಟ್ಯಾಬ್ ಪಿ11 5ಜಿ ಟ್ಯಾಬ್ಲೆಟ್ ಆಟೋಫೋಕಸ್ ವೈಶಿಷ್ಟ್ಯದೊಂದಿಗೆ 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ದೂರದ ವಸ್ತುಗಳ ನಡುವಿನ ಅಂತರವನ್ನು ಅಳೆಯಲು ಲೆನೋವೋ ಟ್ಯಾಬ್ ಪಿ11 5ಜಿ ಟ್ಯಾಬ್ಲೆಟ್ ಅನ್ನು ಬಳಸಬಹುದು. ಇನ್ನು ಈ ಟ್ಯಾಬ್ 3ಡಿ ಇಮೇಜಿಂಗ್ ಮತ್ತು ಗೆಸ್ಚರ್ ರೆಕಗ್ನಿಷನ್ನಂತಹ ವೈಶಿಷ್ಟ್ಯಗಳನ್ನು ಕ್ಯಾಮೆರಾದೊಂದಿಗೆ ಅಳವಡಿಸಲಾಗಿದೆ..
ಲೆನೋವೋ ಟ್ಯಾಬ್ ಪಿ11 5ಜಿ ಟ್ಯಾಬ್ಲೆಟ್ ಲೆನೋವೋ ಪ್ರೆಸಿಶನ್ ಪೆನ್ 2 ಸ್ಟೈಲಸ್ ಮತ್ತು ಕೀಬೋರ್ಡ್ ಬೆಂಬಲವನ್ನು ಪಡೆದುಕೊಂಡಿದೆ. ಆದರೆ ಇವುಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕು. ಇದು ಜೆಬಿಎಲ್ ಸ್ಪೀಕರ್ಗಳನ್ನು ಸಹ ಹೊಂದಿದೆ. ಡಾಲ್ಬಿ ಆಟ್ಮೊಸ್ ಬೆಂಬಲವನ್ನು ಸಹ ಪಡೆದಿದೆ. ಇನ್ನು ಈ ಲೆನೋವೋ ಟ್ಯಾಬ್ಲೆಟ್ 7,700mAh ಬ್ಯಾಟರಿಯನ್ನು ಹೊಂದಿದೆ. ಇದು 20W ಚಾರ್ಜಿಂಗ್ ವೇಗವನ್ನು ಬೆಂಬಲ ನೀಡುತ್ತದೆ. ಇನ್ನು ಈ ಟ್ಯಾಬ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಇದು 12 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮತ್ತು ಇದು ಬ್ಲೂಟೂತ್ 5.1, ವೈಫೈ 6, USB C 3.2 Gen 1 ನಂತಹ ಕನೆಕ್ಟಿವಿಟಿ ಫೀಚರ್ಸ್ಗಳನ್ನು ಹೊಂದಿದೆ