ಆ್ಯಪಲ್ ಕಂಪನಿಯ ಉತ್ಪನ್ನಗಳು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿವೆ. ಗುಣಮಟ್ಟ ಮತ್ತು ಫೀಚರ್ಸ್ಗಳ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ ಆ್ಯಪಲ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ . ಆ್ಯಪಲ್ ಏರ್ಪೋಡ್ಗಳನ್ನು ಖರೀದಿಸಲು ಬಯಸುವವರಿಗೆ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ನ ‘ವರ್ಷಾಂತ್ಯ ಮಾರಾಟ' ಸೇಲ್ನಲ್ಲಿ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ.
ಈ ವಿಶೇಷ ಸೇಲ್ ಎರಡು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಆ್ಯಪಲ್ ಏರ್ಪೋಡ್ಸ್ ಪ್ರೋ ನಲ್ಲಿ ಇದೀಗ ಫ್ಲಿಪ್ಕಾರ್ಟ್ ಗಮನ ಸೆಳೆಯುವ ಕೊಡುಗೆಯನ್ನು ಘೋಷಿಸಿದೆ. ನೀವು ಅದನ್ನು ಕೇವಲ ರೂ.1490 ಕ್ಕೆ ಪಡೆಯಬಹುದು. ಆ್ಯಪಲ್ ಏರ್ಪೋಡ್ಸ್ ಅನ್ನು ಫ್ಲಿಪ್ಕಾರ್ಟ್ನ ಇಯರ್ ಎಂಡ್ ಸೇಲ್ನಲ್ಲಿ 20,990 ರೂ.ಗೆ ಪಟ್ಟಿ ಮಾಡಲಾಗಿದೆ. ಆದರೆ, ಕಂಪನಿಯು ಈ ಬಗ್ಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ.
ಆ್ಯಪಲ್ ಏರ್ಪೋಡ್ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಟಿಡಬ್ಲ್ಯೂಎಸ್ ಇಯರ್ಬಡ್ಗಳಲ್ಲಿ ಒಂದಾಗಿದೆ. ಈ ವೈರ್ಲೆಸ್ ಬ್ಲೂಟೂತ್ ಇಯರ್ಬಡ್ಗಳನ್ನು 2016 ರಲ್ಲಿ ಐಫೋನ್ 7 ಜೊತೆಗೆ ಪ್ರಾರಂಭಿಸಲಾಯಿತು. ವೈರ್ಲೆಸ್ ಚಾರ್ಜಿಂಗ್ ಮತ್ತು ಅತ್ಯುತ್ತಮ ಬ್ಯಾಟರಿಯಂತಹ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಆ್ಯಪಲ್ ಕೆಲವು ವರ್ಷಗಳ ಹಿಂದೆ ಏರ್ಪೋಡ್ಗಳ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಏರ್ಪಾಡ್ಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸಿವೆ.
ಇದರೊಂದಿಗೆ, ಕಂಪನಿಯು ಆ್ಯಪಲ್ ಏರ್ಪೋಡ್ಸ್ ಪ್ರೋ ಅನ್ನು ಸಹ ಪ್ರಾರಂಭಿಸಿದೆ, ಇದು ಇನ್-ಇಯರ್ TWS ಇಯರ್ಬಡ್ಗಳು ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ನೀಡುತ್ತದೆ. ಇತ್ತೀಚೆಗೆ ಕಂಪನಿಯು ಆ್ಯಪಲ್ ಏರ್ಪೋಡ್ಸ್ ಪ್ರೋ 2 ಅನ್ನು ಸಹ ಬಿಡುಗಡೆ ಮಾಡಿದೆ. ಆ್ಯಪಲ್ ಈ ವರ್ಷದ ಆರಂಭದಲ್ಲಿ ಆರಂಭಿಸಿದ ಏರ್ಪೋಡ್ಸ್ನಲ್ಲಿ ಮ್ಯಾಗ್ಸೇಫ್ ಚಾರ್ಜಿಂಗ್ ಫೀಚರ್ಸ್ ಅನ್ನು ಅಳವಡಿಸಿದೆ.