iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

iPhone 14 Plus: ಆ್ಯಪಲ್ ಕಂಪೆನಿ ಇತ್ತೀಚೆಗೆ ಮಾರುಕಟ್ಟೆಗೆ ಐಫೋನ್​ 14 ಸೀರಿಸ್​ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಸೀರಿಸ್​ನ ಐಫೋನ್​ 14 ಪ್ಲಸ್​ ಸ್ಮಾರ್ಟ್​​​ಫೋನ್​ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹಾಗಿದ್ರೆ ಏನೆಲ್ಲಾ ಆಫರ್ಸ್​ಗಳು ಲಭ್ಯವಿದೆ ಎಂದು ಈ ಲೇಖನದ ಮೂಲಕ ತಿಳಿಯೋಣ.

First published:

  • 18

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    ಕಳೆದ ವರ್ಷ ಆ್ಯಪಲ್​ನಿಂದ ಐಫೋನ್​ 14 ಸೀರಿಸ್​ ಅನ್ನು ಪ್ರಾರಂಭಿಸಲಾಯಿತು. ಈ ಸೀರಿಸ್​ನಲ್ಲಿ iPhone 14, iPhone 14 Plus, iPhone 14 Pro ಮತ್ತು iPhone 14 Pro Max ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಇದೀಗ ಐಫೋನ್ 14 ಪ್ಲಸ್ ಬೆಲೆಯನ್ನು ಬಹಳ ಕಡಿಮೆ ಮಾಡಲಾಗಿದೆ. ಬಿಡುಗಡೆ ಬೆಲೆಗೆ ಹೋಲಿಸಿದರೆ, ಐಫೋನ್ ರೂ.10,000 ರಿಯಾಯಿತಿಯಲ್ಲಿ ಲಭ್ಯವಿದೆ. ಈ ರಿಯಾಯಿತಿಯ ಜೊತೆಗೆ ಬ್ಯಾಂಕ್ ಕೊಡುಗೆಗಳೂ ಇವೆ.

    MORE
    GALLERIES

  • 28

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    iPhone 14 Plus ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬಿಡುಗಡೆಯ ಬೆಲೆಗಳನ್ನು ನೋಡಿದಾಗ, 128GB ರೂಪಾಂತರದ ಬೆಲೆ ರೂ.89,900 ಆಗಿದ್ದರೆ, 256GB ರೂಪಾಂತರದ ಬೆಲೆ ರೂ.99,900 ಆಗಿದೆ. ಹೈ-ಎಂಡ್ ರೂಪಾಂತರ ಅಮದರೆ 512GB ಮಾದರಿಯ ಬೆಲೆ ರೂ.1,19,900 ಆಗಿದೆ. ಇವು ಆ್ಯಪಲ್​ ಇಂಡಿಯಾ ಇ-ಸ್ಟೋರ್‌ನಲ್ಲಿ ಪ್ರಸ್ತುತ ಬೆಲೆಗಳಾಗಿವೆ. ಆದರೆ ಫ್ಲಿಪ್‌ಕಾರ್ಟ್ ಭಾರೀ ರಿಯಾಯಿತಿಯೊಂದಿಗೆ ಈ ಸ್ಮಾರ್ಟ್​​​ಫೋನ್​ಗಳನ್ನು ಮಾರಾಟ ಮಾಡುತ್ತಿದೆ.

    MORE
    GALLERIES

  • 38

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    ಫ್ಲಿಪ್‌ಕಾರ್ಟ್‌ನಲ್ಲಿ, iPhone 14 Plus 128GB ರೂಪಾಂತರದ ಬೆಲೆ ರೂ.79,999, 256GB ರೂಪಾಂತರದ ಬೆಲೆ ರೂ.89,999, ಮತ್ತು ಉನ್ನತ-ಮಟ್ಟದ ರೂಪಾಂತರ 512GB ಮಾದರಿಯು ರೂ.1,09,900 ಆಗಿದೆ. ಫ್ಲಿಪ್‌ಕಾರ್ಟ್ ಕೂಡ ಬ್ಯಾಂಕ್ ಆಫರ್‌ಗಳನ್ನು ಹೊಂದಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಗೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ಸಿಗುತ್ತದೆ. ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ರೂ.4,000 ರಿಯಾಯಿತಿಯನ್ನು ಪಡೆಯಬಹುದು.

    MORE
    GALLERIES

  • 48

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    ಫ್ಲಿಪ್​ಕಾರ್ಟ್​​ ಸಹ EMI ಕೊಡುಗೆಗಳನ್ನು ನೀಡುತ್ತಿದೆ. ಈ ಮೂಲಕ Nocast EMI ರೂ.4,584 ರಿಂದ ಪ್ರಾರಂಭವಾಗುತ್ತದೆ. ಇನ್ನು ಈ ಸ್ಮಾರ್ಟ್​​ಫೋನ್​ ಮೇಲೆ ಎಕ್ಸ್​​ಚೇಂಜ್​ ಆಫರ್ಸ್​​ ಸಹ ಲಭ್ಯವಿದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ರೂ.30,000 ವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಪಡೆಯಬಹುದು. ಇದು ಈ ಸ್ಮಾರ್ಟ್​​ಫೋನ್​ಗಳ ಮಾದರಿ ಮತ್ತು ಗುಣಮಟ್ಟದ ಮೇಲೆ ನಿರ್ಧಾರವಾಗುತ್ತದೆ.

    MORE
    GALLERIES

  • 58

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    iPhone 14 Plus 6.7-ಇಂಚಿನ ಸೂಪರ್ ರೆಟಿನಾ HDR ಡಿಸ್ಪ್ಲೇಯನ್ನು ಹೊಂದಿದೆ. ಇದು ಆ್ಯಪಲ್​ A15 ಬಯೋನಿಕ್ ಚಿಪ್ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಡಾಲ್ಬಿ ವಿಷನ್‌ಗಾಗಿ, ಇದು 1,200 ನಿಟ್‌ಗಳವರೆಗೆ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. iPhone 14 Plus ನಲ್ಲಿ ಹೊಸ A15 ಬಯೋನಿಕ್ 5 GPU ಕೋರ್‌ಗಳು ಮತ್ತು 6 CPU ಕೋರ್‌ಗಳೊಂದಿಗೆ ಬರುತ್ತದೆ. 

    MORE
    GALLERIES

  • 68

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    iPhone 14 Plus 12 ಮೆಗಾಪಿಕ್ಸೆಲ್​​ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇನ್ನು ಮುಂಬದಿಯ ಕ್ಯಾಮೆರಾವು 12 ಮೆಗಾಪಿಕ್ಸೆಲ್​ ಸೆನ್ಸಾರ್​ ಸಾಮರ್ಥ್ಯವನ್ನು ಹೊಂದಿದೆ. 

    MORE
    GALLERIES

  • 78

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    iPhone 14 Plus ಹಾಗೂ iPhone 14 ಮಾಡೆಲ್‌ನಲ್ಲಿ ಭಾರೀ ರಿಯಾಯಿತಿ ಕೊಡುಗೆಗಳಿವೆ. ಐಫೋನ್ 14 ಬಿಡುಗಡೆ ಬೆಲೆಗೆ ಹೋಲಿಸಿದರೆ ಸುಮಾರು ರೂ.8,000 ರಿಯಾಯಿತಿ ಲಭ್ಯವಿದೆ. 128GB ರೂಪಾಂತರದ ಬೆಲೆ 71,999 ರೂ, ಆದರೆ 256GB ರೂಪಾಂತರದ ಬೆಲೆ 81,999 ರೂ. ಹೈ-ಎಂಡ್ ಮಾಡೆಲ್ 512 ಜಿಬಿ ರೂಪಾಂತರದ ಬೆಲೆ 1,01,999 ರೂಪಾಯಿ ಆಗಿದೆ.

    MORE
    GALLERIES

  • 88

    iPhone 14 Plus: ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​!

    ನೀವು iPhone 14 ಸ್ಮಾರ್ಟ್‌ಫೋನ್‌ನ ಫೀಚರ್ಸ್​ ಬಗ್ಗೆ ಹೇಳುವುದಾದ್ರೆ, ಇದು 6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ, A15 ಬಯೋನಿಕ್ ಚಿಪ್‌ಸೆಟ್, 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ + 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್‌ಗಳು, 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

    MORE
    GALLERIES