ಫ್ಲಿಪ್‌ಕಾರ್ಟ್ ನಡೆಸುತ್ತಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಪೋಕೋ, ವಿವೋ ಮತ್ತು ರಿಯಲ್‌ಮಿ ಕಂಪೆನಿಗಳ ವಿವಿಧ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರಿ ಕೊಡುಗೆಗಳಿವೆ. ಆದರೆ ಆ್ಯಪಲ್ ಐಫೋನ್ 14 ಇದುವರೆಗೆ ಭಾರೀ ಬೇಡಿಕೆಯಲ್ಲಿದೆ. ಇದರ 128GB ಸ್ಟೋರೇಜ್ ಹೊಂದಿರುವ ಬೇಸ್ ಮಾಡೆಲ್ ಐಫೋನ್ 14 ಮೂಲ ಬೆಲೆ 79,900 ರೂ ಆಗಿತ್ತು, ಆದರೆ ಈಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 65,999 ರೂ.ಗೆ ಲಭ್ಯವಿದೆ.
ಇತರ ಆಫರ್ಸ್: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಅನ್ನು ಖರೀದಿಸುವ ಐಸಿಐಸಿಐ ಗ್ರಾಹಕರು 10 ಪ್ರತಿಶತದಷ್ಟು (ರೂ. 1,000 ವರೆಗೆ) ರಿಯಾಯಿತಿಯನ್ನು ಪಡೆಯಬಹುದು. ಇದೇ ರೀತಿಯ ಕೊಡುಗೆಯು ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಲಭ್ಯವಿದೆ. ಇವುಗಳ ಹೊರತಾಗಿ ಹಳೆ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಮೂಲಕ ರೂ.20 ಸಾವಿರದವರೆಗೂ ಬೆಲೆ ಕಡಿಮೆ ಮಾಡಬಹುದು. ಆದರೆ ಈ ವಿನಿಮಯ ಮೌಲ್ಯವು ನೀವು ಎಕ್ಸ್ಚೇಂಜ್ ಮಾಡುವ ಫೋನ್ ಮಾದರಿ ಮತ್ತು ಗುಣಮಟ್ಟದ ಆಧಾರದ ಮೇಲೆ ಅವಲಂಬಿಸಿರುತ್ತದೆ.
iPhone 14 ಫೀಚರ್ಸ್: ಐಫೋನ್ 14 ಸೆರಾಮಿಕ್ ಶೀಲ್ಡ್ ಡಿಸ್ಪ್ಲೇನೊಂದಿಗೆ ಬರುತ್ತದೆ. ಇದು 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 2532x1170 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಐಫೋನ್ 14 A15 ಬಯೋನಿಕ್ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದು ಗುಣಮಟ್ಟದ ಪ್ರೊಸೆಸರ್ನೊಂದಿಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಫೋನ್ iOS 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.