ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ಏರ್‌ಟೆಲ್ 5ಜಿ ಬಳಕೆದಾರರಿಗೆ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಲೇ ಇದೆ. ಇದಲ್ಲದೆ ಇತ್ತೀಚೆಗೆ, ಕಂಪೆನಿಯು ಅರ್ಹ ಬಳಕೆದಾರರಿಗೆ ದೈನಂದಿನ ಡೇಟಾ ಮಿತಿಯಿಲ್ಲದೆ ಅನಿಯಮಿತ 5ಜಿ ಇಂಟರ್ನೆಟ್ ಅನ್ನು ನೀಡುವುದಾಗಿ ಘೋಷಿಸಿದೆ. ಹಾಗೆಯೇ ಏರ್‌ಟೆಲ್ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಿಮ್ ಬಳಕೆದಾರರು ಅನಿಯಮಿತ ವೇಗದ ಇಂಟರ್ನೆಟ್ ಅನ್ನು ಪಡೆಯಬಹುದು ಎಂದು ಕಂಪೆನಿ ಹೇಳಿದೆ.
ಪ್ರಸ್ತುತ, ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ ರೀಚಾರ್ಜ್ ಯೋಜನೆಗಳ ಪಟ್ಟಿ ನೋಡಿದರೆ, ರೂ.239 ರಿಂದ ರೂ.3,359 ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿಯಾಗಿ ಗ್ರಾಹಕರಿಗೆ ಅನಿಯಮಿತ 5G ಇಂಟರ್ನೆಟ್ ಅನ್ನು ಉಚಿತವಾಗಿ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ಗಳಿಗೆ ಅನುಗುಣವಾಗಿ ಮಾನ್ಯತೆ ಮತ್ತು ಪ್ರಯೋಜನಗಳು ಮೊದಲಿನಂತೆಯೇ ಇರುತ್ತದೆ. ವಿಶೇಷವಾಗಿ ಈ ಪ್ಲ್ಯಾನ್ನಲ್ಲಿ ನೀವು ಹೆಚ್ಚುವರಿಯಾಗಿ ಅನಿಯಮಿತ 5G ಇಂಟರ್ನೆಟ್ ಅನ್ನು ಪಡೆಯಬಹುದು.
ಏರ್‌ಟೆಲ್ ಸಿಮ್ ಬಳಕೆದಾರರು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಈ ಆಫರ್ ಅನ್ನು ಕ್ಲೈಮ್ ಮಾಡಬಹುದು. ಅನಿಯಮಿತ 5G ಡೇಟಾಗಾಗಿ ಏರ್‌ಟೆಲ್ ಬಳಕೆದಾರರು ಯಾವಾಗಲೂ ತಮ್ಮ ಫೋನ್‌ನಲ್ಲಿ ರೂ.239 ಅಥವಾ ಅದಕ್ಕಿಂತ ಹೆಚ್ಚಿನ ಅನಿಯಮಿತ ರೀಚಾರ್ಜ್ ಯೋಜನೆಯನ್ನು ಹೊಂದಿರಬೇಕು. ಗ್ರಾಹಕರು ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗೆ ಚಂದಾದಾರರಾಗಿದ್ದರೆ, ಅವರು ಅನಿಯಮಿತ 5G ಡೇಟಾ ಕೊಡುಗೆಯನ್ನು ಪ್ರತ್ಯೇಕವಾಗಿ ಕ್ಲೈಮ್ ಮಾಡಬೇಕಾಗುತ್ತದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಏರ್‌ಟೆಲ್ ಈಗಾಗಲೇ 500 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ತನ್ನ 5G ಸೇವೆಗಳನ್ನು ವಿಸ್ತರಿಸಿದೆ. ಈ ಕಂಪೆನಿಯು ಪ್ರತಿದಿನ 30 ರಿಂದ 40 ನಗರಗಳಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಕಡಪ, ಓಂಗೋಲ್, ಏಲೂರು, ವಿಜಯನಗರ, ನೆಲ್ಲೂರು, ಅನಂತಪುರ, ವೈಜಾಗ್, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ಗುಂಟೂರು, ಕರ್ನೂಲ್, ತಿರುಪತಿ ಮತ್ತು ಆಂಧ್ರಪ್ರದೇಶದ ಇತರ ನಗರಗಳಲ್ಲಿ ಸಹ ಈಗಾಗಲೇ 5G ಸೇವೆಗಳನ್ನು ಪ್ರಾರಂಭಿಸಲಾಗಿದೆ.
57% ರಷ್ಟು ಏರಿಕೆ: ಭಾರ್ತಿ ಏರ್‌ಟೆಲ್ ಇತ್ತೀಚೆಗೆ, ಬೇಸ್ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಬೆಲೆಯಲ್ಲಿ 57 ಶೇಕಡಾದಷ್ಟು ಹೆಚ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ಏರ್‌ಟೆಲ್ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಏರ್‌ಟೆಲ್ ಕಂಪೆನಿಯು ಇತ್ತೀಚೆಗೆ ಕೆಲವೊಂದು ರೀಚಾರ್ಜ್ ಬೆಲೆಯಲ್ಲಿ ಸ್ವಲ್ಪ ಏರಿಕೆ ಮಾಡಿತ್ತು. ಇದೀಗ ಮತ್ತೆ ಪ್ರೀಪೇಯ್ಡ್ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿದೆ.