ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL)184 ರೂ.ವಿನ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯೊಂದಿಗೆ ದಿನಕ್ಕೆ 1GB ಡೇಟಾವನ್ನು ನೀಡಲಾಗುವುದು. ಇದರ ಹೊರತಾಗಿ, ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮತ್ತು 100 SMS ಅನ್ನು ಪ್ರತಿದಿನ ನೀಡಲಾಗುತ್ತದೆ. 1GB ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗ 80kbps ಆಗಿರುತ್ತದೆ. ಹೆಚ್ಚುವರಿ ಪ್ರಯೋಜನಗಳ ಕುರಿತು ಮಾತನಾಡುವುದಾರೆ. ಈ ಯೋಜನೆಯೊಂದಿಗೆ Lystn ಪ್ರಾಡ್ಕಾಸ್ಟ್ ಪ್ರವೇಶವ ಸಿಗಲಿದೆ.
BSNL ನ 185 ರೂ ಪ್ಲಾನ್ ಕೂಡ ಅದ್ಭುತವಾಗಿದೆ. ಇದರಲ್ಲಿ ಬಳಕೆದಾರರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಈ ಯೋಜನೆಯ ಮೂಲಕ ಪ್ರತಿದಿನ 1GB ಡೇಟಾವನ್ನು ಸಹ ಪಡಿಯುತ್ತಾರೆ. ಇದರೊಂದಿಗೆ 100 SMS ಮತ್ತು ಅನಿಯಮಿತ ಕರೆ ಸೌಲಭ್ಯವಿದೆ. 1GB ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗ 80kbps ಆಗಿರುತ್ತದೆ. ಪ್ರೋಗ್ರೆಸ್ಸಿವ್ ವೆಬ್ ಅಪ್ಲಿಕೇಶನ್ನಲ್ಲಿ ಬಂಡಲಿಂಗ್ ಆಫ್ ಚಾಲೆಂಜಸ್ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಯೋಜನೆಯೊಂದಿಗೆ ಒದಗಿಸಲಾಗುತ್ತಿದೆ.
186 ರೂ.ವಿನ ಯೋಜನೆಯ ಮೂಲಕ ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಇದರಲ್ಲಿ ಪ್ರತಿದಿನ 1 GB ಡೇಟಾ ಲಭ್ಯವಿದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತದೆ. 184 ರೂ ಮತ್ತು 185 ರೂ ಯೋಜನೆಗಳಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಇದರಲ್ಲಿ ನೀಡಲಾಗಿದೆ. ಜೊತೆಗೆ, ಇದು BSNL ಟ್ಯೂನ್ಸ್ ಮತ್ತು ಹಾರ್ಡಿ ಗೇಮ್ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ. 1GB ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗ 80kbps ಆಗಿರುತ್ತದೆ.
347ರೂ.ವಿನ ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 2GB ಡೇಟಾ, 100 SMS ಮತ್ತು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು M/s OnMobile Global Ltd ನಿಂದ ಪ್ರೋಗ್ರೆಸ್ಸಿವ್ ವೆಬ್ APP (PWA) ನಲ್ಲಿ ಚಾಲೆಂಜ್ ಅರೆನಾ ಮೊಬೈಲ್ ಗೇಮಿಂಗ್ ಸೇವೆಯ ಹೆಚ್ಚುವರಿ ಪ್ರಯೋಜನದಲ್ಲಿ ಬಂಡಲ್ ಮಾಡಲಾಗಿದೆ.