ದೇಶದ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗೆ ಗಣರಾಜ್ಯೋತ್ಸವದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಇದರಲ್ಲಿ ಗ್ರಾಹಕರು 225GB ಇಂಟರ್ನೆಟ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ತೆರೆದಿಟ್ಟಿದೆ. ಗ್ರಾಹಕರಿಗೆ ಹೆಚ್ಚಿನ ಇಂಟರ್ನೆಟ್ ಒದಗಿಸುವ ಸಲುವಾಗಿ BSNL ವಿಶೇಷವಾದ 'ಗಣರಾಜ್ಯೋತ್ಸವ ಆಫರ್ 2022' ಬಿಡುಗಡೆ ಮಾಡಿದ್ದು, ಅದು ಜನವರಿ 31, 2022 ರವರೆಗೆ ಸಿಗಲಿದೆ.
BSNL ಗಣರಾಜ್ಯೋತ್ಸವದ ವಿಶೇಷ ಕೊಡುಗೆಯನ್ನು ಬಿಡುಗಡೆ ಮಾಡಿದೆ: ದೇಶದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, BSNL ತನ್ನ ಬಳಕೆದಾರರಿಗೆ 'ಗಣರಾಜ್ಯ ದಿನದ ಕೊಡುಗೆ 2022' ಬಿಡುಗಡೆ ಮಾಡಿದೆ. ಜನವರಿ 31, 2022 ರವರೆಗೆ ನಡೆಯುವ ಈ ಕೊಡುಗೆಯಲ್ಲಿ, ಕಂಪನಿಯ ಅತ್ಯಂತ ಜನಪ್ರಿಯ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಳಕೆದಾರರಿಗೆ 75 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ.
225 GB ಡೇಟಾವನ್ನು ಉಚಿತವಾಗಿ ಪಡೆಯಿರಿ: ಜನವರಿ 31 ರ ಮೊದಲು ಈ ಪ್ಲಾನ್ ಅನ್ನು ಖರೀದಿಸಿದರೆ, ಈ ಯೋಜನೆಯ ಮಾನ್ಯತೆಯು 75 ದಿನಗಳಿಂದ ಹೆಚ್ಚಾಗುತ್ತದೆ ಅಂದರೆ ಈಗ ಈ ಯೋಜನೆಯು 365 ದಿನಗಳ ಬದಲಿಗೆ 440 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ದಿನಕ್ಕೆ 3GB ಪ್ರಕಾರ 225GB ಡೇಟಾವನ್ನು ಉಚಿತವಾಗಿ ಸಿಗಲಿದೆ. ಇದರೊಂದಿಗೆ 75 ದಿನಗಳವರೆಗೆ ಅನಿಯಮಿತ ಕರೆ ಮತ್ತು ಒಟ್ಟು 7,500 SMS ಸಹ ಲಭ್ಯವಿರುತ್ತದೆ.