BSNL Prepaid Plan: ಕಡಿಮೆ ಬೆಲೆಗೆ 3GB ಡೇಟಾ ಒದಗಿಸುವ ಪ್ರಿಪೇಯ್ಡ್ ಪ್ಲಾನ್ಗಳಿವು!
News18 Kannada | November 28, 2020, 2:16 PM IST
1/ 7
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗ್ರಾಹಕರಿಗಾಗಿ ಹಲವು ಪ್ರಿಪೇಯ್ಡ್ ಪ್ಲಾನ್ಗಳನ್ನು ಪರಿಚಯಿಸುತ್ತಾ ಬಂದಿದೆ. ಜೊತೆಗೆ ಹಲವು ಬೆನಿಫಿಟ್ ನೀಡುತ್ತಾ ಬಂದಿದೆ. ಇದೀಗ 250 ರೂ ಒಳಗಿನ ಬಿಎಸ್ಎನ್ಎಲ್ ಪ್ರಿಪೇಯ್ಡ್ ಪ್ಲಾನ್ಗಳು ಯಾವುದಿದೆ? ಏನೆಲ್ಲಾ ಬೆನಿಫಿಟ್ ನೀಡುತ್ತಿದೆ? ತಿಳಿಯೋಣ.
2/ 7
ಬಿಎಸ್ಎನ್ಎಲ್ 247 ಪ್ರಿಪೇಯ್ಡ್ ಪ್ಲಾನ್: ಈ ಪ್ಲಾನ್ ಮೂಲಕ ಗ್ರಾಹಕರು ಅನಿಯಮಿತ ಲೋಕಲ್ ಮತ್ತು ನ್ಯಾಷನಲ್ ಕರೆಯನ್ನು ಮಾಡಬಹುದಾಗಿದೆ. ಆದರೆ ಕರೆ ಮಾಡಲು ದಿನಕ್ಕೆ 250 ನಿಮಿಷಗಳು ಮಾತ್ರ ಸಿಗಲಿದೆ.
3/ 7
ಅದರ ಜೊತೆಗೆ 80 ಕೆಬಿಪಿಎಸ್ ಡೇಟಾ ನೀಡುತ್ತಿದೆ. ಪ್ರತಿದಿನ ಬಳಕೆಗಾಗಿ 3GB ಡೇಟಾ ಸಿಗಲಿದೆ. ಮತ್ರವಲ್ಲದೆ 100 ಎಸ್ಎಮ್ಎಸ್ ಉಚಿತವಾಗಿ ನೀಡುತ್ತಿದೆ.
4/ 7
247 ರೂ.ವಿನ ಪ್ರಿಪೇಯ್ಡ್ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ ಪ್ರಮೋಷನಲ್ ಆಫರ್ ಮೂಲಕ 40 ದಿನಗಳ ವ್ಯಾಲಿಡಿಟಿಯನ್ನು ವೃದ್ಧಿಸಬಹುದಾಗಿದೆ. ಪ್ರೊಮೋಷನಲ್ ಆಫರ್ ನವೆಂಬರ್ 30ರವರೆಗೆ ಮಾತ್ರ ಬಳಕೆಗೆ ಸಿಗಲಿದೆ.
5/ 7
ರಿಲಾಯನ್ಸ್ ಜಿಯೋ 349 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಮೂಲಕ ಗ್ರಾಹಕರಿಗೆ 3ಜಿಬಿ ಡೇಟಾ ಒದಗಿಸುತ್ತಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಸೇರಿಂದಂತೆ ಜಿಯೋದಿಂದ ಬೇರೆ ನೆಟ್ವರ್ಕ್ ಕರೆಯ ಮೇಲೆ 1 ಸಾವಿರ ನಿಮಿಷಗಳ ಎಫ್ಯುಪಿ ನೀಡುತ್ತಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.
6/ 7
ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ 398 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಇದರ ಮೂಲಕ 3ಜಿಬಿ ಡೇಟಾ ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.