BSNL: 147 ರೂ. ವಿನ ಪ್ರಿಪೇಯ್ಡ್ ಪ್ಲಾನ್; 10GB ಉಚಿತ ಡೇಟಾ!
BSNL Prepaid Plan: ಬಿಎಸ್ಎನ್ಎಲ್ ಸಂಸ್ಥೆ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೂತನ ಪ್ಲಾನ್ ಅನ್ನು ಪ್ರಕಟಿಸಿದೆ. ಈ ಪ್ಲಾನ್ ಬೆಲೆ 147 ರೂಪಾಯಿಯಾಗಿದ್ದು, ಪ್ರಿಪೇಯ್ಡ್ ಗ್ರಾಹಕರು ಮಾತ್ರ ಈ ಪ್ಲಾನ್ ಅಳವಡಿಸಬಹುದಾಗಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್ವೊಂದನ್ನು ಹೊತ್ತು ತಂದಿದೆ. ಕೊರೋನಾ ಕಾಲದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದ್ದು, ಅದಕ್ಕಾಗಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಗೆ 10ಜಿಬಿ ಡೇಟಾವನ್ನು ಒದಗಿಸುವ ನೂತನ ಪ್ಲಾನ್ ಪರಿಚಯಿಸಿದೆ.
2/ 11
ಬಿಎಸ್ಎನ್ಎಲ್ ಸಂಸ್ಥೆ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೂತನ ಪ್ಲಾನ್ ಅನ್ನು ಪ್ರಕಟಿಸಿದೆ. ಈ ಪ್ಲಾನ್ ಬೆಲೆ 147 ರೂಪಾಯಿಯಾಗಿದ್ದು, ಪ್ರಿಪೇಯ್ಡ್ ಗ್ರಾಹಕರು ಮಾತ್ರ ಈ ಪ್ಲಾನ್ ಅಳವಡಿಸಬಹುದಾಗಿದೆ.
3/ 11
ಗ್ರಾಹಕರು 147 ರೂಪಾಯಿ ರೀಚಾರ್ಜ್ ಮಾಡಿದರೆ 10ಜಿಬಿ ಡೇಟಾ ಉಚಿತವಾಗಿ ಪಡೆಯಬಹುದಾಗಿದೆ.
4/ 11
ಅಷ್ಟು ಮಾತ್ರವಲ್ಲ, ಅನಿಯಮಿತ ಲೋಕಲ್, ಎಸ್ಟಿಡಿ ಕರೆ ಮತ್ತು ನ್ಯಾಷನಲ್ ರೋಮಿಂಗ್ ಸೇವೆ ಪಡೆಯಬಹುದಾಗಿದೆ. ಜೊತೆಗೆ ದಿನಕ್ಕೆ 250 ನಿಮಿಷಗಳ ವಾಯ್ಸ್ ಕರೆ ಸೌಲಭ್ಯ ನೀಡುತ್ತಿದೆ.
5/ 11
ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಚೆನ್ನೈ ಪ್ರದೇಶಿಗರಿಗೆ ಮಾತ್ರ ನೂತನ ಪ್ಲಾನ್ ಅಳವಡಿಸಿಕೊಳ್ಳಬಹುದಾಗಿದೆ.
6/ 11
ಇದರ ಜೊತೆಗೆ ಬಿಎಸ್ಎನ್ಎಲ್ 1999 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ದಿನಕ್ಕೆ 3ಜಿಬಿ ಡೇಟಾವನ್ನು ಈ ಪ್ಲಾನ್ ಒದಗಿಸಲಿದೆ.
7/ 11
1999 ರೂ ರೀಚಾರ್ಜ್ ಮಾಡಿದರೆ ಲೋಕಲ್ ಎಸ್ಟಿಡಿ ಜೊತೆಗೆ ಪ್ರತಿ ದಿನ 250 ನಿಮಿಷಗಳ ಉಚಿತ ಕರೆ ಸೌಲಭ್ಯ ಒದಗಿಸುತ್ತಿದೆ.
8/ 11
365 ದಿನಗಳಂತೆ ಪ್ರತಿ ದಿನ 3ಜಿಬಿ ಡೇಟಾ ನೀಡುತ್ತಿದೆ.
9/ 11
ಸ್ವಾತಂತ್ರ ದಿನಾಚರಣೆ ಅಂಗವಾಗಿ ಬಿಎಸ್ಎನ್ಎಲ್ 247 ರೂ.ವಿನ ವೋಚರ್ ಬಿಡುಗಡೆ ಮಾಡಿದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ, 3ಜಿಬಿ ಡೇಟಾ ನೀಡುತ್ತಿದೆ.
10/ 11
ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅಗಸ್ಟ್ 1 ರಿಂದ 31ರ ವರೆಗೆ ಈ ಪ್ಲಾನ್ ಅನ್ನು ಗ್ರಾಹಕರು ಅಳವಡಿಸಬಹುದಾಗಿದೆ.