ಸರ್ಕಾರಿ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಒಂದೊಳ್ಳೆ ಸುದ್ದಿಯನ್ನು ನೀಡಿದೆ. ಅತ್ಯಂತ ಕಡಿಮೆ ಬೆಲೆಗೆ ರೀಚಾರ್ಜ್ ಮಾಡುವ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಹಿಂದೆಂದಿಗಿಂಲೂ ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ಯೋಜನೆಗಳನ್ನು ನೀಡುತ್ತವೆ. ಗ್ರಾಹಕರು ಈಗ ಅನುಕೂಲಕ್ಕೆ ಅನುಗುಣವಾಗಿ ರೀಚಾರ್ಜ್ ಮಾಡಬಹುದು.
2/ 7
ಸರ್ಕಾರಿ ಟೆಲಿಕಾಂ ಕಂಪನಿ BSNL ಗ್ರಾಹಕರಿಗೆ ಇಂತಹ ಯೋಜನೆಗಳನ್ನು ನೀಡುತ್ತದೆ. ಈ ಚೀಪ್ & ಬೆಸ್ಟ್ ಯೋಜನೆಯ ಬೆಲೆ ಜಸ್ಟ್ 50 ರೂಪಾಯಿ ಅಂದ್ರೆ ನೀವು ನಂಬಲೇಬೇಕು.
3/ 7
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಗ್ರಾಹಕರಿಗೆ ಕೇವಲ 49 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡುತ್ತದೆ. BSNL ನ ಈ ಪ್ಲ್ಯಾನ್ ನ ಅವಧಿ 20 ದಿನಗಳು. ಈ ಪ್ಲ್ಯಾನ್ ಹಾಕಿಸಿಕೊಂಡ ಗ್ರಾಹಕರು ಉಚಿತ ಕರೆ, ಡೇಟಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
4/ 7
49 ರೂ. ಪ್ಲ್ಯಾನ್ ನಲ್ಲಿ 1GB ಡೇಟಾವನ್ನು ನೀಡಲಾಗಿದೆ. ಇದರೊಂದಿಗೆ 100 ನಿಮಿಷಗಳ ಲೋಕಲ್, ಎಸ್ ಟಿಡಿ ಧ್ವನಿ ಕರೆ ಸೌಲಭ್ಯಗಳನ್ನು ಸಹ ಇದರಲ್ಲಿ ನೀಡಲಾಗುತ್ತಿದೆ.
5/ 7
ಇನ್ನು 29 ರೂ. ಯೋಜನೆಯೂ ಇದೆ. 49 ರ ಹೊರತಾಗಿ BSNL ತನ್ನ ಗ್ರಾಹಕರಿಗೆ 29 ರೂ.ಗೆ ವಿಶೇಷ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಪ್ಲ್ಯಾನ್ 5 ದಿನಗಳ ಅವಧಿಯನ್ನು ಹೊಂದಿದೆ. ಇದರಲ್ಲೂ 1 GB ಡೇಟಾ, ಫ್ರೀ ಕಾಲ್ ಸೌಲಭ್ಯ ಇದೆ
6/ 7
ಇನ್ನು BSNL ಕಂಪನಿಯು ತನ್ನ 4G ಸೇವೆಯನ್ನು ಹೊರತರಲು ತಯಾರಿ ನಡೆಸುತ್ತಿದೆ. ಇದು ಜನವರಿಯಿಂದ ಪ್ರಾರಂಭವಾಗಬಹುದು. ಕಂಪನಿಯು 4G ನೆಟ್ವರ್ಕ್ ಸ್ಥಾಪಿಸಲು TCS ಗೆ ಟೆಂಡರ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
7/ 7
ಮುಂದಿನ 2 ರಿಂದ 3 ದಿನಗಳಲ್ಲಿ ಟೆಂಡರ್ ಗೆ ಟಿಸಿಎಸ್ ತನ್ನ ಒಪ್ಪಿಗೆಯನ್ನು ನೀಡಬಹುದು. ಆಗ 1 ಲಕ್ಷ ಟವರ್ಗಳನ್ನು ಸ್ಥಾಪಿಸಲು ಕಂಪನಿಗೆ ಆದೇಶ ಸಿಗಲಿದೆ ಎನ್ನಲಾಗುತ್ತಿದೆ.