ಅಗ್ಗದ ಪ್ಲಾನ್ ಗಳಿಗಾಗಿ ಟೆಲಿಕಾಂ ಕಂಪನಿಗಳ ನಡುವೆ ನಿರಂತರ ಪೈಪೋಟಿ ಇದೆ. ಹೀಗಾಗಿ ಸರ್ಕಾರಿ ಟೆಲಿಕಾಂ ಕಂಪನಿ BSNL ನ ಕೈಗೆಟುಕುವ ಬೆಲೆಯಲ್ಲಿ ಭರ್ಜರಿ ಯೋಜನೆಯನ್ನು ನೀಡಿದೆ. ಹೆಚ್ಚಿನ ಡೇಟಾ ಅಗತ್ಯವಿರುವ ಗ್ರಾಹಕರಿಗೆ ಈ ಯೋಜನೆಯು ಸೂಪರ್ ಆಫರ್ ಅಂತಲೇ ಹೇಳಬಹುದು. ಏಕೆಂದರೆ ದಿನಕ್ಕೆ 5 GB ಡೇಟಾ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ. ಇದರೊಂದಿಗೆ 84 ದಿನಗಳ ದೀರ್ಘ ವ್ಯಾಲಿಡಿಟಿಯೂ ಲಭ್ಯವಾಗಲಿದೆ.