BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

BSNL ನ 2399 ರೂ ಪ್ಲಾನ್ ಮತ್ತು ಜಿಯೋ  2545 ರೂ ಪ್ಲಾನ್​ ಗೆ ಹೆಚ್ಚು ಮಾನ್ಯತೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಯು ಅಲ್ಪಾವಧಿವರೆಗೆ ಮಾತ್ರ. ಅಂದಹಾಗೆಯೇ BSNL ನ ಆಫರ್​ ಇಂದು ಕೊನೆಯಾಗಲಿದೆ. ಆದರೆ Jio ಕೊಡುಗೆಯು ಜನವರಿ 2 ರಂದು ಕೊನೆಗೊಳ್ಳುತ್ತದೆ.

First published:

  • 16

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    ನಾಳೆಯಿಂದ ಹೊಸ ವರ್ಷದ ಆರಂಭ. ಹೀಗಿರುವಾಗ ಟೆಲಿಕಾಂ ಕಂಪನಿಗಳು ವಾರ್ಷಿಕ ಯೋಜನೆಗಳಲ್ಲಿ ಕೆಲವು ಕೊಡುಗೆಗಳ ನೀಡುತ್ತಿದೆ. BSNL ಮತ್ತು ರಿಲಯನ್ಸ್ ಜಿಯೋ ಎರಡು ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ವಾರ್ಷಿಕ ಯೋಜನೆಗಳಲ್ಲಿ ಮಾನ್ಯತೆಯ ವಿಸ್ತರಣೆಗಳನ್ನು ನೀಡುತ್ತಿವೆ.

    MORE
    GALLERIES

  • 26

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    BSNL ನ 2399 ರೂ ಪ್ಲಾನ್ ಮತ್ತು ಜಿಯೋ  2545 ರೂ ಪ್ಲಾನ್​ ಗೆ ಹೆಚ್ಚು ಮಾನ್ಯತೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಯು ಅಲ್ಪಾವಧಿವರೆಗೆ ಮಾತ್ರ. ಅಂದಹಾಗೆಯೇ BSNL ನ ಆಫರ್​ ಇಂದು ಕೊನೆಯಾಗಲಿದೆ. ಆದರೆ Jio ಕೊಡುಗೆಯು ಜನವರಿ 2 ರಂದು ಕೊನೆಗೊಳ್ಳುತ್ತದೆ. ಒಂದು ವೇಳೆ ಇದೇ ಪ್ರಯೋಜನ ಬೇಕಾದರೆ ರೀಚಾರ್ಜ್ ಮಾಡಬಹುದಾಗಿದೆ. ಆದರೆ ಸ್ವಲ್ಪ ಸಮಯ ಮಾತ್ರ ಉಳಿದಿದೆ.

    MORE
    GALLERIES

  • 36

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    BSNL ಕಂಪನಿಯ 2399 ರೂ.ವಿನ ಪ್ರಿಪೇಯ್ಡ್ ಯೋಜನೆಗಾಗಿ ಡಿಸೆಂಬರ್ 31, 2021 ರ ಮೊದಲು ರೀಚಾರ್ಜ್ ಮಾಡುವ ಗ್ರಾಹಕರು 365 ದಿನಗಳ ಬದಲಿಗೆ 425 ದಿನಗಳವರೆಗೆ ವಿಸ್ತೃತ ವ್ಯಾಲಿಡಿಟಿಯನ್ನು ಪಡೆಯಬಹುದು. ಈ BSNL ವಾರ್ಷಿಕ ಯೋಜನೆಯು ಬಳಕೆದಾರರಿಗೆ ದಿನಕ್ಕೆ 3GB ಯಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ, ಜೊತೆಗೆ ದಿನಕ್ಕೆ 100 SMS ಒದಗಿಸುತ್ತದೆ. ಅದರೊಂದಿಗೆ ಭಾರತದಾದ್ಯಂತ ಯಾವುದೇ ನೆಟ್ವರ್ಕ್ಗೆ ಉಚಿತ ಧ್ವನಿ ಕರೆಗಳು ಮತ್ತು BSNL ಟ್ಯೂನ್ಸ್ ಮತ್ತು Eros Now ವಿಷಯಕ್ಕೆ ಚಂದಾದಾರಿಕೆಯನ್ನು ನೀಡುತ್ತದೆ. ದಿನಕ್ಕೆ 3GB ಡೇಟಾ ಮಿತಿಯ ನಂತರ, ಇಂಟರ್ನೆಟ್ ವೇಗವು 80 Kbps ಗೆ ಇಳಿಯುತ್ತದೆ.

    MORE
    GALLERIES

  • 46

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    ರಿಲಯನ್ಸ್ ಜಿಯೊದ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ 2545 ರೂ. ಆಗಿದೆ. ಇದು 336 ದಿನಗಳ ಮಾನ್ಯತೆಯನ್ನು ಹೊಂದಿದೆ, ಆದರೀಗ ಅದರ ಚಂದಾದಾರರಿಗೆ 29 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಜಿಯೋ ಹೊಸ ವರ್ಷದ ಆಫರ್ ಎಂದು ನೀಡುತ್ತಿದ್ದು, ಈ ಪ್ರಿಪೇಯ್ಡ್ ಕೊಡುಗೆಯು ಜನವರಿ 2, 2022 ರವರೆಗೆ ಮಾತ್ರ ಲಭ್ಯವಿರುತ್ತದೆ ಮತ್ತು ಆಫರ್ ಅನ್ನು ಪಡೆದುಕೊಳ್ಳಲು ಚಂದಾದಾರರು ದಿನಾಂಕದ ಮೊದಲು ರೀಚಾರ್ಜ್ ಮಾಡಬೇಕಾಗುತ್ತದೆ.

    MORE
    GALLERIES

  • 56

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    ಪ್ರಯೋಜನಗಳ ವಿಷಯದಲ್ಲಿ, 2545 ರೂ.ವಿನ ಜಿಯೋ ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಸ್ಟ್ರೀಮಿಂಗ್ ಪ್ರಯೋಜನಗಳ ವಿಷಯದಲ್ಲಿ, ಗ್ರಾಹಕರು JioCinema ಮತ್ತು JioTV ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಯೋಜನೆಯ ಒಟ್ಟು ಡೇಟಾ ಮಿತಿ 504GB ಆಗಿದೆ.

    MORE
    GALLERIES

  • 66

    BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

    2399 ರೂ.ವಿನ ಯೋಜನೆಯನ್ನು ಹೊರತುಪಡಿಸಿ, BSNL ಕಂಪನಿಯ 1498 ರೂ ಯೋಜನೆ ಮೂಲಕ 365 ದಿನಗಳ ಡೇಟಾವನ್ನು ನೀಡುತ್ತದೆ. ಇದು ದಿನಕ್ಕೆ 2GB ಯ ನಂತರ 40Kbps ವೇಗದೊಂದಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಇತರ ಯೋಜನೆಗಳಂತೆ, BSNL ಉಚಿತ ಹೊರಹೋಗುವ ಕರೆಗಳನ್ನು ಮತ್ತು ಯೋಜನೆಯೊಂದಿಗೆ ದಿನಕ್ಕೆ 100 SMS ಅನ್ನು ನೀಡುತ್ತದೆ. BSNL ಗ್ರಾಹಕರಿಗೆ ಲಭ್ಯವಿರುವ ಮುಂದಿನ ವಾರ್ಷಿಕ ಯೋಜನೆಯು ರೂ. 1,999 ಆಗಿದ್ದು, ಇದು 500GB ಡೇಟಾ ಮತ್ತು 100GB ಹೆಚ್ಚುವರಿ ಡೇಟಾವನ್ನು ಒಳಗೊಂಡಿರುತ್ತದೆ.

    MORE
    GALLERIES