ಈ ರೆಡ್ಮಿ ಸ್ಮಾರ್ಟ್ಫೋನ್ನಲ್ಲಿ ಎಕ್ಸ್ಚೇಂಜ್ ಆಫರ್ ಮಾತ್ರವಲ್ಲದೇ ಬ್ಯಾಂಕ್ ಆಫರ್ಸ್ಗಳೂ ಇವೆ. ಹೆಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಮೂಲಕ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವುದಾದರೆ 1000 ರೂಪಾಯಿ ರಿಯಾಯಿತಿ ಪಡೆಯಬಹುದು. ಇನ್ನು ಇಎಮ್ಐ ನಲ್ಲಿ ಕೂಡಾ ಫೋನ್ ಖರೀದಿಸಬಹುದು. ಇದಲ್ಲದೆ ಈ ಸ್ಮಾರ್ಟ್ಫೋನ್ 1 ವರ್ಷಗಳ ವ್ಯಾರಂಟಿಯನ್ನು ಪಡೆಯಬಹುದು.
ರೆಡ್ಮಿ 10 ಸ್ಮಾರ್ಟ್ಫೋನ್ 6ಜಿಬಿ RAM ಮತ್ತು 128ಜಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ನೀವು ಈ ಫೋನ್ನ ಸ್ಟೋರೇಜ್ ಅನ್ನು 1 TB ವರೆಗೆ ಹೆಚ್ಚಿಸಬಹುದು. ಇದು 6.7 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತಾಡುವುದಾದರೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿದೆ.