ಆ್ಯಪಲ್ ಐಫೋನ್ 14 ಆರಂಭಿಕ ಬೆಲೆ ರೂ.79,900. ಫ್ಲಿಪ್ಕಾರ್ಟ್ ಹೊಸ ವರ್ಷದ 2023 ರ ಸಂದರ್ಭದಲ್ಲಿಐಫೋನ್ 14 ನಲ್ಲಿ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಅನ್ನು ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ಕೇವಲ ರೂ 46,990 ಕ್ಕೆ ಖರೀದಿಸಬಹುದು. ಅಂದರೆ ಈ ಸ್ಮಾರ್ಟ್ಫೋನ್ ಮೇಲೆ ರೂ 32,901 ರಿಯಾಯಿತಿಯೊಂದಿಗೆ ಲಭ್ಯವಿದೆ. ಇದೇ ರ್ಈತಿ ಹಲವಾರು ಆಫರ್ಸ್ಗಳು ಕೂಡ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದೆ.
128GB ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಐಫೋನ್ 14 ಬೇಸ್ ಮಾಡೆಲ್ ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ರೂ 73,990 ಕ್ಕೆ ರೂ 5910 ರ ರಿಯಾಯಿತಿಯೊಂದಿಗೆ ಪಟ್ಟಿಮಾಡಲಾಗಿದೆ. ಹೆಚ್ಚುವರಿಯಾಗಿ, ಖರೀದಿದಾರರು ಹೆಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಇಎಮ್ಐ ವಹಿವಾಟುಗಳಲ್ಲಿ ರೂ.4,000 ವೇಗದ ರಿಯಾಯಿತಿಯನ್ನು ಪಡೆಯಬಹುದು. ಇದರಿಂದ ಸ್ಮಾರ್ಟ್ ಫೋನ್ ಬೆಲೆ ರೂ.69,990ಕ್ಕೆ ಇಳಿಕೆಯಾಗಲಿದೆ.