WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

ನಿತಿನ್ ಕಾಮತ್ ಅವರು ವಾಟ್ಸಾಪ್‌ನಲ್ಲಿ ಬರೋ ಜಾಬ್​ ಆಫರ್​ನ ಆಸೆಗೆ ಬಿದ್ದು ಮೋಸ ಹೋದ ಮತ್ತು ಹಣವನ್ನು ಕಳೆದುಕೊಂಡ ತನ್ನ ಸ್ನೇಹಿತರ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.

First published:

 • 18

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಈಗಂತೂ ಯಾರು? ಯಾವಾಗ? ಹೇಗೆ ಮೋಸ ಮಾಡುತ್ತಾರೆ ಅಂತ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ ಈ ಸೈಬರ್ ವಂಚನೆ ಪ್ರಕರಣಗಳಂತೂ ತುಂಬಾನೇ ಜಾಸ್ತಿಯಾಗಿವೆ. ನಿಮ್ಮ ಮೊಬೈಲ್ ಗೆ ಬರುವ ಅಪರಿಚಿತ ಸಂದೇಶಗಳು ಸಹ ಎಷ್ಟೋ ಬಾರಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕ್ಷಣ ಮಾತ್ರದಲ್ಲಿ ನಿಮಗೆ ಗೊತ್ತಾಗದಂತೆ ದೋಚಬಹುದು.

  MORE
  GALLERIES

 • 28

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಮಧ್ಯೆ, ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಬುಧವಾರ "ಬೇಗನೆ ತುಂಬಾ ಹಣವನ್ನು ಗಳಿಸಲು ಯಾವುದೇ ರೀತಿಯ ಸುಲಭದ ಮಾರ್ಗವಿಲ್ಲ" ಎಂಬುದನ್ನು ನೆನಪಿನಲ್ಲಿಡುವಂತೆ ಜನರಿಗೆ ಸಲಹೆ ನೀಡಿದರು. ಕಾಮತ್ ಅವರು ವಾಟ್ಸಾಪ್ ನಲ್ಲಿ ಬರುವ ಅರೆಕಾಲಿಕ ಉದ್ಯೋಗದ ಆಫರ್ ಬಲೆಗೆ ಬಿದ್ದು ವಂಚನೆಗೊಳಗಾದ ಮತ್ತು ಹಣವನ್ನು ಕಳೆದುಕೊಂಡ ಅವರಿಗೆ ಪರಿಚಿತವಿರುವವರೊಬ್ಬರ ಬಗ್ಗೆ ಮಾಹಿತಿ ನೀಡಿದ್ದಾರೆ.

  MORE
  GALLERIES

 • 38

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಅವರು ಹೇಳುವಂತೆ ಇದೆಲ್ಲವೂ ಮೊದಲಿಗೆ ವಾಟ್ಸಾಪ್ ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ಹಗರಣ ಪ್ರಾರಂಭವಾಯಿತು. "ಮೊದಲಿಗೆ ಮನಬಂದಂತೆ, ಉದಾಹರಣೆಗೆ ಪೆರು ದೇಶದಲ್ಲಿರುವ ರೆಸಾರ್ಟ್ ಒಂದರ ಬಗ್ಗೆ ನಕಲಿಯಾಗಿ ವಿಮರ್ಶೆಗಳನ್ನು ಬರೆಯುವ ಕಾರ್ಯ ನೀಡಲಾಯಿತು . ಹಾಗೆ ಅಲ್ಲಿ ನಕಲಿ ವಿಮರ್ಶೆಗಳನ್ನು ಹಾಕಿದ ಕೆಲಸಕ್ಕಾಗಿ 30 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. ಈ ರೀತಿಯ ಕೆಲಸಗಳನ್ನು ಮಾಡುವುದಾಗಿ ಒಪ್ಪಿಕೊಂಡ ಇತರರೊಂದಿಗೆ ಟೆಲಿಗ್ರಾಂ ಗುಂಪನ್ನು ರಚಿಸಲಾಯಿತು” ಎಂದು ಕಾಮತ್ ಹೇಳಿದರು.

  MORE
  GALLERIES

 • 48

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಜೆರೋಧಾದ ಕಾಮತ್ ನಿಜವಾದ ಹಣವನ್ನು ವರ್ಗಾಯಿಸುವುದಾಗಿ ಹೇಳಿಕೊಂಡ ಗ್ರೂಪ್ ನ ಇತರರು ತಮ್ಮ ಸ್ನೇಹಿತನನ್ನು ಹಾಗೆ ಮಾಡಲು ಪ್ರೇರೇಪಿಸಿದರು ಎಂದು ಕಾಮತ್ ಹೇಳಿದರು. ವರ್ಗಾವಣೆಯಾದ ಹಣವು ಪ್ಲಾಟ್ಫಾರ್ಮ್ ಮೂಲಕ ಗಳಿಸಿದ 30,000 ರೂಪಾಯಿಗಳಾಗಿರುವುದರಿಂದ ಅಪಾಯವು ಹೆಚ್ಚು ಕಂಡು ಬಂದಿಲ್ಲ ಎಂದು ಜೆರೋಧಾದ ಸಿಇಒ ಹೇಳಿದರು.

  MORE
  GALLERIES

 • 58

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  "ಆದರೆ ದುರಾಸೆಯಿಂದ ಹೆಚ್ಚಿನ ಹಣವನ್ನು ವರ್ಗಾಯಿಸಲಾಯಿತು, ಬಹುಶಃ ಗ್ರೂಪ್ ನ ಇತರರ ಒತ್ತಡದಿಂದಾಗಿ, ಅವರು ದೊಡ್ಡ ಮೊತ್ತದ ವರ್ಗಾವಣೆ ಮತ್ತು ಲಾಭವನ್ನು ಮಾಡಿದ್ದಾರೆಂದು ಹೇಳಿಕೊಂಡರು" ಎಂದು ಹೇಳಿದರು. ಆಗ ಆ ವ್ಯಕ್ತಿ ಗ್ರೂಪ್ ನಿಂದ ಹೊರಬರಲು ಪ್ರಯತ್ನಿಸಿದನು, ಆದರೆ ಅದು ಸಾಧ್ಯವಾಗಲಿಲ್ಲ ಮತ್ತು ನಿರ್ದಿಷ್ಟ ಸಂಖ್ಯೆಯ ವ್ಯಾಪಾರಿಗಳ ಅಗತ್ಯವಿದೆ ಎಂದು ತಿಳಿಸಲಾಯಿತು.

  MORE
  GALLERIES

 • 68

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಲ್ಲಿ ಆ ವ್ಯಕ್ತಿ ವ್ಯಾಪಾರಕ್ಕೆ ಹೆಚ್ಚಿನ ಹಣವನ್ನು ಸೇರಿಸಿದರು. "ಇದು 5 ಲಕ್ಷ ರೂಪಾಯಿಗಳಾಗಿದ್ದು, ಯಾವುದೇ ವ್ಯಕ್ತಿಗೂ ಇದು ದೊಡ್ಡ ಮೊತ್ತವೇ ಆಗಿರುತ್ತದೆ. ಆ ವ್ಯಕ್ತಿ ಇನ್ನಷ್ಟು ಹಣ ಸೇರಿಸುವುದಕ್ಕೆ ಹಣವಿಲ್ಲ ಅಂತ ಹೇಳಿದ್ದಕ್ಕೆ ಪ್ಲಾಟ್ಫಾರ್ಮ್ ಸಾಲವನ್ನು ಸಹ ನೀಡಿತು. "ವ್ಯಕ್ತಿಯು ಅಂತಿಮವಾಗಿ ಪರಿಸ್ಥಿತಿಯ ಬಗ್ಗೆ ತನ್ನ ಹೆಂಡತಿಗೆ ತಿಳಿಸಲು ನಿರ್ಧರಿಸಿದನು, ಅದು ಸೈಬರ್ ವಂಚನೆ ಎಂದು ಅವರು ತಕ್ಷಣ ಅರಿತುಕೊಂಡರು. ನಂತರ ಸಹಾಯಕ್ಕಾಗಿ ಪೊಲೀಸರನ್ನು ಸಹ ಸಂಪರ್ಕಿಸಿದರು" ಎಂದು ಕಾಮತ್ ಹೇಳಿದರು.

  MORE
  GALLERIES

 • 78

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  “ಖಾತೆಯ ಬ್ಯಾಲೆನ್ಸ್, ಲೆಡ್ಜರ್, ಲಾಭ ಮತ್ತು ನಷ್ಟ ಇತ್ಯಾದಿಗಳೊಂದಿಗೆ ಖಾತೆಯು ನಿಜವಾದ ಕ್ರಿಪ್ಟೋ ಖಾತೆಯಂತೆ ಕಾಣುತ್ತದೆ. ಆದರೆ ಇದೆಲ್ಲವೂ ನಕಲಿಯಾಗಿರುತ್ತದೆ, ಟೆಲಿಗ್ರಾಮ್ ಗ್ರೂಪ್ ಸೇರಿದಂತೆ ಅದರಲ್ಲಿರುವ ಎಲ್ಲವನ್ನೂ ತುಂಬಾನೇ ಚಾಣಾಕ್ಷತನದಿಂದ ನಿರ್ವಹಿಸಲಾಗಿರುತ್ತದೆ" ಎಂದು ಕಾಮತ್ ಹೇಳಿದರು.

  MORE
  GALLERIES

 • 88

  WhatsApp Scam: ವಾಟ್ಸಾಪ್​​ನಲ್ಲಿ ಬರೋ ‘ಜಾಬ್ ಆಫರ್’ ಗಳ ಬಗ್ಗೆ ಇರಲಿ ಎಚ್ಚರ! ಜೆರೋಧಾ ಸಿಇಓ ನಿತಿನ್ ಕಾಮತ್ ಈ ಬಗ್ಗೆ ಏನಂದ್ರು?

  ಪೊಲೀಸರು ಇಂತಹ ಅನೇಕ ಪ್ರಕರಣಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ ಮತ್ತು ಸುಶಿಕ್ಷಿತ ಜನರು ಸಹ ಹತ್ತಾರು ಲಕ್ಷ ರೂಪಾಯಿಗಳನ್ನು ಸಾಲ ಪಡೆದು ಹಣವನ್ನು ಕಳೆದುಕೊಂಡಿದ್ದಾರೆ. "ಪ್ರತಿಯೊಬ್ಬರೂ ಒಂದಲ್ಲ ಒಂದು ಇಂತಹ ಸೈಬರ್ ವಂಚನೆಗಳಿಗೆ ಗುರಿಯಾಗಿದ್ದಾರೆ ಮತ್ತು ನಾವು ಇದರ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಮೂಡಿಸಬೇಕಾಗಿದೆ” ಎಂದು ಕಾಮತ್ ಹೇಳಿದರು.

  MORE
  GALLERIES