ಮೋಟೋ ಇ13 ಫೋನ್ 4ಜಿಬಿ ರ್‍ಯಾಮ್ ಮತ್ತು 64ಜಿಬಿ ಮೆಮೊರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ರೂ. 7,999. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದು ಯುನಿಸೋಕ್ ಟಿ606 ಪ್ರೊಸೆಸರ್ ಹೊಂದಿದೆ. ಇದು 6.5 ಇಂಚಿನ ಡಿಸ್ಪ್ಲೇ, ವಾಟರ್ ಡ್ರಾಪ್ ನಾಚ್, 5000 mAh ಬ್ಯಾಟರಿ, 10 ವ್ಯಾಟ್ ವೇಗದ ಚಾರ್ಜಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಗೋ ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ Samsung Galaxy A03 ಸ್ಮಾರ್ಟ್‌ಫೋನ್ ಕೂಡ ಒಂದು. ಇದರ ಬೆಲೆ ರೂ. 7950. ನೀವು ಈ ಫೋನ್ ಅನ್ನು Amazon ನಲ್ಲಿ ಖರೀದಿಸಬಹುದು. ಇದು 3 ಜಿಬಿ ರ್‍ಯಾಮ್ ಮತ್ತು 32ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು ಯುನಿಸಾಕ್ ಟೈಗರ್ ಟಿ606 ಪ್ರೊಸೆಸರ್ ಅನ್ನು ಸಹ ಹೊಂದಿದೆ. ಇದು 5000 mAh ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 48ಎಮ್ಪಿ ಹಿಂಬದಿಯ ಕ್ಯಾಮೆರಾವನ್ನು ಸಹ ಹೊಂದಿದೆ.
ಟೆಕ್ನೋ ಸ್ಪಾರ್ಕ್ 9 ಫೋನ್ ಕೂಡ 8 ಸಾವಿರ ರೂಪಾಯಿ ಒಳಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 4ಜಿಬಿ ರ್‍ಯಾಮ್ ಮತ್ತು 64ಜಿಬಿ ಮೆಮೊರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ದರ ರೂ. 7,999. ಇದು ಮೀಡಿಯಾಟೆಕ್ ಹೆಲಿಯೋ G37 ಪ್ರೊಸೆಸರ್ ಹೊಂದಿದೆ. Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ 5000 mAh ಬ್ಯಾಟರಿಯನ್ನು ಸಹ ಹೊಂದಿದೆ. 10 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ನೋಕಿಯಾ ಸಿ20 ಪ್ಲಸ್ ಫೋನ್ ಕೂಡ ಇದೆ. ಇದರ ಬೆಲೆ ರೂ. 7,999. ಈ ಫೋನ್ 2 ಜಿಬಿ ರ್‍ಯಾಮ್ ಮತ್ತು 32ಜಿಬಿ ಮೆಮೊರಿಯನ್ನು ಹೊಂದಿದೆ. ಇದು ಯುನಿಸಾಕ್ SC9863A ಪ್ರೊಸೆಸರ್ ಅನ್ನು ಸಹ ಹೊಂದಿದೆ. ಇದು ಸ್ಟಾಕ್ ಆಂಡ್ರಾಯ್ಡ್ UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 8ಎಮ್ಪಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 4950 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ.