ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ನೀಡುತ್ತಿದೆ. ವಿವಿಧ ಕೊಡುಗೆಗಳು ಸಹ ಈ ವೆಬ್ಸೈಟ್ನಲ್ಲಿ ಲಭ್ಯವಿವೆ. ನೀವು ಬಜೆಟ್ ಬೆಲೆಯಲ್ಲಿ ಫೋನ್ ಖರೀದಿಸಲು ಬಯಸಿದರೆ ಇಲ್ಲಿದೆ ಸುವರ್ಣಾವಕಾಶ. ಈಗ ನೀವು 7 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಯಾವ ಸ್ಮಾರ್ಟ್ಫೋನ್ಗಳು ಲಭ್ಯವಿವೆ ಎಂಬುದನ್ನು ಇಲ್ಲಿ ತಿಳಿಯಬಹುದು.
ರೆಡ್ಮಿ 9ಎ ಸ್ಮಾರ್ಟ್ಫೋನ್ ಅನ್ನು ಕೂಡಾ ಈಗ ಫ್ಲಿಪ್ಕಾರ್ಟ್ನ ಆಫರ್ನಲ್ಲಿ ಖರೀದಿ ಮಾಡಬಹುದಾಗಿದೆ. ಇದೀಗ ಈ ಸ್ಮಾರ್ಟ್ಫೋನ್ ಅನ್ನು ಕೇವಲ 6599 ರೂಪಾಯಿಗೆ ಪಡೆಯಬಹುದು. ಈ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು 2 ಜಿಬಿ ರ್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಖರೀದಿಸುವುದಾದರೆ ಈ ಫೋನ್ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದು 6.53 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 5000 mAh ಬ್ಯಾಟರಿ ಮತ್ತು 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಟೆಕ್ನೋ ಪಾಪ್ 5 LET ಸ್ಮಾರ್ಟ್ಫೋನ್ ಸಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಫೋನ್ ಅನ್ನು 6499 ರೂಪಾಯಿಗೆ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಇದು 2 ಜಿಬಿ ರ್ಯಾಮ್, 32 ಜಿಬಿ ಮೆಮೊರಿ ಫೀಚರ್ಸ್ಗಳನ್ನು ಹೊಂದಿದೆ. ಈ ಫೋನ್ 6.5 ಇಂಚಿನ ಸ್ಕ್ರೀನ್, 5000 mAh ಬ್ಯಾಟರಿ ಮತ್ತು 8 ಎಮ್ಪಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಬ್ಯಾಂಕ್ ಕೊಡುಗೆಯನ್ನು ಸೇರಿಸಿದರೆ ನೀವು ಈ ಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.
ಇನ್ನೂ ನಿಮಗೆ ಸ್ಮಾರ್ಟ್ಫೋನ್ಗಳನ್ನು ಆಫರ್ಸ್ನಲ್ಲಿ ಖರೀದಿಸ್ಬೇಕಾದ್ರೆ. ಎಂಐ ವೆಬ್ ಸೈಟ್ ನಲ್ಲೂ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಇತ್ತೀಚೆಗೆ ಕಂಪನಿಯು ಕ್ಲಿಯರೆನ್ಸ್ ಮಾರಾಟವನ್ನು ನಡೆಸುತ್ತಿದೆ. ಆದ್ದರಿಂದ ನೀವು ಫೋನ್ ಖರೀದಿಸಲು ಯೋಜಿಸುತ್ತಿದ್ದರೆ. ಎಮ್ಐ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಖರೀದಿ ಮಾಡಬಹುದಾಗಿದೆ. ಆದರೆ ಇದು ಸೀಮಿತ ಅವಧಿಯ ಡೀಲ್ ಆಗಿರುವುದರಿಂದ ಕೆಲವು ದಿನಗಳವರೆಗೆ ಮಾತ್ರ ಇರುತ್ತದೆ.