Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

ಸ್ಮಾರ್ಟ್​ಫೋನ್​ಗಳು ಇತ್ತೀಚೆಗೆ ಬಹಳಷ್ಟು ಬೇಡಿಕೆಯ ಸಾಧನವಾಗಿಬಿಟ್ಟಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಹಲವಾರು ಉತ್ತಮ ಗುಣಮಟ್ಟದ ಸ್ಮಾರ್ಟ್​ಫೋನ್​ಗಳಿವೆ. ಆದರೆ ಗ್ರಾಹಕರಿಗೆ ಕೆಲವೊಮ್ಮೆ ಮೊಬೈಲ್​ಗಳನ್ನು ಖರೀದಿ ಮಾಡುವುದೇ ಒಂದು ದೊಡ್ಡ ಕೆಲಸವಾಗಿರುತ್ತದೆ. ಆದರೆ ಇಲ್ಲಿದೆ ನೋಡಿ ಮಾರುಕಟ್ಟೆಯಲ್ಲಿ ಲಭ್ಯವಿರುವ 25 ಸಾವಿರದೊಳಗಿನ ಬೆಸ್ಟ್​ ಸ್ಮಾರ್ಟ್​ಫೋನ್​ಗಳು.

First published:

  • 19

    MORE
    GALLERIES

  • 29

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ರಿಯಲ್‌ಮಿ 10 ಪ್ರೊ ಪ್ಲಸ್‌ 5G: ರಿಯಲ್‌ಮಿ 10 ಪ್ರೊ ಪ್ಲಸ್‌ 5G ಸ್ಮಾರ್ಟ್‌ಫೋನ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ನೀಡಲಿದೆ. ಇನ್ನುಳಿದಂತೆ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

    MORE
    GALLERIES

  • 39

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಇನ್ನು ಈ ಸ್ಮಾರ್ಟ್​ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟಪ್​​ನೊಂದಿಗೆ 108 ಮೆಗಾಪಿಕ್ಸೆಲ್​ ಪ್ರಾಥಮಿಕ ಕ್ಯಾಮೆರಾ, 8ಮೆಗಾಪಿಕ್ಸೆಲ್​ ಅಲ್ಟ್ರಾ-ವೈಡ್ ಹಾಗೂ 2ಮೆಗಾಪಿಕ್ಸೆಲ್​ ಮ್ಯಾಕ್ರೋ ಸೆನ್ಸಾರ್​ ಆಯ್ಕೆ ಪಡೆದುಕೊಂಡಿದೆ. ಇನ್ನು 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 66W ನ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನು ಈ ಫೋನ್‌ 24,999 ರೂಪಾಯಿಗಳ ಬೆಲೆ ಹೊಂದಿದೆ.

    MORE
    GALLERIES

  • 49

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62: ಸ್ಯಾಮ್‌ಸಂಗ್‌ ಗ್ಯಾಲಕ್ಸಿ F62 ಫೋನ್‌ 6.7 ಇಂಚಿನ ಸೂಪರ್ ಅಮೋಲೆಡ್‌ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 60 Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಎಕ್ಸಿನೋಸ್ 9 ಆಕ್ಟಾ 9825 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

    MORE
    GALLERIES

  • 59

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಇದು ಕ್ವಾಡ್​ ರಿಯರ್​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದ್ದು, ಇದರೊಂದಿಗೆ 7000 mAh ಸಾಮರ್ಥ್ಯದ ಬ್ಯಾಟರಿ ಅಯ್ಕೆ ಪಡೆದಿದೆ. ಜೊತೆಗೆ ಇದು ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಸಹ ಪಡೆದುಕೊಂಡಿದೆ. ಅಂತೆಯೇ ನೀವು ಈ ಫೋನ್‌ ಅನ್ನು 23,999 ರೂ. ಗಳ ಬೆಲೆಗೆ ಖರೀದಿ ಮಾಡಬಹುದು.

    MORE
    GALLERIES

  • 69

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಐಕ್ಯೂ Z6 ಪ್ರೋ ಸ್ಮಾರ್ಟ್​​ಫೋನ್‌: ಈ ಫೋನ್​ 6.44 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 1,300nits ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಆಕರ್ಷಕವಾಗಿದೆ. ಇನ್ನುಳಿದಂತೆ ಈ ಫೋನ್ ಸ್ನಾಪ್‌ಡ್ರಾಗನ್ 778ಜಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಸೇರಿದಂತೆ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ.

    MORE
    GALLERIES

  • 79

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಈ ಸ್ಮಾರ್ಟ್​​​ಫೋನ್​ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​​ನೊಂದಿಗೆ 16 ಮೆಗಾಪಿಕ್ಸೆಲ್​ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಈ ಫೋನ್‌ 4700 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಫ್ಲ್ಯಾಶ್ ಚಾರ್ಜಿಂಗ್ ಗೆ ಬೆಂಬಲ ಸಹ ಹೊಂದಿದೆ. ಈ ಫೋನ್ 22,999 ರೂಪಾಯಿಗಳ ಬೆಲೆಗೆ ಖರೀದಿಗೆ ಲಭ್ಯವಿದೆ.

    MORE
    GALLERIES

  • 89

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಮೊಟೊ G82 ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್​ಫೋನ್​ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ನೀಡಲಿದೆ. ಅದರಂತೆ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್‌ 6ಜಿಬಿ ರ್‍ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

    MORE
    GALLERIES

  • 99

    Best Smartphones: 25 ಸಾವಿರದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳಿವು!

    ಮೊಟೊ ಕಂಪೆನಿಯ ಈ ಸ್ಮಾರ್ಟ್​​ಫೋನ್​ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ ಹೊಂದಿದ್ದು, 16 ಮೆಗಾಪಿಕ್ಸೆಲ್​ ಸೆನ್ಸಾರ್​​ನಲ್ಲಿ ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದು ಟರ್ಬೋ ಪವರ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಈ ಫೋನ್ 23,659 ರೂಪಾಯಿಗಳ ಬೆಲೆ ಹೊಂದಿದೆ.

    MORE
    GALLERIES