ಅತ್ಯುತ್ತಮ ಡಿಸ್ಪ್ಲೇ ಮತ್ತು ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ ವಿವಿಧ ಕಂಪನಿಗಳು ಸ್ಮಾರ್ಟ್ ಟಿವಿಗಳನ್ನು ಈ ವರ್ಷ ಬಿಡುಗಡೆ ಮಾಡಿವೆ. ಅತ್ಯುತ್ತಮ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಫ್ಲಿಪ್ಕಾರ್ಟ್ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ ಮೂಲಕ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಮೇಲೆ ಗಮನ ಸೆಳೆಯುವಂತಹ ಡೀಲ್ಗಳನ್ನು ಪ್ರಕಟಿಸಿದೆ. ಹಾಗಿದ್ರೆ ರೂ.40 ಸಾವಿರದೊಳಗೆ ಲಭ್ಯವಿರುವ ಅತ್ಯುತ್ತಮ ಟಾಪ್ ಬ್ರಾಂಡ್ ಸ್ಮಾರ್ಟ್ ಟಿವಿಗಳು ಯಾವುದೆಲ್ಲಾ ಇವೆ ಎಮಬುದರ ಮಾಹಿತಿ ಇಲ್ಲಿದೆ.
ಎಲ್ಜಿ UQ7500 ಅಲ್ಟ್ರಾ ಹೆಚ್ಡಿ ಎಲ್ಇಡಿ ಸ್ಮಾರ್ಟ್ ಟಿವಿ: ಎಲ್ಜಿ ಕಂಪನಿಯ ಈ ಸ್ಮಾರ್ಟ್ ಟಿವಿ WebOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 20 ವ್ಯಾಟ್ ಆಡಿಯೋ ಔಟ್ಪುಟ್ ಅನ್ನು ಸಹ ಹೊಂದಿದೆ. ಈ ಟಿವಿ Gen5 AI ಪ್ರೊಸೆಸರ್ 4ಕೆ ನಿಂದ ಕಾರ್ಯನಿರ್ಬಹಿಸುತ್ತದೆ. ಇದು 1.5ಜಿಬಿ ರ್ಯಾಮ್ ಮತ್ತು 8ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.ಎಲ್ಜಿ UQ7500 ಅಲ್ಟ್ರಾ ಹೆಚ್ಡಿ 4K ಎಲ್ಇಡಿ ಸ್ಮಾರ್ಟ್ ಟಿವಿ 43 ಇಂಚಿನ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ 30,990 ರೂ.ಗೆ ಖರೀದಿಸಬಹುದಾಗಿದೆ.
ಒನ್ಪ್ಲಸ್ ವೈ1ಎಸ್ ಪ್ರೋ: ಒನ್ಪ್ಲಸ್ ಕಂಪನಿಯ ಈ ಸ್ಮಾರ್ಟ್ ಟಿವಿ 60Hz ರಿಫ್ರೆಶ್ ದರದೊಂದಿಗೆ 55ಇಂಚಿನ ಅಲ್ಟ್ರಾ ಹೆಚ್ಡಿ 4ಕೆ ಎಲ್ಇಡಿ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಆಕ್ಸಿಜನ್ ಪ್ಲೇ 2.0 ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ಟಿವಿ ಜನಪ್ರಿಯ ಚಾನೆಲ್ಗಳಿಗೆ ಲಾಗಿನ್ ಅನ್ನು ಒದಗಿಸುತ್ತದೆ,ಈ ಸ್ಮಾರ್ಟ್ ಟಿವಿ ಡಾಲ್ಬಿ ಅಟ್ಮಾಸ್ನೊಂದಿಗೆ 24 ವ್ಯಾಟ್ಗಳ ಹೈ-ಡೆಫಿನಿಷನ್ ಆಡಿಯೋವನ್ನು ನೀಡುತ್ತದೆ. ಒನ್ಪ್ಲಸ್ ವೈ1ಎಸ್ ಪ್ರೋ ಸ್ಮಾರ್ಟ್ ಟಿವಿ ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ರೂ.39.099 ಕ್ಕೆ ಲಭ್ಯವಿದೆ
ಸ್ಯಾಮ್ಸಂಗ್ ಕ್ರಿಸ್ಟಲ್ 4ಕೆ ನಿಯೋ ಸೀರಿಸ್: ಸ್ಯಾಮ್ಸಂಗ್ ಕ್ರಿಸ್ಟಲ್ 4ಕೆ ನಿಯೋ ಸೀರಿಸ್ ಸ್ಮಾರ್ಟ್ಟಿವಿ ಐದು ರೀತಿಯ ಡಿಸ್ಪ್ಲೇ ಗಾತ್ರದಲ್ಲಿ ಲಭ್ಯವಿದೆ. ಈ ಟಿವಿ ಮುಖ್ಯವಾಗಿ 43 ಇಂಚಿನ, 50-ಇಂಚಿನ, 55-ಇಂಚಿನ, 58-ಇಂಚಿನ ಮತ್ತು 65-ಇಂಚಿನ ಡಿಸ್ಪ್ಲೇ ಗಾತ್ರಗಳಲ್ಲಿ ಲಭ್ಯವಿದೆ. ಸ್ಯಾಮ್ಸಂಗ್ ಕ್ರಿಸ್ಟಲ್ 4ಕೆ ನಿಯೋ ಸೀರಿಸ್ 43-ಇಂಚಿನ ಮಾದರಿಯು ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ರೂ 31,990 ಕ್ಕೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ಅಲ್ಟ್ರಾ ಹೆಚ್ಡಿ ಕ್ರಿಸ್ಟಲ್ 4K FE UHD ಡಿಸ್ಪ್ಲೇ ಜೊತೆಗೆ 3840 x 2160 ಪಿಕ್ಸೆಲ್ ರೆಸಲ್ಯೂಶನ್, 50Hz ರಿಫ್ರೆಶ್ ದರದೊಂದಿಗೆ ಲಭ್ಯವಿದೆ. ಇದು ಟೈಜೆನ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. 20 ವ್ಯಾಟ್ಗಳ ಆಡಿಯೋ ಔಟ್ಪುಟ್ ಅನ್ನು ಸಹ ಹೊಂದಿದೆ.
ಎಮ್ಐ ಎಕ್ಸ್ ಸೀರಿಸ್ ಸ್ಮಾರ್ಟ್ಟಿವಿ: ಎಮ್ಐ ಕಂಪನಿಯಿಂದ ಬಿಡುಗಡೆಯಾದ ಈ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಮೂರು ರೀತಿಯ ಡಿಸ್ಪ್ಲೇ ಗಾತ್ರಗಳಲ್ಲಿ ಲಭ್ಯವಿದೆ. ಮುಖ್ಯವಾಗಿ 43-ಇಂಚಿನ, 50-ಇಂಚಿನ, 55-ಇಂಚಿನಲ್ಲಿ ಲಭ್ಯವಿದೆ. 50-ಇಂಚಿನ ಎಮ್ಐ ಎಕ್ಸ್ ಸೀರಿಸ್ ಮಾದರಿಯು ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ರೂ 32,999 ಗೆ ಲಭ್ಯವಿದೆ. ಇದು 60Hz ರಿಫ್ರೆಶ್ ದರದೊಂದಿಗೆ 3840x2160 ಪಿಕ್ಸೆಲ್ ರೆಸಲ್ಯೂಶನ್ ಪ್ರದರ್ಶನವನ್ನು ಸಹ ನೀಡುತ್ತದೆ. ಇದು 30 ವ್ಯಾಟ್ ಆಡಿಯೋ ವ್ಯವಸ್ಥೆಯನ್ನು ಹೊಂದಿದೆ.
ನೋಕಿಯಾ ಹೆಚ್ಡಿ ಎಲ್ಇಡಿ ಸ್ಮಾರ್ಟ್ಟಿವಿ: ಈ ಸ್ಮಾರ್ಟ್ ಟಿವಿ ಪ್ರಸ್ತುತ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ರೂ 34,999 ಕ್ಕೆ ಲಭ್ಯವಿದೆ. ನೋಕಿಯಾದ ಈ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 55 ಇಂಚಿನ ಅಲ್ಟ್ರಾ ಹೆಚ್ 4ಕೆ ಎಲ್ಇಡಿ ಡಿಸ್ಪ್ಲೇಯೊಂದಿಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್ಸ್ಟಾರ್, ಯೂಟ್ಯೂಬ್ನಂತಹ ಅಪ್ಲಿಕೇಶನ್ಗಳನ್ನು ಬೆಂಬಲಿಸುತ್ತದೆ. ಇದು 24 ವ್ಯಾಟ್ ಆಡಿಯೋ ಓಟ್ಪುಟ್ ಅನ್ನು ನೀಡುತ್ತದೆ.