Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

ಎಲ್ಲೆಂದರಲ್ಲಿ ಫುಡ್​, ಟ್ರಾವೆಲ್ ಅಂತ ವ್ಲಾಗ್ ಮಾಡುವವರೇ ಎಚ್ಚರ. ಭಾರತೀಯ ರೈಲ್ವೇ ವ್ರ್ಲಾಗರ್​ಗಳಿಗೆ ಇದೀಗ ರೈಲ್ವೇ ಇಲಾಖೆ ಕಠಿಣ ಕ್ರಮವನ್ನು ಜಾರಿಮಾಡಿದೆ.

First published:

  • 18

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಇಂದಿನ ದಿನದಲ್ಲಿ ಮೊಬೈಲ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಕೆಲವೊಂದು ವಿಷಯದಲ್ಲಿ ಮೊಬೈಲ್​ಗಳು ಅಗತ್ಯವಾದ ಸಾಧನವಾಗಿದ್ದರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಮೊಬೈಲ್​ಗಳು ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತವೆ.

    MORE
    GALLERIES

  • 28

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಇನ್ನು ಸೋಶಿಯಲ್​ ಮೀಡಿಯಾಗಳ ಬಗ್ಗೆ ಹೇಳುವುದೇ ಬೇಡ. ಏಕೆಂದರೆ ಇದು ಸಹ ಒಂದು ರೀತಿಯಲ್ಲಿ ಮನರಂಜನಾ ಮಾಧ್ಯಮವಾಗಿ ಬದಲಾಗಿದೆ. ಇತ್ತೀಚೆಗೆ ಟಿವಿ, ರೇಡಿಯೋಗಳಿಗಿಂತ ಸೋಶಿಯಲ್ ಮೀಡಿಯಾ ನೋಡಿದ್ರೆ ಸಾಕು ಒಮ್ಮೆಗೆ ಮನೋರಂಜನೆ ಸಿಗುತ್ತೆ. ಇನ್ನು ಸೋಶಿಯಲ್​ ಮೀಡಿಯಾಗಳಿಂದಲೇ ಹೆಚ್ಚಿನವರು ಹಣವನ್ನು ಸಹ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 38

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಸೋಶಿಯಲ್ ಮೀಡಿಯಾಗಳಲ್ಲಿ ಹಣ ಸಂಪಾದಿಸಲಿರುವ ಉತ್ತಮ ವೇದಿಕೆಯೆಂದರೆ ಅದು ಯೂಟ್ಯೂಬ್​. ಅದಕ್ಕಾಗಿ ಹಲವಾರು ಮಂದಿ ಫೂಡ್​ ರಿವೀವ್​, ಸಿನಿಮಾ ರಿವೀವ್ ಅಂತೆಲ್ಲಾ ವ್ಲಾಗ್ ಮಾಡುತ್ತಾರೆ. ಇನ್ನೂ ಕೆಲವರು ಟ್ರಾವೆಲ್ ಬ್ಲಾಗ್ ಸಹ ಮಾಡುತ್ತಾರೆ. ಹೀಗೆ ಮಾಡಿಯೇ ಯೂಟ್ಯೂಬ್​ನಲ್ಲಿ ಹೆಚ್ಚಿನವರು ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡ್ತಾ ಇದ್ದಾರೆ.

    MORE
    GALLERIES

  • 48

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಇನ್ನು ಕೆಲವರು ತಮ್ಮದೇ ಆದ ವ್ಲಾಗ್​ ಚಾನೆಲ್​​ಗಳನ್ನು ಮಾಡಿ ಸೆಲೆಬ್ರಿಟಿಗಳು ಸಹ ಆಗಿದ್ದಾರೆ. ಆದ್ರೆ ವ್ಲಾಗ್ ಮಾಡೋದಕ್ಕು ಕೆಲವೊಂದು ನಿಯಮಗಳಿವೆ. ಆದ್ರೆ ಅವುಗಳನ್ನು ತಿಳಿಯದೇ ಒಂದು ವೇಳೆ ಎಲ್ಲೆಂದರಲ್ಲಿ ವ್ಲಾಗ್ ಮಾಡಲು ಹೋದ್ರೆ ಶಿಕ್ಷೆಯಾಗೋದು ಪಕ್ಕಾ.

    MORE
    GALLERIES

  • 58

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಹೌದು, ಹೆಚ್ಚಿನವರು ರೈಲು, ವಿಮಾನ ಅಂತೆಲ್ಲಾ ಟ್ರಾವೆಲ್​ ಮಾಡೋ ಸಂದರ್ಭದಲ್ಲಿ ಮೊಬೈಲ್, ಕ್ಯಾಮೆರಾ ತೆಗೆದು ವ್ಲಾಗ್ ಮಾಡಲು ಮುಂದಾಗ್ತಾರೆ. ಆದ್ರೆ ಇನ್ಮುಂದೆ ರೈಲಿನಲ್ಲಿಯೂ ಫುಡ್​, ಟ್ರಾವೆಲ್​ ಅಂತಾ ವ್ಲಾಗ್ ಮಾಡೋ ಮುನ್ನ ಎಚ್ಚರದಿಂದಿರಬೇಕು. ಇಲ್ಲದಿದ್ರೆ ದಂಡ ಅನುಭವಿಸೋದು ಗ್ಯಾರಂಟಿ.

    MORE
    GALLERIES

  • 68

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ಮೊದಲೇ ಈ ಬಗ್ಗೆ ಹಲವು ನಿಯಮಗಳಿದ್ದರೂ, ಈಗ ಈ ನಿಯಮ ಬಹಳಷ್ಟು ಕಟ್ಟುನಿಟ್ಟಾಗಿದೆ ಎಂದೇ ಹೇಳಬಹುದು. ನಿಯಮಗಳ ಪ್ರಕಾರ, ವಾಣಿಜ್ಯ ಉದ್ದೇಶಗಳಿಗಾಗಿ ವೃತ್ತಿಪರ ಕ್ಯಾಮೆರಾಗಳೊಂದಿಗೆ ರೈಲಿನೊಳಗೆ ಚಿತ್ರಗಳು ಅಥವಾ ವಿಡಿಯೋಳನ್ನು ತೆಗೆಯಲು ಸಂಬಂಧಪಟ್ಟ ರೈಲ್ವೆ ಘಟಕದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಿಂದ ಅನುಮತಿ ಅಗತ್ಯವಿದೆ.

    MORE
    GALLERIES

  • 78

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ವಿದೇಶಿ ರೈಲಿನೊಳಗೆ ಫೋಟೋಗಳು ಅಥವಾ ವಿಡಿಯೋಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ರೈಲ್ವೆಯ PRD ಯಿಂದ ಅನುಮತಿಯನ್ನು ಪಡೆಯಬೇಕು. ಹೀಗೆ ಅನುಮತಿ ಇದ್ರೆ ಮಾತ್ರ ನೀವು ರೈಲಿನೊಳಗೆ ವ್ಲಾಗ್​, ಇನ್ನಿತರ ಶೂಟಿಂಗ್ ಮಾಡ್ಬಬಹುದು.

    MORE
    GALLERIES

  • 88

    Indian Railways: ಸಿಕ್ಕ ಸಿಕ್ಕ ಕಡೆ ವ್ಲಾಗ್‌ ಮಾಡೋಕೆ ಕ್ಯಾಮೆರಾ ತೆಗಿತೀರಾ? ರೈಲಿನಲ್ಲಿದ್ದಾಗ ಈ ಕೆಲ್ಸ ಮಾತ್ರ ಮಾಡ್ಬೇಡಿ!

    ವಂದೇಭಾರತ್ ಎಕ್ಸ್‌ಪ್ರೆಸ್ ಕೆಲವು ದಿನಗಳ ಹಿಂದೆ ಪುರಿಯಿಂದ ಹೌರಾಗೆ ಹಿಂದಿರುಗುವಾಗ ಅಪಘಾತಕ್ಕೀಡಾಯಿತು. ಆ ಸಮಯದಲ್ಲಿ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ನಿಲ್ಲಬೇಕಿತ್ತು. ಆ ರೈಲಿನಲ್ಲಿ ಹಲವಾರು ಬ್ಲಾಗರ್‌ಗಳೂ ಇದ್ದರು. ಆ ಸಮಯದಲ್ಲಿ ಬ್ಲಾಗರ್‌ಗಳು ರೈಲ್ವೇ ಪ್ರಯಾಣಿಕರ ವಿಭಾಗದೊಂದಿಗೆ ಜಗಳವಾಡಿದರು ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರು ಪರಸ್ಪರ ಆರೋಪದ ಬೆರಳು ತೋರಿಸುತ್ತಾರೆ. ಜೊತೆಗೆ ವಿಡಿಯೋಗಳನ್ನು ಮಾಡಿದ್ದಾರೆ. ಇದಕ್ಕಾಗಿ ಈ ನಿಯಮವನ್ನು ಜಾರಿ ತರಲಾಗಿದೆ.

    MORE
    GALLERIES