Battlegrounds Mobile India: ದೇಸಿ ಅವತಾರದಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ಈ ಬಗ್ಗೆ ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಕಂಪೆನಿಯೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಜನಪ್ರಿಯ ಪಬ್ಜಿ ಗೇಮ್ ಮತ್ತೆ ಭಾರತಕ್ಕೆ ಬರಲಿದೆ. ಆದರೆ ದೇಸಿ ಅವತಾರದಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ಈ ಬಗ್ಗೆ ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಕಂಪೆನಿಯೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
2/ 9
ಪಬ್ಜಿ ಭಾರತದಲ್ಲಿ ಸಾಕಷ್ಟು ಬಳಕೆದಾರರನ್ನು ಹೊಂದಿತ್ತು. ಆದರೆ ಕಳೆದ ವರ್ಷ ಚೀನಾ-ಭಾರತ ಗಡಿ ಸಂಘರ್ಷ ಹಿನ್ನೆಲೆಯಲ್ಲಿ ಪಬ್ಜಿ ಗೇಮ್ಗೆ ನಿಷೇಧ ವಿಧಿಸಲಾಯಿತು. ಅದರ ಜೊತೆಗೆ ಚೀನಾ ಮೂಲದ ಕೆಲವು ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು.
3/ 9
ಪಬ್ಜಿ ಚೀನಾ ಮೂಲದಲ್ಲದಿದ್ದರು ಯಾಕೆ ಬ್ಯಾನ್ ಮಾಡಲಾಗಿದೆ ಎಂಬ ಹಲವಾರು ಪ್ರಶ್ನೆಗಳು ಗೇಮಿಂಗ್ ಪ್ರಿಯರಲ್ಲಿ ಹುಟ್ಟಿಕೊಂಡಿದ್ದವು. ಆದರೆ ದಕ್ಷಿಣ ಕೊರಿಯಾ ಮೂಲದ ಪಬ್ಜಿ ಚೀನಾದೊಂದಿಗೆ ತನ್ನ ಪಾಲು ಹೊಂದಿತ್ತು. ಈ ಕಾರಣವನ್ನು ತಿಳಿದು ಬ್ಯಾನ್ ಮಾಡಬೇಕಾದ ಪರಿಸ್ಥಿತಿ ಬಂದೊಗಿತ್ತು.
4/ 9
ಭಾರತದಲ್ಲಿ ಸಾಕಷ್ಟು ಬಳಕೆದಾರರು ಪಬ್ಜಿ ಪ್ರಿಯರಾಗಿದ್ದರು. ಅದರ ಮೋಜಿಗೆ ಹಲವರು ಸಿಲುಕಿದ್ದರು. ಅಷ್ಟೇ ಏಕೆ ಪಬ್ಜಿ ಚಟದಿಂದ ಅನೇಕ ಜನರು ಪ್ರಾಣ ಕಳೆದುಕೊಂಡ ಪ್ರಸಂಗ ಕೂಡ ವರದಿಯಾಗಿದೆ. ಇದನ್ನೆಲ್ಲ ಅರಿತು ಕೇಂದ್ರ ಸರ್ಕಾರ ಪಬ್ಜಿಯನ್ನು ಬ್ಯಾನ್ ಮಾಡಬೇಕಾಯಿತು.
5/ 9
ಆ ಬಳಿಕ ಮತ್ತೆ ಪಬ್ಜಿ ಭಾರತಕ್ಕೆ ಮರುಕಳಿಸಲಿದೆ ಎಂಬ ಮಾತುಗಳು ಕೇಳಿಬಂದವು. ಆದರೀಗ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಕಂಪೆನಿಯೂ ವಿಚಾರವನ್ನು ಹಂಚಿಕೊಂಡಿದೆ.
6/ 9
ಮರು ಆರಂಭವಾಗಲಿರುವ ಈ ಗೇಮ್ ಎಎಎ ಬಹುಪದರ ಅನುಭವವನ್ನು ನೀಡಲಿದೆ. ಜೊತೆಗೆ ಸುಧಾರಿತ ತಂತ್ರಜ್ನಾನ, ವಿಶೇಷ ಇನ್ ಗೇಮ್ ಈವೆಂಟ್ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.
7/ 9
ಇನ್ನು ದಾಖಲೆಗಳ ಸುರಕ್ಷತೆ ಹಾಗೂ ಭದ್ರತೆಗಾಗಿ ಕ್ರಾಪ್ಟನ್ ಕಂಪನಿ ಕೆಲಸ ಮಾಡಲಿದೆ. ಅದರ ಜೊತಗೆ ಎಲ್ಲಾ ಅಂಕಿ ಅಂಶ ಸಂಗ್ರಹಣೆ ಮತ್ತು ಭಾರತದಲ್ಲಿ ಪಬ್ಜಿ ಆಡುವವರಿಗೆ ಅನ್ವಯವಾಗುವವ ಎಲ್ಲಾ ಕಾನೂನು ಮತ್ತು ನಿಬಂಧನೆಗಳೊಂದಿಗೆ ಸಂಪೂರ್ಣ ಅನುಸರಿಸುವಂತೆ ಕಂಪನಿ ಕೆಲಸ ಮಾಡಲಿದೆಎಂದು ತಿಳಿಸಿದೆ.
8/ 9
ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೌಪ್ಯತೆ ನೀತಿಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಕ್ಕೆ 3 ಗಂಟೆ ಮಾತ್ರ ಆಟವಾಡಲು ಸಾಧ್ಯವಾಗುತ್ತದೆ. ಜೊತೆಗೆ ಆಟದ ಗರಿಷ್ಠ ಖರ್ಚಿನ ಮಿತಿಯನ್ನು 7 ಸಾವಿರ ರೂ.ಗೆ ಇಳಿಸಲಾಗಿದೆ.
9/ 9
ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ, ಎ ಬ್ಯಾಟಲ್ ರಾಯಲ್ ಎಕ್ಪೀರಿಯನ್ಸ್ ಎಂದು ಭಾರತದ ತ್ರಿವರ್ಣ ಧ್ವಜದ ಬಣ್ಣದಲ್ಲಿ ಬರೆಯಲಾಗಿದ್ದು, ಭಾರತೀಯರಿಗೆ ಮಾತ್ರ ಬಳಕೆಗೆ ಸಿಗಲಿದೆ.