Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

Cyber Crime: ಇತ್ತೀಚೆಗಂತೂ ದೇಶದೆಲ್ಲೆಡೆ ಸೈಬರ್​ ವಂಚನೆಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಬ್ಯಾಂಕ್​ಗಳ ಹೆಸರಿನಿಂದ ಜನರನ್ನು ಹ್ಯಾಕರ್​ಗಳು ವಂಚನೆ ಮಾಡುತ್ತಿದ್ದಾರೆ. ಹಾಗಿದ್ರೆ ಈ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳೋದು ಹೇಗೆ ಎಮದು ಈ ಲೇಖನದಲ್ಲಿ ಓದಿ.

First published:

  • 19

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಪ್ರಪಂಚದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಭಾರತದಲ್ಲಿಯೂ ಸಹ, ಸೈಬರ್ ಸೆಲ್‌ಗಳಲ್ಲಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿಗಳ ವಂಚನೆಯ ಪ್ರಕರಣಗಳು ಪ್ರತಿದಿನ ವರದಿಯಾಗುತ್ತವೆ. ವಂಚಕರು ಹಲವು ರೀತಿಯಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಾರೆ. ಫಿಶಿಂಗ್ SMS ಅತ್ಯಂತ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಸೈಬರ್ ವಂಚಕರು ಮುಖ್ಯವಾಗಿ ಫಿಶಿಂಗ್ ಬ್ಯಾಂಕ್ ಎಸ್​ಎಮ್​ಎಸ್​ ಮಾಡುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ.

    MORE
    GALLERIES

  • 29

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಬ್ಯಾಂಕ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಎಸ್​ಎಮ್​ಎಸ್​ನಲ್ಲಿ ಕಳುಹಿಸುತ್ತಾರೆ ಮತ್ತು KYC ಮತ್ತು PAN ಅನ್ನು ಅಪ್ಡೇಟ್​ ಮಾಡಲು ಮೆಸೇಜ್​ನಲ್ಲಿ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ. ಇಂತಹ ಸಂದೇಶಗಳನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದವರು ಹಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ ಎಂದು ಈ ಲೇಖನದಲ್ಲಿದೆ ಕಂಪ್ಲೀಟ್ ಮಾಹಿತಿ.

    MORE
    GALLERIES

  • 39

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಒಂದೇ ಹಣಕಾಸು ವರ್ಷದಲ್ಲಿ ರೂ.128 ಕೋಟಿ ವಂಚನೆ: ಸ್ಟ್ಯಾಟಿಸ್ಟಿಕಾ ವರದಿ ಪ್ರಕಾರ.. 2021ರಲ್ಲಿ ಭಾರತದಲ್ಲಿ 4.8 ಸಾವಿರಕ್ಕೂ ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳು ವರದಿಯಾಗಿವೆ. ಲೋಕಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರು ಹಂಚಿಕೊಂಡ ಆರ್‌ಬಿಐ ವರದಿಯ ಪ್ರಕಾರ, 'ಎಟಿಎಂ/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಅಡಿಯಲ್ಲಿ ಸುಮಾರು ರೂ.128 ಕೋಟಿ ಮೌಲ್ಯದ ವಂಚನೆಗಳನ್ನು ಮಾಡಲಾಗಿದೆ ಎಂದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು (ಎಸ್‌ಸಿಬಿ) ತಿಳಿಸಿವೆ.

    MORE
    GALLERIES

  • 49

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಹೆಚ್ಚುತ್ತಿರುವ ಸಾಮಾನ್ಯ ಫಿಶಿಂಗ್ SMS ವಂಚನೆಗಳ ಬಗ್ಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್​ ತನ್ನ ಗ್ರಾಹಕರನ್ನು ಎಚ್ಚರಿಸಿದೆ. ಕೆಲವು ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಸರಿನಲ್ಲಿ ಸಂದೇಶಗಳನ್ನು ಸ್ವೀಕರಿಸುತ್ತಿರುವುದನ್ನು ಕಂಡು ಬ್ಯಾಂಕ್​ಗೆ ಮಾಹಿತಿ ನೀಡಿದಾಗ ಇದೀಗ ಈ ಬ್ಯಾಂಕ್​ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದೆ.

    MORE
    GALLERIES

  • 59

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಎಚ್‌ಡಿಎಫ್‌ಸಿ ಗ್ರಾಹಕರಿಗೆ ಎಚ್ಚರಿಕೆ: ಸಂಘಮಿತ್ರ ಮಜುಂದಾರ್ ಎಂಬ ಗ್ರಾಹಕರು ಟ್ವಿಟರ್‌ನಲ್ಲಿ ತಮಗೆ ಬಂದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ.. 'HDFC ಗ್ರಾಹಕ ನಿಮ್ಮ HDFC NET ಬ್ಯಾಂಕಿಂಗ್ ಅನ್ನು ಇಂದು ಸ್ಥಗಿತಗೊಳಿಸಲಾಗುವುದು. ದಯವಿಟ್ಟು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಅಪ್ಡೇಟ್​ ಮಾಡಿ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಂದು ಬರೆಯಲಾಗಿದೆ.

    MORE
    GALLERIES

  • 69

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    HDFC Bankcare ಫಿಶಿಂಗ್ ಹಗರಣದ ಬಗ್ಗೆ ಗ್ರಾಹಕರಿಗೆ ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಹಗರಣಕ್ಕೆ ಸಂಬಂಧಿಸಿದ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಾಯ್ ಸಂಗಮಿತ್ರ, PAN ಕಾರ್ಡ್ ಅಥವಾ KYC ಅಪ್ಡೇಟ್​​ ಹೀಗೆ ಯಾವುದೇ ಇತರ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಹೇಳಿದ್ದಾರೆ. HDFC ಬ್ಯಾಂಕ್ ಯಾವಾಗಲೂ ತಮ್ಮ ಅಧಿಕೃತ ID hdfcbk/ hdfcbn ನಿಂದ ಸಂದೇಶಗಳನ್ನು ಕಳುಹಿಸುತ್ತದೆ ಎಂದೂ ಹೇಳಿದ್ದಾರೆ.

    MORE
    GALLERIES

  • 79

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಬ್ಯಾಂಕ್ ಕಳುಹಿಸುವ ಸಂದೇಶಗಳಲ್ಲಿನ ಲಿಂಕ್‌ಗಳು ಯಾವಾಗಲೂ http://hdfcbk.io ಅಡಿಯಲ್ಲಿ ಇರುತ್ತವೆ. ಡೊಮೇನ್ ಅನ್ನು ನೆನಪಿಡಿ. ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI, VPA / MPIN, ಗ್ರಾಹಕ ID ಮತ್ತು ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಗಳನ್ನು ಕೇಳುವುದಿಲ್ಲ. ದಯವಿಟ್ಟು ಅಂತಹ ಮಾಹಿತಿಯನ್ನು ಯಾರೊಂದಿಗೂ ಶೇರ್​ ಮಾಡಿಕೊಳ್ಳಬೇಡಿ ಎಮದು ಬ್ಯಾಂಕ್ ನಿರ್ವಾಹಕರು ಹೇಳಿದ್ದಾರೆ

    MORE
    GALLERIES

  • 89

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ಫಿಶಿಂಗ್ ಬ್ಯಾಂಕ್ SMS ಸ್ಕ್ಯಾಮ್ ಎಂದರೇನು?: ಸ್ಕ್ಯಾಮರ್‌ಗಳು ಬ್ಯಾಂಕ್‌ನಂತೆ ಸಂದೇಶಗಳನ್ನು ಕಳುಹಿಸುತ್ತಾರೆ. ಖಾತೆ ವಿವರಗಳು, ಓಟಿಪಿಗಳು, ಗುರುತಿನ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ. ಜೊತೆಗೆ ನಿಮ್ಮ ಕೆವೈಸಿ, ಪ್ಯಾನ್​ ಅಪ್ಡೇಟ್​ ಮಾಡಿ ಇಲ್ಲವಾದ್ರೆ ಬ್ಯಾಂಕ್ ಖಾತೆ ಬ್ಯಾನ್​ ಆಗುತ್ತೆ ಎಂದು ಹೇಳಿ, ಜೊತೆಗೆ ಒಂದು ಲಿಂಕ್​ ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಮೊಬೈಲ್​ ಬಳಕೆದಾರು ಒಂದು ವೇಳೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ವಂಚಕರ ಕೈಸೇರುತ್ತೆ.

    MORE
    GALLERIES

  • 99

    Cyber Crime: ಬ್ಯಾಂಕ್​ ಗ್ರಾಹಕರೇ ಎಚ್ಚರ! ಈ ಲಿಂಕ್​ಗಳನ್ನು ಕ್ಲಿಕ್​ ಮಾಡಿದ್ರೆ ಹಣ ಗೋವಿಂದಾ ಗೋವಿಂದಾ

    ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ: ಒಟಿಪಿ, ಬ್ಯಾಂಕ್ ವಿವರಗಳು, ಮೊಬೈಲ್ ಸಂಖ್ಯೆ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಎಸ್‌ಎಂಎಸ್‌ನಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ. ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಫೋನ್‌ಗಳಿಗೆ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿ. ಇನ್ನು ಪಾಸ್​ವರ್ಡ್​​ಗಳನ್ನು ಆಗಾಗ ಬದಲಾಯಿಸ್ತಾ ಇರಿ. ಇನ್ನು ಯಾವುದೇ ಮೆಸೇಜ್​ ಬಂದಾಗ ಅದನ್ನು ಸರಿಯಾಗಿ ಚೆಕ್​ ಮಾಡಿ ಓಪನ್ ಮಾಡಿ.

    MORE
    GALLERIES