ಇನ್ನು ಮೊಬೈಲ್ ಬಳಕೆಯ ಬಗ್ಗೆ ಸಮೀಕ್ಷೆ ನಡೆಸಿದಾಗ, ಅದಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ಶೇಕಡಾ 91 ರಷ್ಟು ಜನರು ಮಲಗುವ ಮೊದಲು ಹಾಸಿಗೆ, ಬೆಡ್ನಲ್ಲೇ ಸ್ಮಾರ್ಟ್ಫೋನ್ ಅನ್ನು ಬಳಸುತ್ತಾರೆ ಎಂದು ಹೇಳಲಾಗಿದೆ. ಇನ್ನು ಇದರಲ್ಲಿ ಶೇಕಡಾ 31 ರಷ್ಟು ಜನರು ಸೋಶಿಯಲ್ ಮೀಡಿಯಾಗಳನ್ನು ಬಳಸುತ್ತಿದ್ರೆ, ಹಾಗೆಯೇ ಶೇಕಡಾ 29 ರಷ್ಟು ಜನರು ಕೆಲಸದಿಂದ ವಜಾಗೊಂಡ ಕಾರಣ ನಿದ್ದೆಯಿಲ್ಲದೆ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಮೀಕ್ಷೆಯಲ್ಲಿ ಶೇಕಡಾ 26ರಷ್ಟು ಜನರಿಗೆ ನಿದ್ರಾಹೀನತೆ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಅದ್ರಲ್ಲೂ ಶೇಕಡಾ 61 ರಷ್ಟು ಜನರು ರಾತ್ರಿ 11 ಗಂಟೆಯ ನಂತರ ಮಲಗುವವರು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ 29 ರಷ್ಟು ಜನರು ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಮತ್ತು ಶೇ.60 ರಷ್ಟು ಜನರು ಕೆಲಸದ ಸಮಯದಲ್ಲಿ ಮಲಗುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಸಮೀಕ್ಷೆಯನ್ನು ನೋಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ನ್ಯೂರೋಸೈನ್ಸ್ನಲ್ಲಿ ಕ್ಲಿನಿಕಲ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮನೋಜ್ ಕುಮಾರ್ ಶರ್ಮಾ ಅವರ ಪ್ರಕಾರ, ವಯಸ್ಕರು ದಿನಕ್ಕೆ 6 ರಿಂದ 7 ರವರೆಗೆ ನಿದ್ರೆ ಮಾಡಬೇಕಾಗುತ್ತದೆ. ಇದಕ್ಕಾಗಿ ಸ್ಮಾರ್ಟ್ಫೋನ್ ಬಳಕೆಯನ್ನು ಕಡಿಮೆ ಮಾಡೋದು ಉತ್ತಮ ಎಂದಿದ್ದಾರೆ.