Bajaj CT 110: ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸಾಕು 70 ಕಿಲೋಮೀಟರ್ ಮೈಲೇಜ್ ಕೊಡುತ್ತೆ ಈ ಬೈಕ್!
ಹೆಚ್ಚಿನ ಮೈಲೇಜ್ ಬಯಸುವವರಿಗೆ ಈ ಬೈಕ್ ಅತ್ಯುತ್ತಮವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಮತ್ತು ಪ್ರತಿನಿತ್ಯ ಬೈಕ್ ಬಳಸಿ ಬಹಳ ದೂರ ಓಡಾಡುವ ಚಾಲಕರಿಗೆ ಇದು ತುಂಬಾ ಸಹಕಾರಿಯಾದ ಬೈಕ್. ಕೇವಲ 61 ಸಾವಿರ ರೂಪಾಯಿ ಕೊಟ್ಟರೆ ಈ ಬೈಕ್ ನಿಮ್ಮದಾಗುತ್ತದೆ.
ಹೊಸ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ? ನಿಮ್ಮ ಬಜೆಟ್ಗೆ ತಕ್ಕ ಬೆಲೆಯಲ್ಲಿ ಉತ್ತಮ ಬೈಕ್ ಹುಡುಕುತ್ತಿರುವಿರಾ? ಹಾಗಾದ್ರೆ ಖಂಡಿತ ನೀವು ಈ ಬೈಕ್ ಬಗ್ಗೆ ತಿಳಿದುಕೊಳ್ಳಲೇ ಬೇಕು.
2/ 7
ಹಲವರು ಹೆಚ್ಚಿನ ಮೈಲೇಜ್ ನೀಡುವ ಬೈಕ್ ಹುಡುಕಾಟದಲ್ಲಿರುತ್ತಾರೆ. ಬಜಾಜ್ ಎಂದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ಗಳು ಎಂದೇ ಪ್ರಸಿದ್ಧಿ ಹೊಂದಿದೆ. ಬಜಾಜ್ ಎಂದಾಕ್ಷಣ ಟಿ.ವಿ.ಎಸ್(TVS), Hero MotoCorp (Hero) ಈ ಬೈಕ್ಗಳು ನಿಮ್ಮ ನೆನಪಿಗೆ ಬರುತ್ತದೆ
3/ 7
ಬಜಾಜ್ ಎಂದರೆ ಮಾರುಕಟ್ಟೆಯಲ್ಲಿ ಮೈಲೇಜ್ ಬೈಕ್ಗಳು ನೆನಪಿಗೆ ಬರುತ್ತದೆ. ಅನೇಕ ಜನರು ಈ ಕಂಪನಿಗಳಿಂದ ಬೈಕ್ಗಳನ್ನು ಖರೀದಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಇವುಗಳ ಬೇಡಿಕೆ ಹೆಚ್ಚಿದೆ.
4/ 7
ಬಜಾಜ್ CT 110 ಹೆಚ್ಚಿನ ಮೈಲೇಜ್ ಬೈಕುಗಳಲ್ಲಿ ಒಂದಾಗಿದೆ. ಬಜಾಜ್ ಸಿಟಿ 110 ಬೈಕ್ ಪ್ರತಿ ಲೀಟರ್ಗೆ 90 ಕಿ.ಮೀ ಮೈಲೇಜ್ ನೀಡುತ್ತದೆ. ಕೆಲವೊಮ್ಮೆ ನೀವು ಓಡಾಡುವ ರಸ್ತೆಯನ್ನು ಆಧರಿಸಿ ಮೈಲೇಜ್ ಲೆಕ್ಕಕ್ಕೆ ಬರುತ್ತದೆ.
5/ 7
ಈ ಬೈಕ್ ಪ್ರತಿ ಲೀಟರ್ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದು ಒಂದು ಉತ್ತಮ ಮೈಲೇಜ್ ಎಂದೇ ಹೇಳಬಹುದು. ಈ ಬೈಕ್ 115 ಸಿಸಿ ಎಂಜಿನ್ ಹೊಂದಿದೆ. ಇದರ ಬೆಲೆ ರೂ. 61 ಸಾವಿರ.
6/ 7
ಈ ಬೈಕ್ ಗಂಟೆಗೆ 90 ಕಿಲೋಮೀಟರ್ ಚಲಿಸುತ್ತದೆ. EMI ಮೂಲಕವೂ ನೀವು ಈ ಬೈಕ್ ಖರೀದಿಸಬಹುದು. ಈ ಬೈಕ್ನ ಇಂಧನ ಟ್ಯಾಂಕ್ ಸಾಮರ್ಥ್ಯ 10.5 ಲೀಟರ್ ಆಗಿದೆ. ಈ ಬೈಕಿಗೆ ಫುಲ್ ಟ್ಯಾಂಕ್ ತುಂಬಿಸಿದರೆ ಒಂದೇ ಸಲಕ್ಕೆ 700 ಕಿಲೋಮೀಟರ್ ಪ್ರಯಾಣಿಸಬಹುದು.
7/ 7
ಹೆಚ್ಚಿನ ಮೈಲೇಜ್ ಬಯಸುವವರಿಗೆ ಈ ಬೈಕ್ ಅತ್ಯುತ್ತಮವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಮತ್ತು ಪ್ರತಿನಿತ್ಯ ಬೈಕ್ ಬಳಸಿ ಬಹಳ ದೂರ ಓಡಾಡುವ ಚಾಲಕರಿಗೆ ಇದು ತುಂಬಾ ಸಹಕಾರಿಯಾದ ಬೈಕ್