ಹೊಸ ಲುಕ್ನೊಂದಿಗೆ ಮತ್ತೆ ರಸ್ತೆಗಿಳಿದ ಬಜಾಜ್ ಚೇತಕ್: ಮೈಲೇಜ್ ಬರೋಬ್ಬರಿ 95 ಕಿ.ಮೀ
bajaj chetak scooter: ಈ ಹಿಂದೆ ದೆಹಲಿಯಲ್ಲಿ ನಡೆದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಎನ್ಐಟಿಐ ಆಯೋಗ್ ಸಿಇಒ ಅಮಿತಾಭ್ ಕಾಂತ್ ಹಸಿರು ನಿಶಾನೆ ತೋರಿಸುವ ಮೂಲಕ ಹೊಸ ಸ್ಕೂಟರ್ಗೆ ಚಾಲನೆ ನೀಡಿದರು.
News18 Kannada | January 17, 2020, 7:18 PM IST
1/ 19
ಬಜಾಜ್ ಆಟೋ ಕಂಪನಿಯ ನೂತನ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ.
2/ 19
2006 ರಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಬಜಾಜ್ ಮತ್ತೆ ರಸ್ತೆಗಿಳಿಸಿದೆ.
3/ 19
ಈ ಹಿಂದೆ ದೆಹಲಿಯಲ್ಲಿ ನಡೆದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಎನ್ಐಟಿಐ ಆಯೋಗ್ ಸಿಇಒ ಅಮಿತಾಭ್ ಕಾಂತ್ ಹಸಿರು ನಿಶಾನೆ ತೋರಿಸುವ ಮೂಲಕ ಹೊಸ ಸ್ಕೂಟರ್ಗೆ ಚಾಲನೆ ನೀಡಿದರು.
4/ 19
ಇದೀಗ ಅಧಿಕೃತ ಬಜಾಜ್ ಇ-ಸ್ಕೂಟರ್ ಬುಕ್ಕಿಂಗ್ ಆರಂಭಿಸಿರುವುದಾಗಿ ಬಜಾಜ್ ಆಟೋ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ.
5/ 19
ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಸ್ಟ್ಯಾಂಡರ್ಡ್ 5-15 ಎಎಂಪಿ ಎಲೆಕ್ಟ್ರಿಕಲ್ ಔಟ್ ಲೆಟ್ಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.
6/ 19
ಇದರಲ್ಲಿ ಲಿ-ಅಯಾನ್ ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ ಬಳಸಲಾಗಿದೆ. ಇದು ಚಾರ್ಜ್ ಕಂಟ್ರೋಲ್ ಮಾಡುವುದಲ್ಲದೆ, ಡಿಸ್ ಚಾರ್ಜ್ ಅನ್ನು ನಿರ್ವಹಣೆ ಮಾಡಲಿರುವುದು ವಿಶೇಷ.
7/ 19
ಅಷ್ಟೇ ಅಲ್ಲದೆ ಗ್ರಾಹಕರಿಗೆ ಈ ಸ್ಕೂಟರ್ನ್ನು ಮನೆಯಲ್ಲಿಯೇ ಚಾರ್ಚ್ ಮಾಡಿಕೊಳ್ಳುವ ಅವಕಾಶವನ್ನು ಬಜಾಜ್ ಒದಗಿಸಲಿದೆ ಎಂದು ವರದಿ ತಿಳಿಸಿದೆ.
8/ 19
ಬಜಾಜ್ ಕಂಪೆನಿಯ ನೂತನ ಚೇತಕ್ ಅರ್ಬನ್ ಮತ್ತು ಪ್ರೀಮಿಯಂ ಮಾಡೆಲ್ಗಳಲ್ಲಿ ಖರೀದಿಗೆ ಲಭ್ಯವಿದೆ .
9/ 19
ಇನ್ನು ಈ ಸ್ಕೂಟರ್ ಆರು ಬಣ್ಣಗಳಲ್ಲಿ ಲಭ್ಯವಿರಲಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
10/ 19
ಬಜಾಜ್ ಚೇತಕ್ 3 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಇದು 16 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಇದರ ಬ್ಯಾಟರಿ 1 ಗಂಟೆಯಲ್ಲಿ 25% ಮತ್ತು 5 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪೆನಿ ತಿಳಿಕೊಂಡಿದೆ.
11/ 19
ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ನೂತನ ಚೇತಕ್ನಲ್ಲಿ ಪ್ರಕಾಶಮಾನವಾದ ಸ್ವಿಚ್ಗಿಯರ್, ಗ್ಲೋವ್ಬಾಕ್ಸ್, ರಿಕ್ಟ್ರೆಬಲ್ ಹುಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕೀಲೆಸ್ ಇಗ್ನಿಷನ್, ರಿಯರ್ ಟೈಮ್ ಬ್ಯಾಟರಿ ಲೆವೆಲ್ ಇಂಡಿಕೇಟರ್, ಮುಂದಿನ ಚಕ್ರದಲ್ಲಿ ಡಿಸ್ಕ್ ಬ್ರೇಕ್ಗಳನ್ನು ಒಳಗೊಂಡಿರಲಿದೆ.
12/ 19
ಹಾಗೆಯೇ ಎರಡು ಡ್ರೈವ್ ಮೋಡ್ನಲ್ಲಿ ಲಭ್ಯವಿರುವ ಈ ನೂತಕ ಸ್ಕೂಟರ್ ಮೈಲೇಜ್ನಲ್ಲೂ ವ್ಯತ್ಯಾಸಗಳಿರಲಿದೆ.
13/ 19
ಬಜಾಜ್ ಚೇತಕ್ ಇಕೋ ಮತ್ತು ಚೇತಕ್ ಸ್ಪೋರ್ಟ್ ಮೋಡ್
14/ 19
ಬಜಾಜ್ ಚೇತಕ್ ಇಕೋ ಮಾಡೆಲ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 95 ಕಿಲೋ ಮೀಟರ್ ಮೈಲೇಜ್ ನೀಡಲಿದೆ.
15/ 19
ಇನ್ನು ಸ್ಪೋರ್ಟ್ ಮೋಡ್ 85 ಕಿಲೋ ಮೀಟರ್ ಮೈಲೇಜ್ ಒದಗಿಸಲಿದೆ ಎಂದು ಕಂಪೆನಿ ತಿಳಿಸಿದೆ.
16/ 19
ಹಾಗೆಯೇ ನೂತನ ಬಜಾಜ್ ಚೇತಕ್ ಎರಡು ಸ್ಕೂಟರ್ಗಳ ಬೆಲೆಯಲ್ಲೂ ವ್ಯತ್ಯಾಸಗಳಿವೆ.
17/ 19
ಹಾಗೆಯೇ ನೂತನ ಬಜಾಜ್ ಚೇತಕ್ ಎರಡು ಸ್ಕೂಟರ್ಗಳ ಬೆಲೆಯಲ್ಲೂ ವ್ಯತ್ಯಾಸಗಳಿವೆ.