ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಾತ್ರವಲ್ಲದೆ ಜಾಲತಾಣದಲ್ಲಿ ಸುಳ್ಳು- ಸುದ್ದಿಗಳು ಹರಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಸಾಮಾಜಿಕ ತಾಣದಲ್ಲಿ ಅಯೋಧ್ಯೆ ಪರ-ವಿರೋಧ ತೀರ್ಪಿಗೆ ವಿಜಯೋತ್ಸವ ಆಚರಿಸುವುದಾಗಲಿ, ಘೋಷಣೆ ಕೂಗುವುದಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ತಾಣವಾದ ಫೇಸ್ಬುಕ್ , ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಮುಂತಾದವುಗಳಲ್ಲಿ ಆಕ್ಷೇಪಾರ್ಹ ಸಂದೇಶಗಳು ಮತ್ತು ಪೋಸ್ಟ್ಗಳನ್ನು ಹರಿಯಬಿಡಬಾರದು. ಸೋಷಿಯಲ್ ಮೀಡಿಯಾಗಳ ಮೇಲೆ ಕಟ್ಟು ನಿಟ್ಟಿನ ನಿಯಮವನ್ನು ಅನುಸರಿಸಲಾಗಿದ್ದು, ಫೇಸ್ಬುಕ್ , ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್, ಟ್ವಿಟ್ಟರ್ಗಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ. ಧರ್ಮದ ವಿವಾರವಾಗಿ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ರಾಜಕೀಯ ಮತ್ತು ಧಾರ್ಮಿಕ ವಿಚಾರಗಳ ಬಗೆಗಿನ ನಿಂದನೀಯ ಸಂದೇಶವನ್ನು ಕಳುಹಿಸುವುದು ಮತ್ತು ಬೇರೆಯವರಿಗೆ ರವಾನಿಸುವುದು ಅಪರಾಧವಾಗಿದೆ. ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರ ದೇಶದ ಗಂಭೀರ ಸಮಸ್ಯೆಯಾಗಿದೆ. ಹಾಗಾಗಿ ಕಾನೂನು ಸೌಹಾರ್ದತೆಗೆ ಮತ್ತು ಕೋಮು ಗಲಭೆಗೆ ದಕ್ಕೆ ಉಂಟುಮಾಡುವ ಸಂದೇಶವನ್ನು ಹಾಕಬೇಡಿ ನ್ಯಾಯಾಲಯದ ತೀರ್ಪನ್ನು ನಿಂದಿಸಬೇಡಿ. ತೀರ್ಪಿನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಅಭಿಪ್ರಾಯವನ್ನು ಎಲ್ಲೂ ಹಂಚಿಕೊಳ್ಳಬೇಡಿ. ಫೇಸ್ಬುಕ್, ವಾಟ್ಸ್ಆ್ಯಪ್ನಲ್ಲಿ ಅಯೋಧ್ಯೆ ತೀರ್ಪಿನ ವಿಚಾರವಾಗಿ ಪ್ರಚೋದನಾತ್ಮಕ ಸಂದೇಶವನ್ನು ಹರಿಯ ಬಿಡುವವರನ್ನು ಗ್ರೂಪ್ ಅಡ್ಮಿನ್ಗಳು ಬ್ಲಾಕ್ ಮಾಡಿರಿ.