ದೇಶದ ಅತಿದೊಡ್ಡ ವಾಹನ ತಯಾರಕ ಕಂಪೆನಿ ಮಹೀಂದ್ರಾ ಅ್ಯಂಡ್ ಮಹೀಂದ್ರಾ ತನ್ನ ನೂತನ ಕಾರಿನ ಕಾನ್ಸೆಪ್ಟ್ನ್ನು ಅನಾವರಣಗೊಳಿಸಿದೆ.
2/ 12
ಗ್ರೇಟರ್ ನೋಯ್ಡಾದಲ್ಲಿ ಪ್ರಾರಂಭವಾಗಿರುವ ಆಟೋ ಎಕ್ಸ್‌ಪೋ 2020 ನಲ್ಲಿ ತನ್ನ ಹೊಸ ವಾಹನಗಳ ಮಾಡೆಲ್ಗಳನ್ನು ಪರಿಚಯಿಸಿದೆ.
3/ 12
ಈಗಾಗಲೇ ಬಿಡುಗಡೆ ಮಾಡಿರುವ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು e-KUV100 ಬಳಿಕ ಇದೀಗ ಮತ್ತೊಮ್ಮೆ ಹಲವು ಎಲೆಕ್ಟ್ರಿಕ್ ಕಾರುಗಳ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿದೆ.
4/ 12
ಹಲವು ಕಂಪೆನಿಗಳ ನೂತನ ಕಾನ್ಸೆಪ್ಟ್ ಕಾರುಗಳ ಮಧ್ಯೆ ಎಲ್ಲರ ಗಮನ ಸೆಳೆದಿರುವುದು ಮಹೀಂದ್ರಾ ಕಂಪೆನಿಯ ಫನ್‌ಸ್ಟರ್.
5/ 12
ಹೌದು, ಮಹೀಂದ್ರಾ ಶೀಘ್ರದಲ್ಲೇ ಫನ್‌ಸ್ಟರ್ ಎಂಬ ನೂತನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರೊಂದನ್ನು ಪರಿಚಯಿಸಲಿದೆ. ಇದೊಂದು ಕನ್ವರ್ಟೇಬಲ್ ರೋಡ್ಸ್ಟರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಆಗಿದ್ದು, ಮೊದಲ ನೋಟದಲ್ಲೇ ವಾಹನ ಪ್ರಿಯರನ್ನು ಸೆಳೆದಿದೆ. ಇದರ ವಿಶೇಷತೆಗಳೇನು?
6/ 12
ಫನ್‌ಸ್ಟರ್ ಸ್ಪೋರ್ಟ್ಸ್ ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ ಇದನ್ನು ಹೈಸ್ಪೀಡ್ ಕಾರ್ ಎಂದು ಕರೆದರೆ ತಪ್ಪಾಗಲಾರದು. ಇದರಲ್ಲಿ ಡ್ಯುಯಲ್ ಎಲೆಕ್ಟ್ರಿಕ್ ಮೋಟರ್ ಮತ್ತು ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ವ್ಯವಸ್ಥೆಯನ್ನು ನೀಡಲಾಗಿದೆ.
7/ 12
ಫನ್‌ಸ್ಟರ್ ಕಾನ್ಸೆಪ್ಟ್ ಕಾರ್ಯಕ್ಷಮತೆಯನ್ನು ಗಣನೆಗೆ ತೆಗೆದುಕೊಂಡರೆ ಸದ್ಯಕ್ಕಿರುವ ವಾಹನಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಏಕೆಂದರೆ ಇದು 313 ಅಶ್ವ ಶಕ್ತಿಯನ್ನು ಉತ್ಪಾದಿಸಲಿದೆ.
8/ 12
ಇನ್ನು ವೇಗವು ಗಂಟೆಗೆ 200 ಕಿಲೋಮೀಟರ್. ಹಾಗೆಯೇ ಕೇವಲ ಐದು ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆಯಬಹುದು. ಸ್ಪೋರ್ಟಿ ಇಂಟೀರಿಯರ್‌ಸ್ಪೀಡ್ ಜೊತೆಗೆ, ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಕಾರುಗಳಲ್ಲಿ ಫನ್‌ಸ್ಟರ್ ಗುರುತಿಸಿಕೊಳ್ಳಲಿದೆ.
9/ 12
ಅದೇ ರೀತಿ ಫನ್ಸ್ಟರ್ನಲ್ಲಿ ನಾಲ್ಕು ಜನರು ಆರಾಮಾಗಿ ಕುಳಿತುಕೊಳ್ಳಬಹುದು. ಇನ್ನು ಕಾರಿನ ಮುಂಭಾಗದಲ್ಲಿ ಫಾಲೋಟಿಂಗ್ ಟೈಲ್ ಲ್ಯಾಂಪ್‌ಗಳು, ಸ್ಪೋರ್ಟ್ಸ್ ಶೂ ಇನ್ಸ್ಪೇರ್ಡ್ ವೀಲ್ ಆರ್ಕ್‌ಗಳು ಮತ್ತು ಸ್ಪೋರ್ಟಿ ಇಂಟೀರಿಯರ್ ಲುಕ್ನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
10/ 12
ಹಾಗೆಯೇ ಈ ಕಾರನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 520 ಕಿಲೋಮೀಟರ್ವರೆಗೆ ಪ್ರಯಾಣಿಸಬಹುದು.
11/ 12
ಆದರೆ ನೂತನ ಕಾರಿನ ಬೆಲೆಯನ್ನು ಮಹೀಂದ್ರಾ ಕಂಪೆನಿ ಎಲ್ಲೂ ಬಹಿರಂಗಪಡಿಸಿಲ್ಲ.
12/ 12
ಫನ್‌ಸ್ಟರ್
First published:
112
ಮಹೀಂದ್ರಾ ಹೊಸ ಕಾರು: ಮೈಲೇಜ್ ಬರೋಬ್ಬರಿ 520 ಕಿ.ಮೀ