Atum 1.0: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಜಬರ್ದಸ್ತ್ ಬೈಕ್: ಮೈಲೇಜ್ ಬರೋಬ್ಬರಿ 100 ಕಿ.ಮೀ..!
Atum electric bike: ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ಲೈಟ್, ಇಂಡಿಕೇಟರ್ಗಳು ಮತ್ತು ಟೈಲ್ಲೈಟ್ಗಳನ್ನು ಒಳಗೊಂಡಿದೆ. ಹಾಗೆಯೇ ಬ್ಯಾಟರಿಗಳ ಮೇಲೆ 2 ವರ್ಷದ ವಾರೆಂಟಿಯನ್ನು ಕೂಡ ಆಟುಮೊಬೈಲ್ ಕಂಪೆನಿ ನೀಡುತ್ತಿದೆ.
News18 Kannada | September 4, 2020, 6:39 PM IST
1/ 8
ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪೆನಿ ಆಟುಮೊಬೈಲ್ ಪ್ರೈವೇಟ್ ಲಿಮಿಟೆಡ್ (Atumobiles Pvt. Ltd) ಹೊಸ ತಲೆಮಾರಿನ ಎಲೆಕ್ಟ್ರಿಕ್ ಬೈಕ್ ಆಟಮ್ 1.0 (Atum 1.0) ಅನ್ನು ಬಿಡುಗಡೆ ಮಾಡಿದೆ.
2/ 8
ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ, ರೇಸಿಂಗ್ ಶೈಲಿಯ ಎಲೆಕ್ಟ್ರಿಕ್ ಬೈಕ್ ಅನ್ನು ವಿಶೇಷವಾಗಿ ಭಾರತೀಯ ಗ್ರಾಹಕರ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈಗಾಗಲೇ ಇದರ ಫಸ್ಟ್ ಮಾಡೆಲ್ಗಳು ಯುವ ಬೈಕ್ ಪ್ರಿಯರನ್ನು ಸೆಳೆದಿದ್ದು, Atum 1.0 ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
3/ 8
ಈ ಬೈಕ್ನಲ್ಲಿ ಪೋರ್ಟಬಲ್ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗಿದೆ. ಇದರ ಸಂಪೂರ್ಣವಾಗಿ ಜಾರ್ಜ್ ಮಾಡಿಕೊಳ್ಳಲು ತೆಗೆದುಕೊಳ್ಳುವ ಸಮಯ ಕೇವಲ 4 ಗಂಟೆಗಳು ಮಾತ್ರ.
4/ 8
ಹಾಗೆಯೇ ಇದರಲ್ಲಿ ಬಳಸಲಾಗಿರುವ ಹಗುರವಾದ ಬ್ಯಾಟರಿಗಳನ್ನು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು. ಅದೇ ರೀತಿ 3 ಪಿನ್ ಸಾಕೆಟ್ನಲ್ಲಿ ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು.
5/ 8
Atum 1.0 ವಿನ್ಯಾಸದ ಬಗ್ಗೆ ಹೇಳುವುದಾದ್ರೆ, ಒಂದೇ ವಾಕ್ಯದಲ್ಲಿ ಕೆಜಿಎಫ್ ಚಿತ್ರದ ರಾಕಿ ಭಾಯ್ ಬೈಕ್ ಎನ್ನಬಹುದು. ಹೌದು, ಈ ಎಲೆಕ್ಟ್ರಿಕ್ ಬೈಕ್ನ್ನು ಮೊಡಿಫೈ ರೂಪದಲ್ಲೇ ಪರಿಚಯಿಸಲಾಗುತ್ತಿದ್ದು, ಇದಕ್ಕೆ 20 ಎಕ್ಸ್ 4 ಹೆವಿ ಟೈರ್ ನೀಡಲಾಗಿದೆ.
6/ 8
ಇದರೊಂದಿಗೆ ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ಲೈಟ್, ಇಂಡಿಕೇಟರ್ಗಳು ಮತ್ತು ಟೈಲ್ಲೈಟ್ಗಳನ್ನು ಒಳಗೊಂಡಿದೆ. ಹಾಗೆಯೇ ಬ್ಯಾಟರಿಗಳ ಮೇಲೆ 2 ವರ್ಷದ ವಾರೆಂಟಿಯನ್ನು ಕೂಡ ಆಟುಮೊಬೈಲ್ ಕಂಪೆನಿ ನೀಡುತ್ತಿದೆ.
7/ 8
ಇನ್ನು Atum 1.0 ಎಲೆಕ್ಟ್ರಿಕ್ ಬೈಕ್ನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಬರೋಬ್ಬರಿ 100 ಕಿ.ಮೀ ಮೈಲೇಜ್ ಸಿಗಲಿದೆ. ಬ್ಯಾಟರಿ ಫುಲ್ ಚಾರ್ಜ್ ಆಗಲು 1 ಯುನಿಟ್ ವಿದ್ಯುತ್ ಮಾತ್ರ ಬಳಕೆಯಾಗಲಿದ್ದು, 7 ರಿಂದ 8 ರೂ.ನಲ್ಲಿ ನಿಮಗೆ 100 ಕಿ.ಮೀ ಪ್ರಯಾಣಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.
8/ 8
ಅಂದಹಾಗೆ ನೂತನ Atum 1.0 ಎಲೆಕ್ಟ್ರಿಕ್ ಬೈಕ್ನ ಬೆಲೆ 50 ಸಾವಿರ ರೂ.