ಡಿಜಿಟಲ್ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳು ಸಹ ಹೆಚ್ಚುತ್ತಿವೆ. ಸೈಬರ್ ಕ್ರಿಮಿನಲ್‌ಗಳು ಪ್ರತಿನಿತ್ಯ ಜನರಿಗೆ ಕಿರುಕುಳ ನೀಡುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕ್ ಗ್ರಾಹಕರನ್ನು ವಂಚಿಸಲು ಮೆಸೇಜ್ ಮಾಡುವ ರೂಪದಲ್ಲಿ ಬಲೆ ಬೀಸಲಾಗುತ್ತಿದೆ. ಇನ್ನು ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಅಪ್ಡೇಟ್ ಮಾಡಲು ಕೆಲವೊಂದು ಮೆಸೇಜ್ಗಳನ್ನು ಬ್ಯಾಂಕ್ ಹೆಸರಲ್ಲಿ ಹ್ಯಾಕರ್ಸ್ಗಳು ಶೇರ್ ಮಾಡುತ್ತಾರೆ. ಆದ್ರೆ ಇದೀಗ ಇವುಗಳಿಗೆ ಬಲಿಯಾಗದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.
ನಂಬಿಕೆ ವಂಚನೆ: ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರ ಫೋನ್‌ಗಳಿಗೆ ಸೈಬರ್ ಅಪರಾಧಿಗಳು ವಿವಿಧ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಖಾತೆಯ ವಿವರಗಳನ್ನು ಅಪ್ಡೇಟ್ ಮಾಡಲು ಮತ್ತು ತಕ್ಷಣವೇ PAN ವಿವರಗಳನ್ನು ಆ್ಯಡ್ ಮಾಡಲು ಬ್ಯಾಂಕ್ ಬ್ಯಾಂಕ್‌ಗೆ ಸಂಬಂಧಪಟ್ಟ ಮೆಸೇಜ್ಗಳನ್ನು ಕಳುಹಿಸುತ್ತಿದ್ದಾರೆ. ಒಂದು ವೇಳೆ ಅಪ್ಡೇಟ್ ಮಾಡದಿದ್ದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಮೂಲಕ ಗ್ರಾಹಕರಲ್ಲಿ ವಂಚಕರು ಇನ್ನಷ್ಟು ಗೊಂದಲ ಮೂಡಿಸುತ್ತಿದ್ದಾರೆ. ಅದೇ ಸಂದೇಶದಲ್ಲಿ ಲಿಂಕ್ ಕೂಡ ಶೇರ್ ಮಾಡುತ್ತಾರೆ. ಒಂದು ವೇಳೆ ಅವರು ಹೇಳಿದಂತಹ ಮಾತನನ್ಉ ನಂಬಿ ಒಂದು ವೇಳೆ ಆ ಲಿಂಕ್ ಓಪನ್ ಮಾಡಿ ಡೀಟೇಲ್ಸ್ ನೀಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕಂಪ್ಲೀಟ್ ಹ್ಯಾಕ್ ಆಗುತ್ತದೆ. ಜೊತೆಗೆ ನಿಮ್ಮ ಪಾಸ್ವರ್ಡ್, ಪ್ರೈವಸಿಗಳು ಎಲ್ಲವೂ ವಂಚಕರ ಕೈಸೇರುತ್ತೆ. ನಂತರದ ದಿನಗಳಲ್ಲಿ ಅವರು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚಲು ಪ್ರಯತ್ನಿಸುತ್ತಾರೆ.
'ಆತ್ಮೀಯ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರೇ, ನಿಮ್ಮ ಪ್ಯಾನ್ ವಿವರಗಳನ್ನು ಸೇರಿಸದಿದ್ದರೆ, ಖಾತೆಯನ್ನು ರದ್ದುಗೊಳಿಸಲಾಗುತ್ತದೆ. ‘ದಯವಿಟ್ಟು ಖಾತೆ ವಿವರಗಳನ್ನು ಸಲ್ಲಿಸಿ’ ಎಂಬ ಸಂದೇಶ ಬಂದಿರುವುದನ್ನು ಸಂಘಮಿತ್ರ ಎಂಬ ಬಳಕೆದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗಮನಕ್ಕೆ ತಂದಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರು ತನಗೂ ಇದೇ ರೀತಿಯ ಸಂದೇಶ ಬಂದಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ದೂರು ನೀಡಿದ್ದಾರೆ. ಕಳೆದ ವರ್ಷ ಸಹ ಎಸ್‌ಬಿಐ ಗ್ರಾಹಕರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು.
ನಂಬಬೇಡಿ ಎಂದು ಬ್ಯಾಂಕ್ ಗಳ ಸಲಹೆ: ಬ್ಯಾಂಕ್ ಹೆಸರಿನಲ್ಲಿ ಬರುವ ನಕಲಿ ಸಂದೇಶಗಳನ್ನು ನಂಬಬೇಡಿ ಎಂದು ಎಸ್ ಬಿಐ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಗಳು ಸಲಹೆ ನೀಡಿದೆ. ಇನ್ನು ಮೆಸೇಜ್ನಲ್ಲಿರುವ ಲಿಂಕ್ಗಳನ್ನು ಕ್ಲಿಕ್ ಮಾಡೋದ್ರಿಂದ ವಂಚನೆಗೆ ಗುರಿಯಾಗುತ್ತೀರಿ ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಲಹೆ ನೀಡಿದೆ. HDFC ಬ್ಯಾಂಕ್ ತನ್ನ hdfcbk / hdfcbn ಅಧಿಕೃತ ಐಡಿಯಿಂದ ಬ್ಯಾಂಕ್ ಸಂದೇಶಗಳನ್ನು ಮಾತ್ರ ಕಳುಹಿಸಲಾಗುವುದು ಎಂದು ಸಲಹೆ ನೀಡುತ್ತದೆ. ಈ ಸಂದೇಶಗಳಲ್ಲಿನ ಲಿಂಕ್ http://hdfcbk.io ಗೆ ಹೋಲುತ್ತದೆ. ಮತ್ತು ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸಂದೇಶಗಳ ಮೂಲಕ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ ಎಂದು ಎಸ್‌ಬಿಐ ಬ್ಯಾಂಕ್ ಹೇಳಿದೆ. ಗ್ರಾಹಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.