ಭಾರೀ ಮುಂಚೂಣಿಯಲ್ಲಿರುವ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಇತ್ತೀಚೆಗಷ್ಟೇ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಸಿಹಿ ಸುದ್ದಿಯೊಂದನ್ನು ನೀಡಿದೆ. ಇದೀಗ ಮತ್ತೆ ಸೂಪರ್ ಸುದ್ದಿ ತಂದಿದ್ದಾರೆ. ಈ ಕಂಪೆನಿಯ ಸ್ಮಾರ್ಟ್ ಫೋನ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವುದಾಗಿ ಘೋಷಿಸಿದೆ. ಹೊಸ ಫೋನ್ ಖರೀದಿಸುವ ಆಲೋಚನೆಯಲ್ಲಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಪ್ರಸ್ತುತ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಮಾದರಿಯು ರೂ. 57,999 ಬೆಲೆಯನ್ನು ಹೊಂದಿದೆ. ಅಂದರೆ ಸ್ಯಾಮ್ಸಂಗ್ ಕಂಪನಿಯು ಈ ಫೋನ್ ಬೆಲೆ ರೂ. 15 ಸಾವಿರ ಕಡಿಮೆಯಾಗಿದೆ ಎನ್ನಬಹುದು. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್22 ಅನ್ನು ದೇಶೀಯ ಮಾರುಕಟ್ಟೆಯಲ್ಲಿ ರೂ. 72,999 ಬೆಲೆ ನಿಗದಿ ಮಾಡಲಾಗಿದೆ. ಈ ದರವು 8 GB RAM, 128 GB ಸ್ಟೋರೇಜ್ ಹೊಂದಿದ ರೂಪಾಂತರಕ್ಕೆ ಅನ್ವಯಿಸುತ್ತದೆ.
ಫೆಬ್ರವರಿ 1 ರಂದು ಸ್ಯಾಮ್‌ಸಂಗ್ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು ಅವುಗಳೆಂದರೆ ಗ್ಯಾಲಕ್ಸಿ ಎಸ್23 ಅಲ್ಟ್ರಾ, ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23. ಇದು ನಾಲ್ಕು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳು 200 MP ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದನ್ನು ಪ್ರೀ ಬುಕಿಂಗ್ ಮೂಲಕವೂ ಖರೀದಿ ಮಾಡಬಹುದು.