ಟಾಪ್ ಟೆಕ್ ಬ್ರ್ಯಾಂಡ್‌ಗಳು ತಯಾರಿಸಿದ ಫಿಟ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳು ಆರೋಗ್ಯ ಟ್ರ್ಯಾಕರ್‌ಗಳಾಗಿ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಅದಕ್ಕಾಗಿಯೇ ಉತ್ತಮ ಸೆನ್ಸಾರ್ಗಳೊಂದಿಗೆ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಆ್ಯಪಲ್ ಸ್ಮಾರ್ಟ್ ವಾಚ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಹಲವರ ಜೀವ ಉಳಿಸಿ ಸುದ್ದಿಯಲ್ಲಿರುವ ಆ್ಯಪಲ್ ವಾಚ್ ಇದೀಗ ಅಮೆರಿಕದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿ ಭಾರೀ ಸದ್ದಿನಲ್ಲಿದೆ.
ಆ್ಯಪಲ್ ವಾಚ್ ಒಂದು ದಿನ ಇದಕ್ಕಿದ್ದಂತೆಯೇ ಉಸಿರಾಟದ ಪ್ರಮಾಣ ಹೆಚ್ಚಾಗಿದೆ ಎಂದು ತೋರಿಸಿದೆ. ಈ ದರವು ಪ್ರತಿ ನಿಮಿಷಕ್ಕೆ ತೆಗೆದುಕೊಳ್ಳುವ ಉಸಿರಾಟದ ಸಂಖ್ಯೆ ಮತ್ತು ಇದು ಅಸಹಜವಾಗಿ ಹೆಚ್ಚಾದರೆ ಅಥವಾ ಕಡಿಮೆಯಾದರೆ ಅದು ಅನಾರೋಗ್ಯದ ಸೂಚನೆಯಾಗಿರಬಹುದು. ಸಾಮಾನ್ಯ ವಯಸ್ಕರ ಉಸಿರಾಟದ ಪ್ರಮಾಣ ನಿಮಿಷಕ್ಕೆ 12 ರಿಂದ 16 ಆಗಿರಬೇಕು. ಆದರೆ ಇದು ಉಲ್ಬಣಗೊಂಡಾಗ ಕೌನಿಹಾನ್ ಎಚ್ಚರಿಕೆಯಾದರು.
ನಂತರ ಮತ್ತೆ ಆಸ್ಪತ್ರೆಗೆ ಹೋದ ನಂತರ, ಕೆಲವು ಸ್ಕ್ಯಾನ್ಗಳನ್ನು ಮಾಡಲಾಯಿತು. ಆಗ ವೈದ್ಯರು ಕೌನಿಹಾನ್ ಅವರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಕಂಡುಹಿಡಿದರು. ಈ ಸಂದರ್ಭದಲ್ಲಿ ಕ್ಲೀವ್ ಲ್ಯಾಂಡ್ ಕ್ಲಿನಿಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಲೂಸಿ ಫ್ರಾಂಝಿಕ್ ಮಾತನಾಡಿ, ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಇಷ್ಟು ಬೇಗ ತಿಳಿದುಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಅದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಆದ್ದರಿಂದ ಆ್ಯಪಲ್ ವಾಚ್ ಬಹಳಷ್ಟು ಸಹಕಾರಿಯಾಗಿದೆ ಎಂದಿದ್ದಾರೆ.