ಮುಂಚೂಣಿಯಲ್ಲಿರುವ ಪ್ರೀಮಿಯಂ ಫೋನ್ ತಯಾರಕ ಕಂಪೆನಿ ಆ್ಯಪಲ್, ಪ್ರತಿ ವರ್ಷ ಹೊಸ ಸೀರಿಸ್ನ ಐಫೋನ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದ್ಭುತ ಫೀಚರ್ ಗಳೊಂದಿಗೆ ಬಂದಿರುವ ಈ ಐಫೋನ್ ಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯನ್ನು ಸಹ ಹೊಂದಿದೆ. 2022 ರಲ್ಲೂ ಐಫೋನ್‌ಗಳ ಮಾರಾಟವು ಉತ್ತಮವಾಗಿರುವುದರಿಂದ ಆ್ಯಪಲ್ ಕಂಪನಿಯು ಯಶಸ್ವಿ ವರ್ಷವನ್ನು ಪೂರೈಸಿದೆ. ಇತ್ತೀಚಿನ ಮಾರುಕಟ್ಟೆ ಸಂಶೋಧನಾ ವರದಿಯು ಇದೀಗ 2022ರ ವರದಿಯನ್ನು ಬಹಿರಂಗಪಡಿಸಿದೆ.
ಐಫೋನ್ 13 ಹೆಚ್ಚು ಮಾರಾಟವಾದ ಮಾದರಿಯಾಗಿದ್ದರೆ, iPhone 13 Pro Max ಮತ್ತು iPhone 14 Pro Max ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದೆ. ಆ್ಯಪಲ್ ನಂತರ, ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಸ್ಯಾಮ್‌ಸಂಗ್ ಫೋನ್‌ಗಳು ಸಹ ಈ ಪಟ್ಟಿಯಲ್ಲಿವೆ. ಆ್ಯಪಲ್ ಕಂಪೆನಿಯ ಸ್ಮಾರ್ಟ್ಫೋನ್ಗಳು ಮೊದಲ 8 ಸ್ಥಾನದಲ್ಲಿದ್ದರೆ, ಸ್ಯಾಮ್ಸಂಗ 9 ಮತ್ತು 10 ನೇ ಸ್ಥಾನದಲ್ಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸೀರಿಸ್ನ ಸ್ಮಾರ್ಟ್ಫೋನ್ಗಳು ಟಾಪ್ 10 ಸ್ಥಾನದಲ್ಲಿದೆ.
ಹಾಗೆಯೇ ಚೀನಾ, ಯುಎಸ್, ಯುಕೆ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಈ ಫೋನ್ ಹೆಚ್ಚು ಸೇಲ್ ಆಗಿದ್ದು, ದಾಖಲೆ ಬರೆದಿದೆ. ಅದರಂತೆ ಐಫೋನ್ 13 ಸೆಪ್ಟೆಂಬರ್ 2021 ಲಾಂಚ್ ಆಗಿದ್ದು, ಅಂದಿನಿಂದ ಆಗಸ್ಟ್ 2022 ರವರೆಗೆ ಪ್ರತಿ ತಿಂಗಳು ನಂಬರ್ ಒನ್ ಸ್ಮಾರ್ಟ್‌ಫೋನ್ ಆಗಿ ತನ್ನ ಖ್ಯಾತಿ ಉಳಿಸಿಕೊಂಡು ಬಂದಿದೆ. ಇದಕ್ಕೆ ಕಾರಣ ಏನೆಂದರೆ ಇದಾದ ನಂತರ ಲಾಂಚ್ ಆದ ಐಫೋನ್ 14 ಫೋನ್ ಬೆಲೆ ಹೆಚ್ಚಿಗೆ ಇದ್ದದ್ದು.
ಆಫರ್ನಲ್ಲೂ ಹೆಚ್ಚು ಬೇಡಿಕೆ: ಪ್ರಮುಖ ಇ ಕಾಮರ್ಸ್ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಇತರೆ ಸೈಟ್‌ಗಳಲ್ಲಿ ಈ ಐಫೋನ್ 13 ಹೆಚ್ಚು ಮಾರಾಟ ಆಗುತ್ತಿದೆ. ಹಾಗೆಯೇ ಇಂದಿಗೂ ಅಧಿಕ ರಿಯಾಯಿತಿ ಸಹ ಈ ಫೋನ್‌ಗಳಿಗೆ ಲಭ್ಯವಾಗುತ್ತಿರುವುದೇ ಈ ಫೋನ್ ಹೆಚ್ಚು ಖರೀದಿಯಾಗಲು ಸಾಧ್ಯವಾಗಿದೆ. ಸದ್ಯಕ್ಕೆ ಈ ಫೋನ್ ಅನ್ನು ನೀವು 69,900ರೂಪಾಯಿಗಳ ಆರಂಭಿಕ ಬೆಲೆಯಿಂದ ಖರೀದಿ ಮಾಡಬಹುದಾಗಿದೆ.
ಐಫೋನ್ 13 ಪ್ರೋ ಮ್ಯಾಕ್ಸ್ 2ನೇ ಸ್ಥಾನ: ಐಫೋನ್ 13 ಆದ ನಂತರ ಹೆಚ್ಚು ಸೇಲ್ ಆದ ಫೋನ್‌ಗಳಲ್ಲಿ ಎರಡನೇ ಸ್ಥಾನ ಪಡೆದ ಫೋನ್ ಎಂದರೆ ಅದು ಐಫೋನ್ 13 ಪ್ರೋ ಮ್ಯಾಕ್ಸ್. ವಿಶೇಷ ಎಂದರೆ ಈ ಫೋನ್ ಐಫೋನ್ 13 ಪ್ರೋಗಿಂತಲೂ ಹೆಚ್ಚು ಮಾರಾಟ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾಗೆಯೇ ಈ ರೀತಿಯ ಬೆಳವಣಿಗೆ ಆಗಿರುವುದು ಇದೇ ಮೊದಲ ಬಾರಿ ಎಂದು ತಂತ್ರಜ್ಞರ ಅಭಿಪ್ರಾಯ. ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ಹೊಸ ಐಫೋನ್ 14 ಪ್ರೋ ಮೊಬೈಲ್ ಇದೆ.
ಆ್ಯಪಲ್ ತನ್ನ ಹೊಸ ಐಫೋನ್ 15 ಸೀರಿಸ್ನ ಸ್ಮಾರ್ಟ್ಫೋನ್ಗಳನ್ನು ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಹೊಸ ಐಫೋನ್‌ಗಳು 'ಡೈನಾಮಿಕ್ ಐಲ್ಯಾಂಡ್ ಕಟೌಟ್' ಎಂಬ ವಿಶೇಷ ವಿನ್ಯಾಸದೊಂದಿಗೆ ಬರಲಿವೆ. ಆದರೆ ಈ ಸರಣಿಯನ್ನು ಪ್ರಾರಂಭಿಸುವ ಮೊದಲು ಕಂಪನಿಯು ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಅನ್ನು ಸಾಧ್ಯವಾದಷ್ಟು ಮಾರಾಟ ಮಾಡಲು ಬಯಸುತ್ತದೆ. ಇದಕ್ಕಾಗಿ, ಈ ಮಾದರಿಗಳಿಗೆ ಹೊಸ ಹಳದಿ ಬಣ್ಣದ ಆಯ್ಕೆಯನ್ನು ಸಹ ಬಿಡುಗಡೆ ಮಾಡಿದೆ.