WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

WhatsApp: ವಾಟ್ಸಾಪ್​ನಲ್ಲಿ ಇದೀಗ ಹೊಸ ಹೊಸ ಅಪ್ಡೇಟ್​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಚರ್ಚೆಯಲ್ಲಿದೆ. ಅದೇ ರೀತಿ ಈಗ ತನ್ನ ಬಳಕೆದಾರರಿಗಾಗಿ ವಾಟ್ಸಾಪ್​ ಮತ್ತೊಂದು ಹೊಸ ಫೀಚರ್​ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಇನ್ಮುಂದೆ ವಾಟ್ಸಾಪ್​ ಕಾಲ್​ ಅನ್ನು ಶೆಡ್ಯೂಲ್​ ಮಾಡಿಡಬಹುದು.

First published:

  • 18

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಟೆಕ್ ಕಂಪನಿಗಳು ಜನರ ಅಗತ್ಯತೆಗಳನ್ನು ಪೂರೈಸಲು ತಮ್ಮ ವೈಶಿಷ್ಟ್ಯಗಳನ್ನು ನಿರಂತರವಾಗಿ ಅಪ್ಡೇಟ್​ ಮಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್‌ನಲ್ಲಿ ವಾಟ್ಸಾಪ್ ಇದೆ. ಪ್ರತಿಯೊಬ್ಬರೂ ವೈಯಕ್ತಿಕ, ವೃತ್ತಿಪರ, ವ್ಯಾಪಾರ ಮತ್ತು ವ್ಯವಹಾರದ ಉದ್ದೇಶಗಳಿಗಾಗಿ ವಾಟ್ಸಾಪ್​ ಅನ್ನು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್​ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಮಾತೃ ಸಂಸ್ಥೆ ಮೆಟಾ ಮತ್ತೊಂದು ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

    MORE
    GALLERIES

  • 28

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಗ್ರೂಪ್​ ಕಾಲ್​ ಶೆಡ್ಯೂಲಿಂಗ್​: ವಾಟ್ಸಾಪ್​ ಅಪ್ಲಿಕೇಶನ್‌ನಲ್ಲಿ ಗ್ರೂಪ್​ ಕಾಲ್​ ಮಾಡುವಾಗ ಶೆಡ್ಯೂಲಿಂಗ್​ ಮಾಡಿಡುವ ವೈಶಿಷ್ಟ್ಯವನ್ನು ತರಲು ಮೆಟಾ ಶ್ರಮಿಸುತ್ತಿದೆ. ಇದು ಈಗಾಗಲೇ ಪರೀಕ್ಷಾ ಹಂತದಲ್ಲಿದೆ. ಟೆಸ್ಟ್ ಫ್ಲೈ ಪ್ರೋಗ್ರಾಂಗೆ ಮೊದಲು ನೋಂದಾಯಿಸಿದ ವಾಟ್ಸಾಪ್​ ಬೀಟಾ ಬಳಕೆದಾರರಿಗೆ ಇತ್ತೀಚಿನ ನವೀಕರಣ ಆವೃತ್ತಿಯ iOS 23.4.0 ನಲ್ಲಿ ಲಭ್ಯವಿರುತ್ತದೆ.

    MORE
    GALLERIES

  • 38

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಸಾಮಾನ್ಯವಾಗಿ, ನೀವು ಫ್ಯಾಮಿಲಿಯವರ ಜೊತೆ ಮತ್ತು ಸ್ನೇಹಿತರೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಬೇಕಾದರೆ ಅಥವಾ ನೀವು ಕಚೇರಿಯಲ್ಲಿ ಜನರೊಂದಿಗೆ ಮೀಟಿಗಳನ್ನು ನಡೆಸಬೇಕಾದರೆ, ನೀವು ಈ ಹಿಂದೆ ರಿಮೈಂಡರ್‌ಗಳನ್ನು ಹೊಂದಿಸಬೇಕಾಗಿತ್ತು. ಆದರೆ ಇನ್ಮುಂದೆ ವಿಡಿಯೋಕಾಲ್​ ಅನ್ನು ವಾಟ್ಸಾಪ್​ನಲ್ಲಿ ಶೆಡ್ಯೂಲ್​ ಮಾಡಿಯೂ ಇಡಬಹುದು.

    MORE
    GALLERIES

  • 48

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಈ ಫೀಚರ್​ ಮೂಲಕ ಕರೆ ಶೆಡ್ಯೂಲ್ ಮಾಡಲು ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ನಿಗದಿಪಡಿಸಿದರೆ ಸಾಕು. ಇನ್ನು ಈ ಹೊಸ ಫೀಚರ್ ಪ್ರಮುಖ ಕೆಲಸಗಳಲ್ಲಿ ನಿರತರಾಗಿರುವ ಜನರಿಗೆ  ತುಂಬಾ ಉಪಯುಕ್ತವಾಗಿದೆ ಎಂದು ವಾಬೀಟಾಇನ್ಫೋ ತನ್ನ ವರದಿಯಲ್ಲಿ ತಿಳಿಸಿದೆ. ಯಾರೊಂದಿಗೆ ಯಾವಾಗ ಮಾತನಾಡಬೇಕು ಎಂದು ಮೊದಲೇ ನಿಗದಿಪಡಿಸಿರುವುದರಿಂದ ಯಾವುದೇ ಗೊಂದಲ ಉಂಟಾಗುವುದಿಲ್ಲ ಎಂದು ಹೇಳಿದರು.

    MORE
    GALLERIES

  • 58

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಹೇಗೆ ಬಳಸುವುದು: ನೀವು ವಾಟ್ಸಾಪ್​ನಲ್ಲಿ ಕರೆ ಬಟನ್ ಅನ್ನು ಒತ್ತಿದಾಗ, ನೀವು ಮೆನುವಿನಲ್ಲಿ 'Schedule Call' ಎಂಬ ಆಯ್ಕೆಯನ್ನು ಬಳಸಬಹುದು. ಇಲ್ಲಿ ನೀವು ಯಾವಾಗ ಕರೆ ಮಾಡಬೇಕು ಮತ್ತು ಯಾರಿಗೆ ಕರೆ ಮಾಡಬೇಕೆಂದು ಆಯ್ಕೆ ಮಾಡಬಹುದು. ಆ ಸಮಯದಲ್ಲಿ ನಾಟಿಫಿಕೇಶನ್​ ಸಹ ನೀವು ಆಯ್ಕೆ ಮಾಡಿದ ನಂಬರ್​ಗಳಿಗೆ ಹೋಗುತ್ತದೆ.

    MORE
    GALLERIES

  • 68

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಇನ್ನು ಈ ಹೊಸ ಶೆಡ್ಯೂಲಿಂಗ್​ ಕಾಲ್​ ಮಾಡುವ ಫೀಚರ್​ ಅನ್ನು ಆಡಿಯೋ ಅಥವಾ ವಿಡಿಯೋ ಕರೆಗಳಲ್ಲಿ ಎರಡರಲ್ಲಿ ಬಳಸಬಹುದು. ಇನ್ನು ಈ ಫೀಚರ್​ ವಾಟ್ಸಾಪ್​ ಮೂಲಕ ಕಾನ್ಫರೆನ್ಸ್ ಮೀಟಿಂಗ್​ ಮಾಡುವವರಿಗೆ ಬಹಳಷ್ಟು ಪ್ರಯೋಜನವಾಗಲಿದೆ.

    MORE
    GALLERIES

  • 78

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    ಸರ್ಚ್​​ ಬಾರ್ ಫೀಚರ್: ​ ವಾಟ್ಸಾಪ್‌ ಸೆಟ್ಟಿಂಗ್ ವಿಭಾಗವನ್ನು ನ್ಯಾವಿಗೇಟ್ ಮಾಡಲು ಬಳಕೆದಾರರಿಗೆ ಸುಲಭವಾಗುವಂತೆ ಮಾಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ. ಇದುವರೆಗೆ ವಾಟ್ಸಾಪ್​ನಲ್ಲಿ ಏನಾದರು ಸೆಟ್​ ಮಾಡಬೇಕಾದರೆ ಪ್ರತ್ಯೇಕವಾಗಿ ಸೆಟ್ಟಿಂಗ್ಸ್​​ ವಿಭಾಗಕ್ಕೆ ಹೋಗಿಯೇ ಅಪ್ಡೇಟ್​ ಮಾಡಬೇಕಿತ್ತು. ಆದರೆ ಇನ್ಮುಂದೆ ಸರ್ಚ್ ಮಾಡುವ ಮೂಲಕ ಸೆಟ್​ ಮಾಡಬಹುದು.

    MORE
    GALLERIES

  • 88

    WhatsApp: ವಾಟ್ಸಾಪ್​ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್​ ಶೆಡ್ಯೂಲ್ ಸಹ​ ಮಾಡಿಡಬಹುದು!

    15 ನಿಮಿಷದಲ್ಲಿ ಎಡಿಟ್​ ಮಾಡ್ಬಹುದು: ವಾಟ್ಸಾಪ್‌ ಶೀಘ್ರದಲ್ಲೇ ಎಡಿಟ್‌ ಸೆಂಡ್‌ ಮೆಸೇಜ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ಈಗಾಗಲೇ ಸೆಂಡ್‌ ಮಾಡಿರುವ ಮೆಸೇಜ್‌ ಅನ್ನು ಎಡಿಟ್‌ ಮಾಡಲು ಅವಕಾಶ ನೀಡಲಿದೆ. ಆದರೆ ನೀವು ಮೆಸೇಜ್‌ ಅನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಎಡಿಟ್ ಮಾಡಲು ಅವಕಾಶ ನೀಡಲಿದೆ ಎಂದು ವರದಿಯಾಗಿದೆ. ಇದರಿಂದ ನೀವು ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅದರಲ್ಲಿ ಏನಾದರು ತಪ್ಪಿದ್ದರೆ ಆಗಲೇ ಎಡಿಟ್​ ಮಾಡುವಂತಹ ಅವಕಾಶ ಲಭ್ಯವಾಗುತ್ತದೆ.

    MORE
    GALLERIES