Rummy: ಪಬ್ಜಿ ಬೆನ್ನಲ್ಲೇ ಬ್ಯಾನ್ ಆಯ್ತು ರಮ್ಮಿ, ಪೋಕರ್!; ಯಾವ ರಾಜ್ಯದಲ್ಲಿ ಗೊತ್ತಾ?
ಇದೀಗ ಆಂಧ್ರ ಪ್ರದೇಶ ಸರ್ಕಾರ ಆನ್ಲೈನ್ ರಮ್ಮಿ ಮತ್ತು ಪೋಕರ್ ಗೇಮ್ ಅನ್ನು ನಿಷೇಧ ಮಾಡಿದೆ. ಆ ಮೂಲಕ ಜನರು ಆನ್ಲೈನ್ ಗೇಮ್ಗಳ ವ್ಯಸನಗಳಿಗೆ ತುತ್ತಾದಂತೆ ದಿಟ್ಟ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರ ಬುಧವಾರದಂದು 118 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಅದರಲ್ಲಿ ಜನಪ್ರಿಯವಾಗಿದ್ದ ಪಬ್ಜಿ ಆ್ಯಪ್ ಅನ್ನು ಕೂಡ ನಿಷೇಧ ಮಾಡಿದೆ.
2/ 8
ಇದೀಗ ಆಂಧ್ರ ಪ್ರದೇಶ ಸರ್ಕಾರ ಆನ್ಲೈನ್ ರಮ್ಮಿ ಮತ್ತು ಪೋಕರ್ ಗೇಮ್ ಅನ್ನು ನಿಷೇಧ ಮಾಡಿದೆ. ಆ ಮೂಲಕ ಜನರು ಆನ್ಲೈನ್ ಗೇಮ್ಗಳ ವ್ಯಸನಗಳಿಗೆ ತುತ್ತಾದಂತೆ ದಿಟ್ಟ ನಿರ್ಧಾರ ಕೈಗೊಂಡಿದೆ.
3/ 8
ಇತ್ತೀಚೆಗೆ ಯುವ ಜನರು ಆನ್ಲೈನ್ ಗೇಮ್ಗಳ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ಅದರ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಇಂತಹ ಸ್ಥಿತಿಗತಿ ನಿರ್ಮಾಣವಾಗದಂತೆ ಆಂಧ್ರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡು ರಮ್ಮಿ, ಪೋಕರ್ ಗೇಮ್ ಅನ್ನು ತಮ್ಮ ರಾಜ್ಯದಲ್ಲಿ ನಿಷೇಧಿಸಿದೆ.
4/ 8
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
5/ 8
ಇನ್ನು ಆನ್ಲೈನ್ ಜೂಜಾಟ ಸಂಘಟಕರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಆಂಧ್ರ ಸರ್ಕಾರ ಎಚ್ಚರಿಕೆ ನೀಡಿದೆ.
6/ 8
ಅದರಂತೆ ನಿಷೇಧದ ನಂತರ ರಮ್ಮಿ, ಪೋಕರ್ ಅಪ್ಲಿಕೇಶನ್ ಬಳಸಿದರೆ ಅವರಿಗೆ ಆರು ತಿಂಗಳ ಶಿಕ್ಷೆಯನ್ನು ವಿಧಿಸಲಾಗುವುದು ಎಂದಿದೆ.
7/ 8
ಈ ಮೊದಲು ಕರ್ನಾಟಕದಲ್ಲೂ ರಮ್ಮು ಆನ್ಲೈನ್ ಗೇಮ್ ಬಗ್ಗೆ ದೊಡ್ಡದಾಗಿ ಚರ್ಚೆ ಶುರುವಾಗಿತ್ತು. ಸ್ಯಾಂಡಲ್ವುಡ್ ನಟ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು.
8/ 8
ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಬರಹಗಾರ ಆಹೋರಾತ್ರ ಅವರು ಆಕ್ಷೇಷ ವ್ಯಕ್ತಪಡಿಸಿದ್ದರು. ಸ್ಟಾರ್ ನಟರೊಬ್ಬರು ಜೂಜಾಟಕ್ಕೆ ಪ್ರಚೋದನೆ ನೀಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದಿದ್ದರು.