Ambrane Smart Watch: ಕಡಿಮೆ ಬೆಲೆಗೆ ಸಿಗುತ್ತದೆ ಈ ಸ್ಮಾರ್ಟ್ವಾಚ್! ಏನಿದರ ವಿಶೇಷತೆ ನೋಡಿ
ಸ್ಮಾರ್ಟ್ ವಾಚ್ ಮೂಲಕ ಫೋನ್ನಲ್ಲಿ ಬರುವ ಸಂಗೀತವನ್ನು ನಿಯಂತ್ರಿಸಬಹುದು. ವಾಚ್ನಲ್ಲಿ ವಾಯ್ಸ್ ಅಸಿಸ್ಟೆಂಟ್ನಂತಹ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. 365 ದಿನಗಳ ವಾರಂಟಿಯನ್ನು ನೀಡುತ್ತಿದೆ.
ಅಂಬ್ರೇನ್ ತನ್ನ ವೈಸ್ ಗ್ಲೇಜ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್ ವಾಚ್ ಯುನಿಪೇರ್ ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಮಾರ್ಟ್ನ (MRP) ಬೆಲೆ ರೂ.5,990 ಆಗಿದೆ.
2/ 8
ನೀವು ಅದನ್ನು 50% ರಿಯಾಯಿತಿಯೊಂದಿಗೆ ಖರೀದಿಸಬಹುದು. ಕಂಪನಿಯು ಈ ವಾಚ್ಗೆ 365 ದಿನಗಳ ವಾರಂಟಿಯನ್ನು ಸಹ ನೀಡುತ್ತಿದೆ. ವೈಸ್ ಗ್ಲೇಜ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಆಸಕ್ತರು ಇದನ್ನು ಖರೀದಿಸಬಹುದು.
3/ 8
ಸ್ಮಾರ್ಟ್ ವಾಚ್ 1.78-ಇಂಚಿನಲ್ಲಿದೆ. ಇದು ಕಪ್ಪು, ನೀಲಿ, ಹಸಿರು ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದೆ. ವಿಷೇಶವೆಂದರೆ ಕಂಪನಿಯು ಬಿಡುಗಡೆಯಾದ ಮೊದಲ ದಿನವೇ 15,000 ಕ್ಕೂ ಹೆಚ್ಚು ಸ್ಮಾರ್ಟ್ ವಾಚ್ಗಳನ್ನು ಮಾರಾಟವಾಗಿದೆ.
4/ 8
ವೈಸ್ ಗ್ಲೇಜ್ ಸ್ಮಾರ್ಟ್ ವಾಚ್ 280 mAh ಬ್ಯಾಟರಿಯನ್ನು ಹೊಂದಿದೆ. ಇದು 7 ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ. ವಾಚ್ನಲ್ಲಿ 100+ ಸ್ಪೋರ್ಟ್ಸ್ ಫೀಚರ್ಸ್ ಹೊಂದಿದೆ.
5/ 8
ವೈಸ್ ಗ್ಲೇಜ್ನ AMOLED ಡಿಸ್ಪ್ಲೇ ತುಂಬಾ ಪ್ರಕಾಶಮಾನವಾಗಿದೆ ಆದ್ದರಿಂದ ಬಿಸಿನಲ್ಲಿಯೂ ನೀವು ಸ್ಪಷ್ಟವಾಗಿ ಸ್ಕ್ರೀನ್ ನೋಡಬಹುದು. ಬ್ಲೂಟೂತ್ ಕರೆ ವೈಶಿಷ್ಟ್ಯತೆ ಹೊಂದಿದೆ.
6/ 8
ಇದರಲ್ಲಿ ಮೈಕ್ ಮತ್ತು ಸ್ಪೀಕರ್ ಇದೆ. ಅಲ್ಲದೆ, ಯುನಿಪೇರ್ ತಂತ್ರಜ್ಞಾನವನ್ನು ಸ್ಮಾರ್ಟ್ ವಾಚ್ನಲ್ಲಿ ಒದಗಿಸಲಾಗಿದ್ದು, ನೀವು ಅದನ್ನು ಒಮ್ಮೆ ಮಾತ್ರ ಜೋಡಿಸಿದರೆ ಸಾಕು.
7/ 8
ಇದಲ್ಲದೆ, ಹೃದಯ ಬಡಿತ ಮಾನಿಟರಿಂಗ್ ಮಾಡುತ್ತದೆ, ಹೃದಯ ಬಡಿತ ಲೆಕ್ಕಾಚಾರ, ನಿದ್ರೆ ಸಮಯ, ದೇಹದ ತಾಪಮಾನ ಪತ್ತೆ ಹಚ್ಚುವುದು ಹೀಗೆ ಹಲವು ಉತ್ತಮ ಫೀಚರ್ಸ್ ಹೊಂದಿದೆ.
8/ 8
ಸ್ಮಾರ್ಟ್ ವಾಚ್ ಮೂಲಕ ಫೋನ್ನಲ್ಲಿ ಬರುವ ಸಂಗೀತವನ್ನು ನಿಯಂತ್ರಿಸಬಹುದು. ವಾಚ್ನಲ್ಲಿ ವಾಯ್ಸ್ ಅಸಿಸ್ಟೆಂಟ್ನಂತಹ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. 365 ದಿನಗಳ ವಾರಂಟಿಯನ್ನು ನೀಡುತ್ತಿದೆ.