ಇ-ಕಾಮರ್ಸ್ ಸಂಸ್ಥೆ ಅಮೆಜಾನ್ (Amazon) ತನ್ನ ಮುಂಬರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನ (Great Republic Day sale) ದಿನಾಂಕಗಳನ್ನು ಬಹಿರಂಗಪಡಿಸಿದೆ. ಸೇಲ್ ಜನವರಿ 17 ರಿಂದ ಜನವರಿ 20 ರವರೆಗೆ ನಡೆಯಲಿದೆ. ಆದರೂ ಅಮೆಜಾನ್ ಪ್ರೈಮ್ (Amazone Pirme) ಬಳಕೆದಾರರಿಗೆ ಸೇಲ್ ಒಂದು ದಿನ ಮುಂಚಿತವಾಗಿ (ಜನವರಿ 16) ಆರಂಭಗೊಳ್ಳಲಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಸಂಸ್ಥೆಯು ಸ್ಮಾರ್ಟ್ಫೋನ್ಗಳು (Smartphone), ಟಿವಿ (Tv), ಎಲೆಕ್ಟ್ರಾನಿಕ್ಸ್ (Electronics) ಉಪಕರಣಗಳು ಹಾಗೂ ಗೃಹೋಪಕರಣಗಳನ್ನೊಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅತ್ಯುತ್ತಮ ಡೀಲ್ಗಳು (Deal) ಹಾಗೂ ರಿಯಾಯಿತಿಗಳನ್ನು (Offer) ಒದಗಿಸಲಿದೆ.
ಸ್ಮಾರ್ಟ್ಫೋನ್ ಮೇಲೆ ಆಫರ್ಗಳು: ಗ್ರೇಟ್ ರಿಪಬ್ಲಿಕ್ ಡೇ ಸೇಲ್ಗಾಗಿ ಅಮೆಜಾನ್ನ ಲ್ಯಾಂಡಿಂಗ್ ಪೇಜ್ ಸಲಹೆ ಮಾಡಿರುವಂತೆ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್ಸ್ಟಾಲ್ಮೆಂಟ್ಗಳ ಮೂಲಕ (no-cost EMI) 12 ತಿಂಗಳವರೆಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಅತ್ಯುನ್ನತ ಸ್ಮಾರ್ಟ್ಫೋನ್ಗಳ ಮೇಲೆ ಇ - ಕಾಮರ್ಸ್ ದೈತ್ಯ 40% ವರೆಗಿನ ರಿಯಾಯಿತಿಗಳನ್ನು ನೀಡುತ್ತದೆ ಎಂದು ತಿಳಿಸಿದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಮೇಲೆ ಆಫರ್ಗಳು: ಸ್ಟೇಟ್ ಬ್ಯಾಂಕ್ ಇಂಡಿಯಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರಿಗೂ ಸೇಲ್ ದಿನಗಳಲ್ಲಿ ಭರ್ಜರಿ ಕೊಡುಗೆಗಳನ್ನು ಸಂಸ್ಥೆ ಒದಗಿಸಿದೆ. ಕಾರ್ಡ್ಗಳನ್ನು ಬಳಸಿ ಖರೀದಿ ನಡೆಸುವ ಗ್ರಾಹಕರು 10% ರಿಯಾಯಿತಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಮೆಜಾನ್ ಪೇ, ಐಸಿಐಸಿಐ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ ಲೇಟರ್, ಹಾಗೂ ಆಯ್ದ ಡೆಬಿಟ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್ಸ್ಟಾಲ್ಮೆಂಟ್ಗಳ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಡಿಸ್ಕೌಂಟ್ ಕುರಿತು ಯಾವುದೇ ನಿಯಮಾವಳಿಗಳನ್ನು ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ. ಇನ್ನು ಬಜಾಜ್ ಫಿನ್ಸರ್ವ್ ಕಾರ್ಡ್ ಬಳಕೆದಾರರು ವೆಚ್ಚರಹಿತ ಇಎಮ್ಐಗಳನ್ನು ಉತ್ಪನ್ನಗಳ ಮೇಲೆ ಪಡೆದುಕೊಳ್ಳುವಂತೆ ಖರೀದಿಗಳನ್ನು ಮಾರ್ಪಡಿಸಿಕೊಳ್ಳಬಹುದು ಎಂಬುದಾಗಿ ಸೇಲ್ ಪೇಜ್ ಉಲ್ಲೇಖಿಸಿದೆ. ಹೆಚ್ಚುವರಿ ಡಿಸ್ಕೌಂಟ್ಗಳನ್ನು ಪಡೆದುಕೊಳ್ಳಲು ಗ್ರಾಹಕರು ತಮ್ಮ ಪ್ರಾಡಕ್ಟ್ಗಳನ್ನು ವಿನಿಮಯ ಮಾಡಿಕೊಳ್ಳಬಹುದು.