ಭಾರತದಾದ್ಯಂತ ಸಾಕಷ್ಟು ಜನರು ಅಮೆಜಾನ್ ಪ್ರೈಮ್ ಬಳಸುತ್ತಿದ್ದಾರೆ. ಇದೀಗ ತನ್ನ ಹೊಸ ಚಂದಾದಾರರಿಗೆ ‘ಯೂತ್ ಆಫರ್’ ಅನ್ನು ಘೋಷಿಸಿದೆ. ಅದರ ಮೂಲಕ ಹೆಚ್ಚಿನ ಚಂದಾದಾರಿಕೆಯನ್ನು ತನ್ನತ್ತ ಸೆಳೆಯುವಂತೆ ಮಾಡಲು ಮುಂದಾಗಿದೆ. ಯೂತ್ ಆಫರ್ ಮೂಲಕ ಅಮೆಜಾನ್ ಪ್ರೈಮ್ ಅನೇಕ ಬೆನಿಫಿಟ್ ನೀಡುತ್ತಿದ್ದು, ಇ-ಕಾಮರ್ಸ್ ಆದೇಶಗಳ ಉಚಿತ ಮತ್ತು ತ್ವರಿತ ವಿತರಣೆಯನ್ನು ಮಾಡುವ ಅವಕಾಶ ನೀಡಿದೆ. ಅದರ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಪ್ರವೇಶ, ಸಂಗೀತ, ಓದುವಿಕೆ ಆಯ್ಕೆಯೂ ಸೇರಿದೆ. ಅಂದಹಾಗೆಯೇ ಈ ಆಫರ್ ಪಡೆಯುವ ಬಳಕೆದಾರರು 18 ರಿಂದ 24 ವರ್ಷ ವಯಸ್ಸಿನವರಾಗಿರಬೇಕು.