ಸ್ಮಾರ್ಟ್ಫೋನ್ಗಳು, ಸ್ಮಾರ್ಟ್ವಾಚ್ಗಳು, ಸ್ಮಾರ್ಟ್ ಟಿವಿಗಳು, ಅಡುಗೆ ಪರಿಕರಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರ ಉತ್ಪನ್ನಗಳ ಮೇಲೆ ಉತ್ತಮ ಡೀಲ್ಗಳನ್ನು ಇದೀಗ ಅಮೆಜಾನ್ ನೀಡುತ್ತಿದೆ. ಆದರೆ ಈ ಎರಡೂ ಪೋರ್ಟಲ್ಗಳಲ್ಲಿ ಆ್ಯಪಲ್ ಏರ್ಪಾಡ್ಗಳ ಬೆಲೆಯನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಈ ಸಂದರ್ಭದಲ್ಲಿ, ಈ ಇಯರ್ಬಡ್ಗಳನ್ನು ಖರೀದಿಸುವ ಪ್ಲ್ಯಾನ್ನಲ್ಲಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಮೆಜಾನ್ 'ಗ್ರೇಟ್ ರಿಪಬ್ಲಿಕ್ ಡೇ ಸೇಲ್ಸ್' ಎಂಬ ಕೊಡುಗೆಗಳನ್ನು ಆರಂಭಿಸಿದೆ. ಈ ಕೊಡುಗೆಗಳಲ್ಲಿ, ಆ್ಯಪಲ್ ಏರ್ಪಾಡ್ಸ್ ಬೆಲೆ ರೂ. 8,999 ಆಗಿದೆ. ಅಲ್ಲದೆ, ವಿಶೇಷ ಕೊಡುಗೆಯಾಗಿ, ಅಮೆಜಾನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 10% ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೇ, ಗ್ರಾಹಕರು 6 ತಿಂಗಳವರೆಗೆ ಉಚಿತ ಸ್ಪಾಟಿಫೈ ಪ್ರೀಮಿಯಂ ಸದಸ್ಯತ್ವವನ್ನು ಪಡೆಯಬಹುದು
ಫ್ಲಿಪ್ಕಾರ್ಟ್ 'ಬಿಗ್ ಸೇವಿಂಗ್ ಡೇಸ್' ಎಂಬ ವಿಶೇಷ ಗಣರಾಜ್ಯ ದಿನದ ಕೊಡುಗೆಗಳನ್ನು ಆರಂಭಿಸಿದೆ. ಈ ಆಫರ್ಗಳು ಜನವರಿ 15 ರಂದು ಪ್ರಾರಂಭವಾಗಿದ್ದು, 20 ರವರೆಗೆ ಮುಂದುವರಿಯುತ್ತದೆ. ಈ ಮಾರಾಟದಲ್ಲಿ, ಆ್ಯಪಲ್ ಏರ್ಪಾಡ್ಸ್ ಬೆಲೆ ರೂ. 9,499 ಪಟ್ಟಿ ಮಾಡಲಾಗಿದೆ. ಅಲ್ಲದೆ, ಫ್ಲಿಪ್ಕಾರ್ಟ್ ಸಿಟಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಹೆಚ್ಚುವರಿ 10% ರಿಯಾಯಿತಿಯನ್ನು ನೀಡುತ್ತಿದೆ.
ಈಗ ಆ್ಯಪಲ್ ತನ್ನ ಪೋರ್ಟ್ಪೋಲಿಯೋದಲ್ಲಿ 3 ವರ್ಷನ್ನಲ್ಲಿ ಏರ್ಪಾಡ್ಗಳನ್ನು ಬಿಡುಗಡೆ ಮಾಡಿದೆ. ಈ ವರ್ಷನ್ನಲ್ಲಿ ಇದೀಗ ಏರ್ಪಾಡ್ಸ್ ಪ್ರೋ ಮತ್ತು ಏರ್ಪಾಡ್ಸ್ ಮ್ಯಾಕ್ಸ್ ಅನ್ನು ನೀಡುತ್ತದೆ. ಇವುಗಳಲ್ಲಿ, ಎರಡನೇ ತಲೆಮಾರಿನ ಏರ್ಪಾಡ್ಸ್ ಗಳು ಜಾಗತಿಕವಾಗಿ ಹೆಚ್ಚು ಮಾರಾಟವಾಗುತ್ತಿವೆ. ಇವುಗಳು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಇದು ಉತ್ತಮ ಬ್ಯಾಟರಿ ಬಾಳಿಕೆ ಹೊಂದಿದೆ.