Amazon Great Republic Day Offers: ಅಮೆಜಾನ್ ರಿಪಬ್ಲಿಕ್ ಡೇ ಸೇಲ್; 19 ಸಾವಿರದ ಸ್ಮಾರ್ಟ್ವಾಚ್ ಅನ್ನು ಕೇವಲ 1,799ಕ್ಕೆ ಖರೀದಿಸಿ
ಇಕಾಮರ್ಸ್ ಕಂಪೆನಿಗಳು ಪ್ರತೀ ಬಾರಿ ಏನಾದರೊಂದು ಸಂಭ್ರಮದ ದಿನಗಳು ಬಂದಾಗ ಏನಾದರೂ ಆಫರ್ಸ್ಗಳ ಜೊತೆಗೆ ಆಚರಣೆಗಳನ್ನು ಮಾಡುತ್ತಿರುತ್ತದೆ. ಆದೇ ರೀತಿ ಈ ಬಾರಿಯ ರಿಪಬ್ಲಿಕ್ ಡೇ ಅಂಗವಾಗಿ ಇದೀಗ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಅದರಲ್ಲೂ 19,999 ರೂಪಾಯಿಯ ಸ್ಮಾರ್ಟ್ವಾಚ್ ಅನ್ನು ಈ ಸೇಲ್ನಲ್ಲಿ ಕೇವಲ 1799 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
ಸಂಕ್ರಾಂತಿಗೂ ಮುನ್ನವೇ ಈ ಇ-ಕಾಮರ್ಸ್ ಕಂಪನಿಗಳು ಆಫರ್ಗಳೊಂದಿಗೆ ಸಂಭ್ರಮಾಚರಣೆ ಆರಂಭಿಸಿವೆ. ಇದೀಗ ಪ್ರಮುಖ ಈ ಕಾಮರ್ಸ್ ಕಂಪೆನಿಗಳಲ್ಲಿ ವಿಶೇಷ ಮಾರಾಟ ಆರಂಭವಾಗಿದೆ. ಇತ್ತೀಚೆಗೆ, ಪ್ರಸಿದ್ಧ ಇ-ಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇಸ್ ಸೇಲ್ ಅನ್ನು ಪ್ರಾರಂಭಿಸಿದೆ.
2/ 8
ಈ ಸೇಲ್ ಇದೇ ಜನವರಿ ತಿಂಗಳ 15 ರಿಂದ 20 ರವರೆಗೆ ಮುಂದುವರಿಯುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 14, ಇಂದಿನಿಂದ ಮಾರಾಟ ಪ್ರಾರಂಭವಾಗಿದೆ. ಈ ಸೇಲ್ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ‘ಭರ್ಜರಿ ಕೊಡುಗೆಗಳನ್ನು ನೀಡಿದೆ.
3/ 8
ಇದೀಗ ಅಮೆಜಾನ್ ವೆಬ್ಸೈಟ್ನಲ್ಲಿ ಅದಿರೇ ಸ್ಮಾರ್ಟ್ ವಾಚ್ಗಳ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ನೀವು ಸ್ಮಾರ್ಟ್ ವಾಚ್ ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಉತ್ತಮ ಸಮಯವಾಗಿದೆ. ಅದೇ ರೀತಿ ಫೈರ್-ಬೋಲ್ಟ್ ನಿಂಜಾ ಕಾಲ್ಪ್ರೋ ಪ್ಲಸ್ 1.83" ಸ್ಮಾರ್ಟ್ ವಾಚ್ ಈ ಮಾರಾಟದಲ್ಲಿ ಭಾರಿ ರಿಯಾಯಿತಿಯನ್ನು ಹೊಂದಿದೆ.
4/ 8
ಈ ಅಧಿರೆ ಸ್ಮಾರ್ಟ್ ವಾಚ್ ನ ಬೆಲೆ ರೂ.19,999 ಆಗಿದೆ. ಅಮೆಜಾನ್ ಸೇಲ್ ನಲ್ಲಿ ಈ ಸ್ಮಾರ್ಟ್ವಾಚ್ ಶೇ.91ರಷ್ಟು ರಿಯಾಯಿತಿ ಘೋಷಿಸಿದೆ. ಅಂದರೆ 18,200 ರೂ.ಗಳ ಭಾರೀ ರಿಯಾಯಿತಿಯೊಂದಿಗೆ ಕೇವಲ 1,799 ರೂ.ಗೆ ಈ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದು.
5/ 8
ನೀವು ಈ ಸ್ಮಾರ್ಟ್ ವಾಚ್ ಅನ್ನು ಎಸ್ಬಿಐ ಕಾರ್ಡ್ನೊಂದಿಗೆ ಖರೀದಿಸಿದರೆ, ನೀವು ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. ಆಗ ಈ ಸ್ಮಾರ್ಟ್ವಾಚ್ನ ಬೆಲೆ ಇನ್ನೂ ರೂ.179 ಕಡಿಮೆಯಾಗುತ್ತದೆ. ನಂತರ ನೀವು ಈ ವಾಚ್ ಅನ್ನು ಕೇವಲ ರೂ.1,620 ಕ್ಕೆ ಖರೀದಿಸಬಹುದು.
6/ 8
ಇನ್ನು ಅಮೆಜಾನ್ನ ರಿಪಬ್ಲಿಕ್ ಡೇ ಸೇಲ್ನ ಈ ಕೊಡುಗೆಯು ಪ್ರಸ್ತುತ ಅಂದರೆ ಜನವರಿ 14 ರಂದು ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿದೆ. ಆದರೆ ಈ ಆಫರ್ ನಾಳೆಯಿಂದ ಎಲ್ಲರಿಗೂ ಲಭ್ಯವಾಗಲಿದೆ.
7/ 8
ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್, ಎಐ ವಾಯ್ಸ್ ಅಸಿಸ್ಟೆನ್ಸ್, 100 ಸ್ಪೋರ್ಟ್ಸ್ ಮೋಡ್ಸ್ IP67 ರೇಟಿಂಗ್, 240x280 ಪಿಕ್ಸೆಲ್ ಹೈ ರೆಸಲ್ಯೂಶನ್ ಈ ರೀತಿ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ
8/ 8
ಇದರ ಜೊತೆಗೆ, ಆರೋಗ್ಯಕ್ಕೆ ಸಂಬಂಧಿಸಿದಂತೆ Spo2 ಮಾನಿಟರಿಂಗ್, ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆಯ ಮೇಲ್ವಿಚಾರಣೆ ಮುಂತಾದ ಹಲವು ಫೀಚರ್ಸ್ಗಳನ್ನು ಒಳಗೊಂಡಿದೆ.